Advertisement
ಎಸ್ಸಿ-ಎಸ್ಟಿ ಸಮುದಾಯಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆ ಬಗ್ಗೆ ಹಲವು ಅಧ್ಯಯನ ವರದಿ, ಆಯೋಗ, ಸಮಿತಿಗಳ ಶಿಫಾರಸುಗಳನ್ನು ಉಲ್ಲೇಖೀಸಿ ಸರಕಾರ ತನ್ನ ನಿರ್ಧಾರಕ್ಕೆ ಬಲ ಬರುವಂತೆ ಮಾಡಿದೆ.
Related Articles
– ಸಂವಿಧಾನದ ಅನುಚ್ಛೇದ 341 ಮತ್ತು 342 ಇದರ ಮೇರೆಗೆ ರಾಷ್ಟ್ರಪತಿಯವರು ಕೆಲವು ಜಾತಿಗಳನ್ನು ಎಸ್ಸಿ, ಎಸ್ಟಿ ಎಂದು ಘೋಷಿಸಿರುವುದು. ಇನ್ನೂ ಕೆಲವು ಸಮುದಾಯಗಳನ್ನು ಸೇರಿಸಿದ ಬಳಿಕ ರಾಜ್ಯದ ಎಸ್ಸಿ-ಎಸ್ಟಿಗಳ ಒಟ್ಟು ಜನಸಂಖ್ಯೆ ತ್ವರಿತಗತಿಯಲ್ಲಿ ಹೆಚ್ಚಾಗಿರುವುದು.
– 1976ರ ಎಸ್ಸಿ-ಎಸ್ಟಿ ಆದೇಶಗಳ (ತಿದ್ದುಪಡಿ) ಅನುಸಾರ ಜಾತಿಗಳಿಗೆ ಹಾಕಲಾದ ಭೌಗೋಳಿಕ ಮಿತಿಗಳನ್ನು ತೆಗೆದುಹಾಕಿದ್ದು, ಇದೂ ಸಹ ಕರ್ನಾಟಕದಲ್ಲಿ ಎಸ್ಸಿ-ಎಸ್ಟಿ ಜನಸಂಖ್ಯೆ ಅಸಾಧಾರಣ ಹೆಚ್ಚಳಕ್ಕೆ ಕಾರಣವಾಗಿದೆ.
– ಕರ್ನಾಟಕ ರಾಜ್ಯದಲ್ಲಿ 1955ರಿಂದ ಎಸ್ಸಿ-ಎಸ್ಟಿಗಳಿಗೆ ಶೇ.18ರಷ್ಟು ಸಂಯೋಜಿತ ಮೀಸಲಾತಿ ನೀಡಿದ್ದು, 1958ರಿಂದ ಎಸ್ಸಿಗಳಿಗೆ ಶೇ.15 ಮತ್ತು ಎಸ್ಟಿಗಳಿಗೆ ಶೇ.3 ಮೀಸಲಾತಿ ಉಳಿದುಕೊಂಡು ಬಂದಿದೆ. 2002ರಿಂದ ಇದೇ ಮೀಸಲಾತಿ ಮುಂದುವರಿಸಿಕೊಂಡು ಬರಲಾಗಿದೆ.
– ಶೇ.74ರಷ್ಟು ಬುಡಕಟ್ಟು ಸಮುದಾಯಗಳು ಅಗೋಚರವಾಗಿರುವುದು ಮತ್ತು ಸಾಕ್ಷರತೆ ಪ್ರಮಾಣ ಶೇ.3ಕ್ಕಿಂತ ಕಡಿಮೆ ಇದೆ. ಎಸ್ಸಿ-ಎಸ್ಟಿ ಮೀಸಲಾತಿ ಇತರ ರಾಜ್ಯಗಳಲ್ಲಿ ಕರ್ನಾಟಕಕ್ಕಿಂತ ಹೆಚ್ಚಿದೆ. ಎಸ್ಸಿ-ಎಸ್ಟಿಗಳಲ್ಲಿ ಅತ್ಯಂತ ವಂಚಿತ ವರ್ಗ ಗಳಿಗೆ ಮೀಸಲಾತಿ ಅಗತ್ಯವಿದೆ ಎಂದು ರಾಷ್ಟ್ರೀಯ ಕಾನೂನು ಶಾಲೆ ಅಧ್ಯಯನ ವರದಿ ಹೇಳಿದೆ.
-ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಗಳ ಏಳಿಗೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಅಧಿಕಾರವಿದೆ ಎಂದು ಸಂವಿಧಾನದ 15ನೇ ಅನುಚ್ಛೇದದ 4ನೇ ಖಂಡವು ಹೇಳಿದೆ.
– ರಾಜ್ಯದ ಅಧೀನ ಸೇವೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಇಲ್ಲದ ವರ್ಗಗಳಿಗೆ ಮೀಸಲಾತಿ ಒದಗಿಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬಹುದು ಎಂದು ಸಂವಿಧಾನದ ಅನುಚ್ಛೇದ 16 (4) ಹೇಳಿದೆ.
– ಶೇ.50ರ ಮೀಸಲಾತಿ ಪರಿಮಿತಿಯನ್ನು ಅನೇಕ ರಾಜ್ಯಗಳು ಕಾಲಕಾಲಕ್ಕೆ ಹೆಚ್ಚಿಸಿರುವುದು.
Advertisement
ಹೈಕೋರ್ಟ್ ನಿರ್ದೇಶನಸಾಂವಿಧಾನಿಕ ಆದೇಶದಂತೆ ಸಾರ್ವ ಜನಿಕ ಉದ್ಯೋಗ ಶಿಕ್ಷಣದಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕೆಂದು ಆ ಸಮುದಾಯಗಳು ನಿರಂತರವಾಗಿ ಬೇಡಿಕೆ ಇಡುತ್ತಲಿತ್ತು. ಈ ನಡುವೆ ನಾಯಕ ವಿದ್ಯಾರ್ಥಿ ಸಂಘ ಹೈಕೋರ್ಟ್ ಮೊರೆ ಹೋಗಿತ್ತು. ಮೀಸಲು ಹೆಚ್ಚಿಸಲು ಸಂಘವು ದಾಖ ಲಿಸಿದ ಮನವಿ ಪರಿಗಣಿಸುವಂತೆ 2015 ರಲ್ಲಿ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿತ್ತು. ಅದರಂತೆ ಪ್ರಾಯೋಗಿಕ ಜನ್ಯ’ (ಎಂಪಿರಿಕಲ್ ) ದತ್ತಾಂಶ ಸಂಗ್ರಹಿಸಲು ಸರಕಾರ ನ್ಯಾ| ನಾಗಮೋಹನ್‌ದಾಸ್ ಆಯೋಗ ರಚಿಸಿತ್ತು. ಇದರ ವರದಿ ಅನುಷ್ಠಾನ ಅವಲೋಕನೆಗೆ ನ್ಯಾ| ಸುಭಾಷ್ ಅಡಿ ಸಮಿತಿ ರಚಿಸಲಾಗಿತ್ತು. ಇವುಗಳ ವರದಿ ಆಧರಿಸಿ ಮೀಸಲಾತಿ ಹೆಚ್ಚಿಸಲಾಗಿದೆ.