ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) 2021-22ನೇ ಆರ್ಥಿಕ ವರ್ಷದ ಕೊನೆಯ ತ್ತೈಮಾಸಿಕದ ವರದಿ ಬಿಡುಗಡೆ ಮಾಡಿದೆ.
ವರದಿ ಪ್ರಕಾರ ಮಾ.31ರಂದು ಅಂತ್ಯವಾದ ತ್ತೈಮಾಸಿಕದಲ್ಲಿ ಸಂಸ್ಥೆ 9,114 ಕೋಟಿ ರೂ. ಲಾಭ ದಾಖಲಿಸಿದೆ.
2020-21ನೇ ಆರ್ಥಿಕ ವರ್ಷದ ಕೊನೆಯ ತ್ತೈಮಾಸಿಕದಲ್ಲಿ ಸಂಸ್ಥೆ 6,451 ಕೋಟಿ ರೂ. ಲಾಭ ಗಳಿಸಿದ್ದು, ಅದಕ್ಕೆ ಹೋಲಿಸಿದರೆ 2021-22ರ ಕೊನೆಯ ತ್ತೈಮಾಸಿಕದಲ್ಲಿ ಲಾಭ ಶೇ.41 ಹೆಚ್ಚಾಗಿದೆ.
ಇದೇ ಅವಧಿಯಲ್ಲಿ ಸಂಸ್ಥೆ ಒಟ್ಟಾರೆಯಾಗಿ 82,613 ಕೋಟಿ ರೂ. ಆದಾಯ ಗಳಿಸಿದೆ. 2021ರ ಇದೇ ಅವಧಿಯಲ್ಲಿ ಅದು 81,327 ಕೋಟಿ ರೂ. ಆಗಿತ್ತು.
ಇದನ್ನೂ ಓದಿ:ವಿಜಯಪುರದಲ್ಲಿ ಒಂದೇ ದಿನ 20 ಮಿ.ಮೀ. ಮಳೆ: ಸಿಡಿಲಿಗೆ ಹಸು, ಆರು ಮೇಕೆ ಬಲಿ
ಒಟ್ಟಾರೆಯಾಗಿ 2021-22ನೇ ಆರ್ಥಿಕ ವರ್ಷದಲ್ಲಿ ಎಸ್‌ಬಿಐ 31,676 ಕೋಟಿ ರೂ. ಲಾಭ ಗಳಿಸಿದ್ದು ಅದು ಅದರ ಹಿಂದಿನ ವರ್ಷಕ್ಕಿಂತ ಶೇ.55 ಹೆಚ್ಚಿದೆ.