Advertisement

35 ವರ್ಷಗಳ “ಶನಿವಾರ ಮುಷ್ಕರ’: ವಕೀಲರಿಗೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ

10:07 AM Feb 29, 2020 | Sriram |

ನವದೆಹಲಿ:ಉತ್ತರಾಖಂಡದ ಜಿಲ್ಲಾ ಕೋರ್ಟ್‌ಗಳಲ್ಲಿ ಕಳೆದ 35 ವರ್ಷಗಳಿಂದಲೂ ಏನಾದರೊಂದು ನೆಪ ಹುಡುಕಿಕೊಂಡು ಪ್ರತಿ ಶನಿವಾರ ಮುಷ್ಕರ ಕೈಗೊಳ್ಳುವ ವಕೀಲರಿಗೆ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದೆ. ಇನ್ನು ಮುಂದೆ ಈ ರೀತಿಯ ವರ್ತನೆಯನ್ನು ಮುಂದುವರಿಸಿದರೆ, ನ್ಯಾಯಾಂಗ ನಿಂದನೆಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಸಿದೆ. ಅಲ್ಲದೆ, ಇಂಥ ಮುಷ್ಕರಗಳು ಕಾನೂನುಬಾಹಿರ ಎಂದೂ ಅಭಿಪ್ರಾಯಪಟ್ಟಿದೆ.

Advertisement

ಜತೆಗೆ, ವಕೀಲರ ಇಂತಹ ಮುಷ್ಕರಗಳು ಹಾಗೂ ಕೋರ್ಟ್‌ ಕಾರ್ಯಕಲಾಪದಿಂದ ಹೊರಗುಳಿಯುವಂಥ ಸಮಸ್ಯೆಗಳನ್ನು ಪರಿಹರಿಸಲು ಏನೇನು ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಸಲಹೆಗಳನ್ನು 6 ವಾರಗಳೊಳಗೆ ನೀಡುವಂತೆ ಭಾರತೀಯ ಬಾರ್‌ ಕೌನ್ಸಿಲ್‌ ಹಾಗೂ ಎಲ್ಲ ರಾಜ್ಯಗಳ ಬೌರ್‌ ಕೌನ್ಸಿಲ್‌ಗ‌ಳಿಗೆ ಸುಪ್ರೀ ಂಕೋರ್ಟ್‌ ಸೂಚನೆ ನೀಡಿದೆ.

“ಪಾಕಿಸ್ತಾನದಲ್ಲಿ ಬಾಂಬ್‌ ಸ್ಫೋಟಗೊಂಡಿದೆ’,”ನೇಪಾಳದಲ್ಲಿ ಭೂಕಂಪ ಆಗಿದೆ’, “ಯಾರಿಗೋ ಸಾಂತ್ವನ ಹೇಳಬೇಕಿದೆ’… ಎಂಬಿತ್ಯಾದಿ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರತಿ ಶನಿವಾರ ವಕೀಲರು ಉತ್ತರಾಖಂಡದ 3 ಜಿಲ್ಲೆಗಳಲ್ಲಿ 35 ವರ್ಷಗಳಿಂದಲೂ ಪ್ರತಿಭಟನೆ ಕೈಗೊಳ್ಳುತ್ತಿದ್ದರು. ಇದರ ವಿರುದ್ಧ ಉತ್ತರಾಖಂಡ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಡೆಹ್ರಾಡೂನ್‌ ಬಾರ್‌ ಅಸೋಸಿಯೇಷನ್‌ ಸುಪ್ರೀಂ ಮೆಟ್ಟಿಲೇರಿತ್ತು. ಈಗ ಈ ಅರ್ಜಿ ವಜಾ ಮಾಡಿರುವ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ತೀರ್ಪನ್ನು ಎತ್ತಿಹಿಡಿದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next