Advertisement

ಎಸ್‌ಬಿಐ ನೇಮಕಾತಿ ಪುನರಾರಂಭ! ಪಿಒ, ಅಪ್ರಂಟಿಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಶುರು

12:25 AM Nov 22, 2020 | sudhir |

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ತನ್ನ ನೇಮ ಕಾತಿ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಿದೆ. ಸಾರ್ವಜನಿಕ ವಲಯದ ಬ್ಯಾಂಕ್‌ ಪ್ರೊಬೇಷನರಿ ಆಫೀಸರ್‌ (ಪಿಒ) ಮತ್ತು ಅಪ್ರಂಟಿಸ್‌ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಸಂಬಂಧ ಬ್ಯಾಂಕ್‌ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Advertisement

ಬ್ಯಾಂಕ್‌ ಪ್ರೊಬೇಷನರಿ ಆಫೀಸರ್‌
ಎಸ್‌ಬಿಐ 2,000 ಬ್ಯಾಂಕ್‌ ಪ್ರೊಬೇಷನರಿ ಆಫೀಸರ್‌ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಅವುಗಳಲ್ಲಿ ಹಿಂದುಳಿದ ಸಮಾಜ ಅಥವಾ ಅರ್ಥಿಕವಾಗಿ ಹಿಂದುಳಿದವರಿಗೆ 200 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಮೂರು ಸುತ್ತುಗಳಲ್ಲಿ ಆಯ್ಕೆ ಪ್ರಕ್ರಿಯೆಗಳು ನಡೆಯಲಿವೆ. ಅಭ್ಯರ್ಥಿಗಳು ಪೂರ್ವ ಪರೀಕ್ಷೆಯ ತರಬೇತಿಯನ್ನೂ ಆರಿಸಿಕೊಳ್ಳಬಹುದು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಪದವಿ ಅರ್ಹತೆಯನ್ನು ಹೊಂದಿ ರಬೇಕು. ಸ್ನಾತಕೋತ್ತರ ಪದವಿಯಲ್ಲಿ ಅಂತಿಮ ಸೆಮಿಸ್ಟರ್‌ಗೆ ಹಾಜರಾಗು ವವರು ಸಹ ಅರ್ಜಿ ಸಲ್ಲಿಸಬಹುದು. ಆದರೆ ಡಿಸೆಂಬರ್‌ 31ರಂದು ಅಥವಾ ಅದಕ್ಕೂ ಮೊದಲು ಅವರ ಪರೀಕ್ಷೆಯ ಪುರಾವೆಗಳನ್ನು ಹಾಜರು ಪಡಿಸಬೇಕು. ಕೋವಿಡ್‌ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಿಕೆಯಾಗಿ ಫ‌ಲಿ ತಾಂಶಗಳು ಅಥವಾ ಪರೀಕ್ಷೆಗಳು ಬಾಕಿ ಉಳಿದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಪರೀಕ್ಷೆಯ ಮಾದರಿ
ಪೂರ್ವ ಭಾವಿ ಪರೀಕ್ಷೆಗಳನ್ನು ಇಂಗ್ಲಿಷ್‌ ಭಾಷೆ, ಸಂಖ್ಯಾ ಸಾಮರ್ಥ್ಯ ಮತ್ತು ತಾರ್ಕಿಕ ಸಾಮರ್ಥ್ಯವನ್ನು ಅಳೆಯುವ ಮಾನ ದಂಡವಾಗಿ ನಡೆಸಲಾಗುತ್ತದೆ. ಇನ್ನು ವಿಭಾಗೀಯ ಕಟ್‌-ಆಫ್ಗಳನ್ನು ತೆಗೆ ದುಹಾಕಲಾಗಿದೆ. ಒಟ್ಟು 100 ಅಂಕಗಳ ಆನ್‌ಲೈನ್‌ ಪರೀಕ್ಷೆಯು ಒಂದು ಗಂಟೆ ಅವಧಿಯ ದ್ದಾಗಿರುತ್ತದೆ.

ವೇತನ ಶ್ರೇಣಿ
ಎಸ್‌ಬಿಐ ಪ್ರೊಬೇಷನರಿ ಅಧಿಕಾರಿಗಳಿಗೆ ಆರಂಭಿಕ ಮೂಲ ವೇತನ ನಾಲ್ಕು ಮುಂಗಡ ಏರಿಕೆಗಳೊಂದಿಗೆ 27,620 ರೂ. ಎಂದು ನಿಗದಿಪಡಿಸಲಾಗಿದೆ. ಡಿಎ, ಸಿಸಿಎ, ಎಚ್‌ಆರ್‌ಡಿ ಮುಂತಾದ ವಿವಿಧ ಸವಲತ್ತುಗಳಿಗೆ ಅಭ್ಯರ್ಥಿಗಳು ಅರ್ಹ ರಾಗಿರುತ್ತಾರೆ. ಅಭ್ಯರ್ಥಿಗಳು ಬ್ಯಾಂಕಿ ನೊಂದಿಗೆ ಎರಡು ವರ್ಷಗಳ ಬಾಂಡ್‌ ಅನ್ನು ಸಹ ಪೂರೈಸಬೇಕಾಗುತ್ತದೆ.

Advertisement

ಕಡೆಯ ದಿನ
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಡಿ. 4 ಕೊನೆಯ ದಿನಾಂಕವಾಗಿದೆ.

ಪರೀಕ್ಷೆ
ಆನ್‌ಲೈನ್‌ ಪ್ರಾಥಮಿಕ ಪರೀಕ್ಷೆಗಳು ನಾಲ್ಕು ದಿನಗಳ ವರೆಗೆ ವಿವಿಧ ಕೇಂದ್ರ ಗಳಲ್ಲಿ ನಡೆಯಲಿವೆ. ಡಿಸೆಂಬರ್‌ 31 ರಂದು ಪರೀಕ್ಷೆಗಳು ಆರಂಭವಾಗಿ ಜನವರಿ 5ರಂದು ಕೊನೆಗೊಳ್ಳಲಿದೆ.

8,500 ಅಪ್ರಂಟಿಸ್‌ ಹುದ್ದೆಗಳು
ಭಾರತೀಯ ಸ್ಟೇಟ್‌ಬ್ಯಾಂಕ್‌ ದೇಶಾದ್ಯಂತ ತನ್ನ ಶಾಖೆಗಳಲ್ಲಿ ಖಾಲಿ ಇರುವ ಅಪ್ರಂಟಿಸ್‌ ಹು¨ªೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ರಾಜ್ಯದಲ್ಲಿ 600 ಹುದ್ದೆಗಳು
ಕರ್ನಾಟಕದ 600 ಸಹಿತ ದೇಶದ ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ ಒಟ್ಟು 8,500 ಅಪ್ರಂಟಿಸ್‌ ಹು¨ªೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಅಂಗೀಕೃತಗೊಂಡ ವಿಶ್ವವಿದ್ಯಾನಿಲಯ ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಪದವಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಅಪ್ರಂಟಿಸ್‌ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷಗಳಾಗಿವೆ. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 300 ರೂ. ಅಪ್ಲಿಕೇಶನ್‌ ಶುಲ್ಕ ಪಾವತಿಬೇಕಿದ್ದು, ಎಸ್‌ಸಿ/ ಎಸ್‌ಟಿ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ಇದೆ.

ಸ್ಟೈಫ‌ಂಡ್‌: ಅಪ್ರಂಟಿಸ್‌ ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮೊದಲ ವರ್ಷ ಮಾಸಿಕ ರೂ.15,000, ಎರಡನೇ ವರ್ಷ ರೂ.16,500 ಮತ್ತು ಮೂರನೇ ವರ್ಷ ಮಾಸಿಕ ರೂ.19,000 ಸ್ಟೈಫ‌ಂಡ್‌ ಲಭಿಸಲಿದೆ.

ಅರ್ಜಿ ಸಲ್ಲಿಕೆಗೆ ಕೊನೇ ದಿನ: 10-12-2020
2021ರ ಜನವರಿಯಲ್ಲಿ ಆನ್‌ಲೈನ್‌ ಪರೀಕ್ಷೆ ನಡೆಯುವ ಸಾಧ್ಯತೆ ಇದೆ.

ಅರ್ಜಿ ಸಲ್ಲಿಕೆ ಹೇಗೆ?
– ವೆಬ್‌ಸೈಟ್‌ https://ibpsonline.ibps.in/sbiappamay20/basic_details.php ಮೂಲಕ ಅರ್ಜಿ ಸಲ್ಲಿಸಬಹುದು.
– ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಬಹುದು.
ಅರ್ಜಿ ಶುಲ್ಕವನ್ನು ನಿಗದಿತ ದಿನಾಂಕದೊಳಗೆ ಕ್ರೆಡಿಟ್‌ ಕಾರ್ಡ್‌, ನೆಟ್‌ಬ್ಯಾಂಕಿಂಗ್‌, ಡೆಬಿಟ್‌ ಕಾರ್ಡ್‌ ಅಥವಾ ಎಸ್‌ಬಿಐ ಚಲನ್‌ ಮೂಲಕವೂ ಪಾವತಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next