Advertisement

ಮೇ 6ರೊಳಗೆ PM ಮೋದಿ, ಅಮಿತ್‌ ಶಾ ದೂರುಗಳ ಬಗ್ಗೆ ನಿರ್ಧಾರ: ಚು.ಆ.ಕ್ಕೆ ಸುಪ್ರೀಂ

09:55 AM May 03, 2019 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ವಿರುದ್ಧದ ಕಾಂಗ್ರೆಸ್‌ನ ಎಲ್ಲ ದೂರುಗಳ ಬಗ್ಗೆ ಮೇ 6ರ ಸೋಮವಾರದೊಳಗೆ ನಿರ್ಧರಿಸುವಂತೆ ಸುಪ್ರೀಂ ಕೋರ್ಟ್‌ ಇಂದು ಗುರುವಾರ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.

Advertisement

ಮೋದಿ ಮತು ಅಮಿತ್‌ ಶಾ ವಿರುದ್ಧದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ದೂರುಗಳ ಮೇಲಿನ ನಿರ್ಧಾರವನ್ನು ಚುನಾವಣಾ ಆಯೋಗ ವಿಳಂಬಿಸುತ್ತಿದೆ ಎಂದು ಕಳೆದ ವಾರ ಕಾಂಗ್ರೆಸ್‌ ಸುಪ್ರೀಂ ಕೋರ್ಟಿಗೆ ಹೇಳಿತ್ತು. ಮಾತ್ರವಲ್ಲದೆ ಚು. ಆಯೋಗ ನೀತಿ ಸಂಹಿತೆ ಉಲ್ಲಂಘನೆ ವಿಚಾರದಲ್ಲಿ ವಿರೋಧ ಪಕ್ಷಗಳ ನಾಯಕರನ್ನು ದಂಡಿಸುವಲ್ಲಿ ತಾರತಮ್ಯ ಮಾಡುತ್ತಿದೆ ಎಂದೂ ಕಾಂಗ್ರೆಸ್‌ ಆರೋಪಿಸಿತ್ತು.

ಚುನಾವಣಾ ಆಯೋಗ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ವಿರುದ್ಧದ 11 ದೂರುಗಳ ಪೈಕಿ ಈ ವರೆಗೆ ಕೇವಲ 2 ದೂರುಗಳ ಬಗ್ಗೆ ಮಾತ್ರವೇ ನಿರ್ಧಾರ ಕೈಗೊಂಡಿದೆ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಅಭಿಷೇಕ್‌ ಮನು ಸಿಂಘವಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next