Advertisement

ಎಸ್‌ಬಿಐ ಗೃಹ ಸಾಲದ ಮೇಲಿನ ಆರಂಭಿಕ ಬಡ್ಡಿ ದರ ಇಳಿಕೆ

08:43 PM Mar 01, 2021 | Team Udayavani |

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಗೃಹ ಸಾಲದ ಮೇಲಿನ ಆರಂಭಿಕ ಬಡ್ಡಿ ದರವನ್ನು ಶೇ. 6.70ಕ್ಕೆ ಇಳಿಕೆ ಮಾಡಲಾಗಿದೆ.

Advertisement

ಈ ಕುರಿತಂತೆ ಪ್ರಕಟಣೆ ನೀಡಿರುವ ಎಸ್‌ಬಿಐ, 75 ಲಕ್ಷ ರೂ.ಗಳವರೆಗಿನ ಗೃಹ ಸಾಲದ ಮೇಲಿನ ಬಡ್ಡಿ ದರ ಶೇ. 6.70ರಷ್ಟಿರಲಿದ್ದು, 75 ಲಕ್ಷ ರೂ.ಗಳಿಂದ 5 ಕೋಟಿ ರೂ.ಗಳವರೆಗಿನ ಸಾಲಕ್ಕೆ ಶೇ. 6.75ರಷ್ಟಿರಲಿದೆ ಎಂದು ಹೇಳಿದೆ.

ಗ್ರಾಹಕರ ಸಿಬಿಲ್‌ ಸ್ಕೋರ್‌ಗೆ ಅನುಗುಣವಾಗಿ ಬಡ್ಡಿ ದರವನ್ನು ಅನ್ವಯಿಸಲಾಗುತ್ತದೆ. ಅಲ್ಲದೆ, ಈ ಸೌಲಭ್ಯ ಮಾ. 31ರವರೆಗೆ ಮಾತ್ರ ಲಭ್ಯವಿರಲಿದೆ ಎಂದು ಹೇಳಿದೆ.

ಇದನ್ನೂ ಓದಿ:ಬಂಟ್ವಾಳ: ಪೊಲೀಸರ ಮಾನವೀಯ ಕಾರ್ಯ ನೋಡಿ ; ಬಡ ಕುಟುಂಬಕ್ಕೆ ನೆರವಾದ ಉದ್ಯಮಿ

Advertisement

Udayavani is now on Telegram. Click here to join our channel and stay updated with the latest news.

Next