Advertisement

ಎಸ್‌ಬಿಎಸ್‌ಪಿ ಇಬ್ಬರು ಶಾಸಕರಿಂದ ಅಡ್ಡ ಮತದಾನ: ನೊಟೀಸ್‌

03:37 PM Mar 24, 2018 | udayavani editorial |

ಲಕ್ನೋ : ಸುಹೇಲ್‌ದೇವ್‌ ಭಾರತೀಯ ಸಮಾಜ ಪಾರ್ಟಿ (ಎಸ್‌ಬಿಎಸ್‌ಪಿ) ಅಧ್ಯಕ್ಷ ಓಂ ಪ್ರಕಾಶ್‌ ರಾಜಭಾರ್‌ ಅವರು ರಾಜ್ಯಸಭೆಗೆ ನಿನ್ನೆ ನಡೆದಿದ್ದ ಚುನಾವಣೆಯಲ್ಲಿ ತನ್ನ ಪಕ್ಷದ ಇಬ್ಬರು ಶಾಸಕರು ಅಡ್ಡ ಮತದಾನ ಮಾಡಿರುವುದಕ್ಕೆ ಅವರಿಂದ ವಿವರಣೆ ಕೋರಿ ನೊಟೀಸ್‌ ಜಾರಿ ಮಾಡಿದ್ದಾರೆ.

Advertisement

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗಿನ ಈಚಿನ ಮಾತುಕತೆಯ ವೇಳೆ ತನ್ನ ಪಕ್ಷದ ನಾಲ್ವರು ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವರೆಂದು ಭರವಸೆ ಕೊಟ್ಟಿದ್ದರು.  

ಒಂದು ವರ್ಗದ ಮಾಧ್ಯಮದಲ್ಲಿ ನಮ್ಮ ಪಕ್ಷದ ಇಬ್ಬರು ಶಾಸಕರಿಂದ ಅಡ್ಡ ಮತದಾನ ನಡೆದಿದೆ ಎಂಬ ವರದಿಗಳು ಪ್ರಕಟವಾಗಿರುವುದನ್ನು  ಕಂಡು ನಾನು ಶಾಸಕರಾದ ಕೈಲಾಶ್‌ ನಾಥ್‌ ಸೋನೇಕರ್‌ ಮತ್ತು ತ್ರಿವೇಣಿ ರಾಮ್‌ ಅವರಿಂದ ವಿವರಣೆ ಕೋರಿ  ನೊಟೀಸ್‌ ಜಾರಿ ಮಾಡಿದ್ದೇನೆ ಎಂದು ರಾಜಭಾರ್‌ ಹೇಳಿದರು. 

ರಾಜಭಾರ್‌ ಅವರು ಉತ್ತರ ಪ್ರದೇಶ ಸರಕಾರದಲ್ಲಿ ಕ್ಯಾಬಿನೆಟ್‌ ಸಚಿವರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next