Advertisement
ಈ ಮನೆಗಳಿಗೆ ನೀರು ಪೂರೈಕೆಗೆ ಓವರ್ ಹೆಡ್ ಟ್ಯಾಂಕ್ ಇದ್ದು ಕಾಟಿಪಳ್ಳ ಮೂಲಕ ಮಹಾನಗರ ಪಾಲಿಕೆಯಿಂದ ನೀರು ಪೂರೈಸಲು ಪೈಪ್‌ಲೈನ್ ಅಳವಡಿಕೆಯಾಗಿದೆ. ಆದರೆ ಇಲ್ಲಿ ಅರ್ಧ ಟ್ಯಾಂಕ್ ಕೂಡ ನೀರು ತುಂಬುತ್ತಿಲ್ಲ. ಹೀಗಾಗಿ ಈ ಕಾಲನಿಯಲ್ಲಿ ನಿತ್ಯವೂ ನೀರಿನ ಸಮಸ್ಯೆ ಕಾಡುತ್ತಿದೆ.
ಚೇಳಾಯಿರು ಗ್ರಾಮಕ್ಕೆ ಅಲ್ಪ ದೂರದಲ್ಲಿ ಮೂಲ್ಕಿಗೆ ನೀರು ಸಾಗಿಸುವ ಪೈಪ್‌ಲೈನ್ ಅಳವಡಿಸಲಾಗಿದೆ. ಇದರ ಮೂಲಕವೂ ಈ ಗ್ರಾಮಕ್ಕೆ ನೀರು ಪೂರೈಸಿದರೆ ಸಮಸ್ಯೆ ಕಡಿಮೆಯಾಗುತ್ತಿತ್ತು. ಯೋಜನ ಬದ್ದವಿಲ್ಲದ ಪೂರೈಕೆಯ ಪರಿಣಾಮ ಇಲ್ಲಿನ ಜನ ನಿತ್ಯ ನೀರಿಗಾಗಿ ಕಷ್ಟಪಡುತ್ತಿದ್ದಾರೆ. ಚೇಳಾಯಿರು ಅಭಿವೃದ್ಧಿ ಹೊಂದುತ್ತಿದೆ. ಸಹಜವಾಗಿಯೇ ನೀರಿನ ಪೂರೈಕೆ ಒತ್ತಡವೂ ಹೆಚ್ಚುತ್ತಿದೆ. ಎಂಆರ್ ಪಿಎಲ್ ಕಾಲನಿಯ ನೀರಿನ ಸಮಸ್ಯೆ ಬಗೆಹರಿಸಲು 23 ಲಕ್ಷ ರೂ. ವೆಚ್ಚದಲ್ಲಿ ಬಾವಿ ತೋಡಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಗ್ರಾ.ಪಂ. ಅಧ್ಯಕ್ಷರು ಜಯಾನಂದ.
Related Articles
ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಈ ಭಾಗಕ್ಕೆ ಮೂರು ಲಕ್ಷ ಲೀಟರ್ ನೀರು ಪೂರೈಸುವುದು ಕಷ್ಟ ಎನ್ನಲಾಗುತ್ತಿದೆ. ಈ ಕಾಲನಿಗೆ ನೀರು ಪೂರೈಕೆಗೆ ಬೋರ್‌ವೆಲ್ ಅಳವಡಿಸಲಾಗಿದೆ. ಇಲ್ಲಿ ದಿನಕ್ಕೆ ಅರ್ಧದಿಂದ 1 ಗಂಟೆಗಳ ಕಾಲ ನೀರು ಬರುತ್ತದೆ. ಆದರೆ ನೀರು ಅಷ್ಟೊಂದು ಶುದ್ಧ ಇರುವುದಿಲ್ಲ. 22 ವರ್ಷಗಳಿಂದಲೂ ಈ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಇಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ.
Advertisement
ಬೋರ್‌ವೆಲ್ ನೀರು ಅನಿವಾರ್ಯನೇತ್ರಾವತಿ ನೀರು ಪೂರೈಕೆಗೆ ಪಂಪ್ ಹೌಸ್ ಸಹಿತ ವ್ಯವಸ್ಥೆ ಮಾಡಿ ಪಾಲಿಕೆಗೆ ನಿರ್ವಹಣೆಗೆ ಬಿಟ್ಟು ಕೊಟ್ಟಿತ್ತು. 3 ಲಕ್ಷ ಲೀಟರ್ ನಿತ್ಯ ಬಿಡಬೇಕು ಎಂಬ ಒಪ್ಪಂದವೂ ಆಗಿತ್ತು. ಆದರೆ 50 ಸಾವಿರ ಲೀಟರ್‌ವರೆಗೆ ಬಿಡಲು ಮಾತ್ರ ಪಾಲಿಕೆ ಶಕ್ತವಾಗಿದೆ. ಇದರ ನಡುವೆ ಕಾಲನಿಗೆ ಬಿಡುವ ನೀರು ಕಾಟಿಪಳ್ಳ, ಕೃಷ್ಣಾಪುರ ಪ್ರದೇಶಕ್ಕೂ ಟ್ಯಾಪಿಂಗ್ ಮಾಡಲಾಗುತ್ತದೆ. ಆದ್ದರಿಂದ ಬೋರ್‌ವೆಲ್ ನೀರು ನೀಡುವುದು ನಮಗೆ ಅನಿವಾರ್ಯವಾಗಿದೆ. ಪಾಲಿಕೆಯಿಂದ 2 ದಿನಗಳಿಗೊಮ್ಮೆ ನೀರು ಬರುತ್ತದೆ. ಈಗ 23 ಲಕ್ಷ ರೂ. ವೆಚ್ಚದಲ್ಲಿ ಬಾವಿ ತೋಡಿ ನೀರು ಪೂರೈಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ.
-ವೇಣು ವಿನೋದ್ ಶೆಟ್ಟಿ, ನಿರ್ವಸಿತರ ಹೋರಾಟ ಸಮಿತಿಯ ಮಾಜಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ರಾವ್