Advertisement

ಕೋವಿಡ್: ಪುರಿ ರಥಯಾತ್ರೆಗೆ ಸುಪ್ರೀಂ ತಡೆ-ಜಗನ್ನಾಥ ದೇವರು ಕೂಡಾ ಕ್ಷಮಿಸಲ್ಲ: ಸಿಜೆಐ

05:13 PM Jun 18, 2020 | Nagendra Trasi |

ನವದೆಹಲಿ:ಮಹಾಮಾರಿ ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಜಗತ್ಪ್ರಸಿದ್ಧ ಪುರಿ ಜಗನ್ನಾಥ ರಥೋತ್ಸವ ಹಾಗೂ ಎಲ್ಲಾ ಧಾರ್ಮಿಕ ಚಟುವಟಿಕೆಗೆ ಸುಪ್ರೀಂಕೋರ್ಟ್ ಗುರುವಾರ ತಡೆ ನೀಡಿದೆ. ನಿಗದಿಯಂತೆ ಜೂನ್ 23ರಂದು ಒಡಿಶಾದ ಪುರಿ ಜಗನ್ನಾಥ ರಥೋತ್ಸವ ನಡೆಯಬೇಕಾಗಿತ್ತು.

Advertisement

“ಒಂದು ವೇಳೆ ನಾವು ರಥೋತ್ಸವ ನಡೆಸಲು ಅನುಮತಿ ನೀಡಿದರೆ ಪುರಿ ಜಗನ್ನಾಥ ಕೂಡಾ ನಮ್ಮನ್ನು ಕ್ಷಮಿಸಲ್ಲ” ಎಂದು ಸುಪ್ರೀಂಕೋರ್ಟ್ ಸಿಜೆಐ ಎಸ್ ಎ ಬೋಬ್ಡೆ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

ಕೋವಿಡ್ ನಂತಹ ವೈರಸ್ ಹರಡುತ್ತಿರುವ ಸಂದರ್ಭದಲ್ಲಿ ಒಂದೆಡೆ ಭಾರೀ ಪ್ರಮಾಣದಲ್ಲಿ ಜನರು ಸೇರಬಾರದು. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿ ಹಾಗೂ ನಾಗರಿಕರ ಸುರಕ್ಷತೆಯ ನಿಟ್ಟಿನಲ್ಲಿ ಈ ವರ್ಷ ಪುರಿ ರಥಯಾತ್ರೆಗೆ ಅನುಮತಿ ನೀಡುವುದಿಲ್ಲ ಎಂದು ಸುಪ್ರೀಂ ಸ್ಪಷ್ಟಪಡಿಸಿದೆ.

Advertisement

2020ನೇ ಇಸವಿಯಲ್ಲಿ ಒಡಿಶಾದ ಯಾವ ಭಾಗದಲ್ಲಿಯೂ ರಥಯಾತ್ರೆ ನಡೆಸುವಂತಿಲ್ಲ. ಅತೀ ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರುವುದನ್ನು ತಡೆಯುವ ಅನಿವಾರ್ಯತೆ ಇದೆ ಎಂದು ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next