Advertisement

ಸರ್ಕಾರಿ ಆಸ್ತಿಗೆ ಕನ್ನ; ತನಿಖೆಯಲ್ಲಿ ಬಯಲು

08:46 PM Mar 27, 2021 | Team Udayavani |

ಮುದ್ದೇಬಿಹಾಳ: ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಡಬೇಕಾಗಿದ್ದ ಸರ್ಕಾರಿ ಉದ್ಯಾನವನ ಜಾಗವನ್ನು ಅಕ್ರಮವಾಗಿ ಮಾರಾಟ ಮಾಡಿ ಖಾಸಗಿ ವ್ಯಕ್ತಿಯ ಹೆಸರಲ್ಲಿ ಉತಾರ ಸೃಷ್ಟಿಸಿರುವ ಹಗರಣ ಮುದ್ದೇಬಿಹಾಳ ತಾಲೂಕು ಬಿದರಕುಂದಿ ಗ್ರಾಪಂನಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ತನಿಖೆಗೆ ನೇಮಿಸಿದ್ದ ತನಿಖಾ ಧಿಕಾರಿ ನೀಡಿರುವ ವರದಿ ಸಂಚಲನ ಮೂಡಿಸಿದೆ.

Advertisement

ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಬಿನ್‌ ಶೇತ್ಕಿ ಪ್ಲಾಟ್‌ಗಳಲ್ಲಿ ನಿಯಮಾನುಸಾರ ಸಾರ್ವಜನಿಕ ಉದ್ದೇಶಕ್ಕಾಗಿ, ಉದ್ಯಾನವನಕ್ಕಾಗಿ ಮೀಸಲಿಡಬೇಕಿದ್ದ ಜಾಗಗಳನ್ನು ಗ್ರಾಪಂನ ಹಿಂದಿನ ಅಧ್ಯಕ್ಷ, ಪಿಡಿಒ ಸೇರಿ ಖಾಸಗಿಯವರಿಗೆ ಮಾರಾಟ ಮಾಡಿ ಅಕ್ರಮ ಎಸಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕೆಲ ದಿನಗಳ ಹಿಂದೆ ಗ್ರಾಪಂನ ಕೆಲ ಸದಸ್ಯರು, ಗ್ರಾಮಸ್ಥರು ತಾಪಂ ಇಇ, ಜಿಪಂ ಸಿಇಒಗೆ ಮನವಿ ಸಲ್ಲಿಸಿದ್ದರು.

ಮನವಿಗೆ ಸ್ಪಂ ದಿಸಿದ್ದ ತಾಪಂ ಇಒ ಅವರು ಜಿಪಂ ಸಿಇಒ ಸೂಚನೆ ಮೇರೆಗೆ ಮುದ್ದೇಬಿಹಾಳದ ಕೈಗಾರಿಕಾ ವಿಸ್ತರಣಾಧಿ  ಕಾರಿ ಸಂತೋಷ ಕುಂಬಾರ ಅವರನ್ನು ತನಿಖಾ  ಧಿಕಾರಿಯಾಗಿ ನೇಮಿಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದರು. ಅದರಂತೆ ಮಾ.15ರಂದು ತನಿಖಾ ಧಿಕಾರಿ ಗ್ರಾಪಂಗೆ ಭೇಟಿ ನೀಡಿ ಅಗತ್ಯ ದಾಖಲೆ ಪಡೆದು, ಹಾಲಿ ಪಿಡಿಒ ಅವರಿಂದ ಮಾಹಿತಿ ಸಂಗ್ರಹಿಸಿದ್ದರು. ತನಿಖಾ ವರದಿಯನ್ನು ಮಾ.22ರಂದು ತಾಪಂ ಇಒಗೆ ಸಲ್ಲಿಸಿದ್ದರು.

ವರದಿಯಲ್ಲೇನಿದೆ?: ಬಿದರಕುಂದಿ ಗ್ರಾಪಂನಲ್ಲಿ ಸರ್ಕಾರಿ ಆಸ್ತಿ ಕಬಳಿಸಿರುವ ಕುರಿತು ತನಿಖೆ ಪೂರ್ಣಗೊಂಡಿದೆ. ನಾನು ಖುದ್ದಾಗಿ ಗ್ರಾಪಂಗೆ ತೆರಳಿ ನಮೂನೆ 9ನ್ನು ಪರಿಶೀಲಿಸಿದ್ದೇನೆ. ಕೆಲ ಸದಸ್ಯರು, ಗ್ರಾಮಸ್ಥರು ಆರೋಪಿಸಿರುವ ರಿಸನಂಬರ್‌ 146/ಅ/5ರ ಆಸ್ತಿ ನಂಬರ್‌ 2282/44 ಪ್ಲಾಟಿಗೆ ಸಂಬಂ ಸಿದಂತೆ ನಮೂನೆ 9ರಲ್ಲಿ ಉದ್ಯಾನವನ ಎಂದೇ ದಾಖಲಾಗಿದೆ. ಆದರೆ ಸಿಂದಗಿಯ ಮಲ್ಲಪ್ಪ ಕಲ್ಲಪ್ಪ ಕಟ್ಟಿಮನಿ ಎಂಬುವರ ಹೆಸರಿನಲ್ಲಿ ಸದರಿ ಪ್ಲಾಟ್‌ (2282/44) ದಿನಾಂಕ 6-12-2015ರಂದು ರಾತ್ರಿ 9.46ಕ್ಕೆ ಪಿಡಿಒ ಗುಂಡಪ್ಪ ಐ.ಕುಂಬಾರ ಇವರ ಡಿಜಿಟಲ್‌ ಸಹಿಯೊಂದಿಗೆ ಉತಾರ ಸೃಷ್ಟಿಯಾಗಿರುವುದು ಕಂಡು ಬಂದಿದೆ. ಈ ಕುರಿತು ಹಾಲಿ ಪಿಡಿಒ ಅವರನ್ನು ವಿಚಾರಿಸಿದಾಗ ಆ ದಿನಾಂಕದಂದು ಈ ಪಂಚಾಯಿತಿಗೆ ಗುಂಡಪ್ಪ ಕುಂಬಾರ ಎಂಬುವರು ಪಿಡಿಒ ಎಂದು ಕಾರ್ಯ ನಿರ್ವಹಿಸಿರುವುದಿಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆ ಸೃಷ್ಟಿಯಾದ ಉತಾರಗಳು ಮೇಲ್ನೋಟಕ್ಕೆ ಬೇ ಕಾಯಿದೆಯಿಂದ ಸೃಷ್ಟಿಯಾಗಿರುವುದು ಕಂಡು ಬಂದಿದೆ. ಈ ಕುರಿತ ತಪಾಸಣಾ ವರದಿ ಸಲ್ಲಿಸುತ್ತಿದ್ದು ಮುಂದಿನ ಸೂಕ್ತ ಕ್ರಮ ಕೈಕೊಳ್ಳಬೇಕೆಂದು ತನಿಖಾಧಿಕಾರಿ ಸಂತೋಷ ಕುಂಬಾರ ವರದಿಯಲ್ಲಿ ತಿಳಿಸಿದ್ದಾರೆ.

ಎಂಎಲ್‌ಸಿಗೆ ಮನವಿ : ತನಿಖೆಯಲ್ಲಿ ಹಗರಣ ಬೆಳಕಿಗೆ ಬಂದದ್ದನ್ನು ಗಂಭೀರವಾಗಿ ಪರಿಗಣಿಸಿರುವ ಅದೇ ಗ್ರಾಪಂ ಸದಸ್ಯೆ ವಿಜಯಲಕ್ಷ್ಮೀ ಅವರ ಪತಿ ಸಿದ್ದಪ್ಪ ಚಲವಾದಿಯವರು ಕೆಲ ಸದಸ್ಯರೊಂದಿಗೆ ಸೇರಿಕೊಂಡು ಈ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿ ಮಾ.25ರಂದು ಇಲ್ಲಿಗೆ ಬಂದಿದ್ದ ಸ್ಥಳೀಯ ಸಂಸ್ಥೆ ಪ್ರತಿನಿಧಿ ಸುವ ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲರಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ಹಿಂದಿನ ಅಧ್ಯಕ್ಷ, ಪಿಡಿಒ ಸೇರಿ ಮಲಕಪ್ಪ ಕಟ್ಟಿಮನಿ ಎಂಬುವರ ಹೆಸರಲ್ಲಿ ದಾಖಲಿಸಿ ಆ ನಂತರ ಶೇಖಪ್ಪ ಬೀರಪ್ಪ ಹೊನಕೇರಿ ಎಂಬುವರಿಗೆ ವರ್ಗಾಯಿಸಿದ್ದಾರೆ. ಹೊನಕೇರಿ ಇವರು ಇದೇ ಗ್ರಾಪಂನ ಹಿಂದಿನ ಅಧ್ಯಕ್ಷ, ಹಾಲಿ ಸದಸ್ಯ ಮಲ್ಲಪ್ಪ ದೊಡಮನಿ ಇವರ ಮಾವನಾಗಿದ್ದಾರೆ. ಅಳಿಯನೇ ತನ್ನ ಮಾವನ ಹೆಸರಲ್ಲಿ ಸರ್ಕಾರಿ ಆಸ್ತಿ ಖರೀದಿಸಿ ಅಧಿ ಕಾರ ದುರುಪಯೋಗ ಪಡಿಸಿಕೊಂಡಿದ್ದು ಖಚಿತವಾಗಿದೆ. ಆದ್ದರಿಂದ ದೊಡಮನಿ ಇವರ ಸದಸ್ಯತ್ವ ರದ್ದುಪಡಿಸಲು ಕ್ರಮ ಕೈಕೊಳ್ಳಬೇಕು. ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು, ಸರ್ಕಾರಿ ಆಸ್ತಿ ಲಪಟಾಯಿಸಿದವರ ವಿರುದ್ಧ ಕ್ರಮ ಜರುಗಿಸಬೇಕು. ಇ-ಸ್ವತ್ತು ಉತಾರೆ ಕಾನೂನು ಪ್ರಕಾರ ಬಿದರಕುಂದಿ ಗ್ರಾಪಂನಲ್ಲಿ ಮಾಡಿಕೊಳ್ಳದೆ ಬೇರೆ ಪಂಚಾಯಿತಿಯಲ್ಲಿ ಕೆಲಸ ಮಾಡುವ ಗುಂಡಪ್ಪ ಕುಂಬಾರ ಇವರನ್ನು ಉಪಯೋಗಿಸಿಕೊಂಡು, ಅವರ ಬೆರಳಚ್ಚು ಬಳಸಿ ಇ-ಸ್ವತ್ತು ಉತಾರೆ ಪಡೆದಿರುವುದು ಅಪರಾಧವಾಗಿದ್ದು ಗಂಭೀರವಾಗಿ ಪರಿಗ ಣಿಸಬೇಕು. ಆಸ್ತಿ ನಂಬರ್‌ 2282/44ನ್ನು ವಶಪಡಿ ಸಿಕೊಂಡು ಅಲ್ಲಿ ಉದ್ಯಾನ ನಿರ್ಮಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next