Advertisement

ಅಸ್ಸಾಂ ಎನ್‌ಆರ್‌ಸಿ ಗಡುವು ವಿಸ್ತರಣೆ ಮಾಡುವುದಿಲ್ಲ: ಕೇಂದ್ರ ಸುಪ್ರೀಂ ಕೋರ್ಟ್‌

09:46 AM May 09, 2019 | Team Udayavani |

ಹೊಸದಿಲ್ಲಿ : ಅಸ್ಸಾಂ ಎನ್‌ಆರ್‌ಸಿ (ನ್ಯಾಶನಲ್‌ ರಿಜಿಸ್ಟರ್‌ ಆಫ್ ಸಿಟಿಜನ್ಸ್‌) ಅನ್ನು ಅಂತಿಮಗೊಳಿಸುವ ಜುಲೈ 31ರ ಗಡುವನ್ನು ತಾನಿನ್ನು ವಿಸ್ತರಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಇಂದು ಕೇಂದ್ರ ಸರಕಾರಕ್ಕೆ ಸ್ಪಷ್ಟಪಡಿಸಿದೆ.

Advertisement

ಅಸ್ಸಾಂ ಎನ್‌ಆರ್‌ಸಿ ದಾಖಲೆ ಪತ್ರಕ್ಕೆ ತಪ್ಪಾಗಿ ಸೇರಿಸಲ್ಪಟ್ಟ ಅಥವಾ ಸೇರಿಸದೆ ಉಳಿದು ಹೋಗಿರುವ ಪೌರರ ವಿಷಯದಲ್ಲಿನ ಆಕ್ಷೇಪ ಮತ್ತು ಕೋರಿಕೆಗಳನ್ನು ನಿರ್ವಹಿಸಲು ಸುಪ್ರೀಂ ಕೋರ್ಟ್‌ ಅಸ್ಸಾಂ ಎನ್‌ಆರ್‌ಸಿ ಸಂಚಾಲಕ ಪ್ರತೀಕ್‌ ಹಜೇಲ ಅವರಿಗೆ ಪೂರ್ಣ ಸ್ವಾತಂತ್ರ್ಯ ನೀಡಿತು. ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಮತ್ತು ಜಸ್ಟಿಸ್‌ ಆರ್‌ ಎಫ್ ನಾರೀಮನ್‌ ಅವರನ್ನು ಪೀಠವು ಒಳಗೊಂಡಿತ್ತು.

2018ರ ಜು.30ರಂದು ಪ್ರಕಟಗೊಂಡಿದ್ದ ಕರಡು ಅಸ್ಸಾಂ ಎನ್‌ಆರ್‌ಸಿಯಲ್ಲಿ 3.29 ಕೋಟಿ ಜನರ ಪೈಕಿ 2.89 ಕೋಟಿ ಜನರ ಹೆಸರು ಇತ್ತು. 40,70,707 ಜನರ ಹೆಸರು ಪಟ್ಟಿಯಿಂದ ಬಿಟ್ಟು ಹೋಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next