ಹುಬ್ಬಳ್ಳಿ: ಭಾರತೀಯ ಸ್ಟೇಟ್ ಬ್ಯಾಂಕ್ ವಿವಿಧ ಸೇವೆ ಹಾಗೂ ಗ್ರಾಹಕಸ್ನೇಹಿ ವಾತಾವರಣ ಸೃಷ್ಟಿಯೊಂದಿಗೆ ಇತರೆ ಬ್ಯಾಂಕ್‌ಗಳಿಗೆ ಮಾದರಿಯಾಗಿದೆ ಎಂದು ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕ ಬಸಂತಕುಮಾರ ಪಾಟೀಲ ಹೇಳಿದರು.
ಇಲ್ಲಿನ ರಾಯ್ಕರ್ ಮೈದಾನದಲ್ಲಿ ಆಯೋಜಿಸಿರುವ ಎಸ್‌ಬಿಐ ಸಾಲ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಎಸ್‌ಬಿಐ ಬ್ಯಾಂಕ್‌ಗಳ ಪಿತಾಮಹ ಎನಿಸಿದೆ. ಸಾಲ ಉತ್ಸವದ ಮೂಲಕ ಬ್ಯಾಂಕ್ ಮನೆ ಹಾಗೂ ಕಾರು ಖರೀದಿ ಸಾಲ ನೀಡಿಕೆಗೆ ಮುಂದಾಗಿರುವುದು ಶ್ಲಾಘನಿಯ ಎಂದರು.
ಕ್ರೆಡೈ ಹು-ಧಾ ಅಧ್ಯಕ್ಷ ಪ್ರದೀಪ ರಾಯ್ಕರ್ ಮಾತನಾಡಿ, ವಹಿವಾಟು, ಬೆಳವಣಿಗೆ ಹಾಗೂ ಸಿಎಸ್‌ಆರ್ ನಿಧಿ ಬಳಕೆ ಕುರಿತಾಗಿ ಎಸ್‌ಬಿಐನೊಂದಿಗೆ ಕ್ರೆಡೈ ರಾಷ್ಟ್ರಮಟ್ಟದಲ್ಲಿ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿದೆ ಎಂದರು. ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ(ರೇರಾ) ಜಾರಿಯನ್ನು ಕ್ರೆಡೈ ಸ್ವಾಗತಿಸಿದೆ.
ಕ್ರೆಡೈನ ಬಹುತೇಕ ಸದಸ್ಯರು ರೇರಾ ಅಡಿ ನೋಂದಣಿ ಮಾಡಿಸಿದ್ದಾರೆ. ರೇರಾದಿಂದ ಅನಧಿಕೃತ ವ್ಯಕ್ತಿಗಳಿಗೆ ತೊಂದರೆ ಆಗಲಿದೆ. ಆದರೆ, ಗ್ರಾಹಕರಿಗೆ ಸಕಾಲಿಕ, ಗುಣಮಟ್ಟದ ಹಾಗೂ ಪಾರದರ್ಶಕ ವಹಿವಾಟಿಗೆ ಸಹಕಾರಿ ಆಗಲಿದೆ ಎಂದರು. ಎಸ್‌ಬಿಐ ಬ್ಯಾಂಕ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ಎಂ. ಫಾರೂಕ್ ಶಹಬ್ ಮಾತನಾಡಿದರು.
ಮನೆ ಹಾಗೂ ಕಾರು ಸಾಲ ಮಂಜೂರಾತಿ ಪತ್ರವನ್ನು ವಿವಿಧ ಗ್ರಾಹಕರಿಗೆ ವಿತರಿಸಲಾಯಿತು. ಎಸ್‌ಬಿಐ ಉಪ ಪ್ರಧಾನ ವ್ಯವಸ್ಥಾಪಕ ಇಂದ್ರನೀಲ ಭಾಂಜಾ ಪ್ರಾಸ್ತಾವಿಕ ಮಾತನಾಡಿದರು. ವಿಜಯ ಚೌರಾಸಿಯಾ, ಆನಂದ ಪಾಟೀಲ ಇದ್ದರು.