Advertisement

ಕನಿಷ್ಠ ಬ್ಯಾಲೆನ್ಸ್‌ನಿಂದ ಎಸ್‌ಬಿಐಗೆ 235 ಕೋ.ರೂ. ಲಾಭ!

01:43 AM Aug 19, 2017 | |

ಇಂದೋರ್‌: ಉಳಿತಾಯ ಠೇವಣಿ ಖಾತೆಗಳಲ್ಲಿ ಕನಿಷ್ಠ ಠೇವಣಿ ಇಡಲೇಬೇಕು ಎಂಬ ನಿಯಮ ಮಾಡಿರುವ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾಗೆ, ಇದರಿಂದಲೇ ಬರೋಬ್ಬರಿ 235 ಕೋಟಿ ರೂ. ಲಾಭ ಬಂದಿದೆ. ಮೊದಲ ತ್ತೈಮಾಸಿಕದಲ್ಲಿ ದಂಡದ ರೂಪದಲ್ಲೇ ಎಸ್‌ಬಿಐ ಈ ಪ್ರಮಾಣದ ಹಣ ಸಂಗ್ರಹಿಸಿದೆ ಎಂದು ಆರ್‌ಟಿಐ ಅರ್ಜಿಗೆ ಉತ್ತರ ನೀಡಲಾಗಿದೆ.

Advertisement

ಒಟ್ಟು 388.74 ಲಕ್ಷ ಅಕೌಂಟ್‌ಗಳಿಂದ ಈ ಹಣ ಸಂಗ್ರಹಿಸಲಾಗಿದೆ. ಈ ಅಕೌಂಟ್‌ ಮಾಲೀಕರು ಬ್ಯಾಂಕಿನ ನಿಯಮದಂತೆ ಪ್ರತಿ ತಿಂಗಳು ಕಡ್ಡಾಯವಾಗಿ ಇಂತಿಷ್ಟು ಕನಿಷ್ಠ ಠೇವಣಿ ರೂಪದಲ್ಲಿ ಹಣ ಇಟ್ಟಿರಲೇಬೇಕು ಎಂಬ ನಿಯಮವನ್ನು ಪಾಲಿಸಿಲ್ಲ. ಹೀಗಾಗಿ ಇವರೆಲ್ಲರ ಅಕೌಂಟ್‌ಗಳಿಂದ ದಂಡದ ರೂಪದಲ್ಲಿ ಹಣಕ್ಕೆ ಕತ್ತರಿ ಹಾಕಲಾಗಿದೆ. 

ಅಂದರೆ, ಮಹಾನಗರಗಳಲ್ಲಿ ಕನಿಷ್ಠವೆಂದರೂ 5,000 ರೂ. ಅನ್ನು ಕನಿಷ್ಠ ಠೇವಣಿ ರೂಪದಲ್ಲಿ ಅಕೌಂಟ್‌ನಲ್ಲಿ ಇಟ್ಟಿರಲೇಬೇಕು. ಇದರಲ್ಲಿ ನೀವು 10 ರೂ. ತೆಗೆದರೂ ದಂಡ ಕಟ್ಟಬೇಕಾಗುತ್ತದೆ. ಒಂದು ವೇಳೆ ಒಂದು ರೂ. ಅನ್ನೂ ಇಡದೇ ಇದ್ದರೆ 100 ರೂ. ದಂಡ ಗ್ಯಾರಂಟಿ. ಹಾಗೆಯೇ ನಗರ ಪ್ರದೇಶಗಳಲ್ಲಿ ಕನಿಷ್ಠವೆಂದರೂ 3,000 ರೂ. ಇರಿಸಿರಲೇಬೇಕು. ಪೂರ್ಣವಾಗಿ ತೆಗೆದರೆ 80 ರೂ. ದಂಡ ಪಾವತಿಸಬೇಕು. ಪಟ್ಟಣ ಅಥವಾ ಸಣ್ಣ ನಗರಗಳ ವಿಚಾರದಲ್ಲಿ 2,000 ರೂ. ಕನಿಷ್ಠ ಠೇವಣಿ ಇದ್ದರೆ ದಂಡ 75 ರೂ. ಇದೆ. ಗ್ರಾಮೀಣ ಭಾಗದಲ್ಲಿ ಕನಿಷ್ಠ ಠೇವಣಿ ರೂಪದಲ್ಲಿ 1,000 ರೂ. ಇಟ್ಟಿರಬೇಕು. ಅಕೌಂಟ್‌ ಖಾಲಿ ಮಾಡಿದರೆ 50 ರೂ. ದಂಡ ಕಟ್ಟಬೇಕು. ಈ ಎಲ್ಲಾ ದಂಡ ತಿಂಗಳಿಗೆ ಒಮ್ಮೆ ಹಾಕಲಾಗುತ್ತದೆ.

ಮಿನಿಮಮ್‌ ಬ್ಯಾಲೆನ್ಸ್‌ಗೆ ಕಠಿಣ ನಿಯಮ: ಸೇವಿಂಗ್ಸ್‌ ಅಕೌಂಟ್ಸ್‌ ಹೊಂದಿರುವವರು ತಮ್ಮ ಖಾತೆಯಲ್ಲಿ ಇಂತಿಷ್ಟು ಹಣ ಇಡಲೇಬೇಕು ಎಂದು ಎಸ್‌ಬಿಐ ನಿಯಮ ಮಾಡಿದೆ. ಮೆಟ್ರೋ, ಅರ್ಬನ್‌, ಸೆಮಿ ಅರ್ಬನ್‌ ಮತ್ತು ರೂರಲ್‌ ಎಂಬ ಹಂತಗಳನ್ನು ಮಾಡಿ, ಪ್ರತಿಯೊಂದು ಹಂತದಲ್ಲೂ ಗ್ರಾಹಕರು ಇಂತಿಷ್ಟು ಹಣ ಇಟ್ಟಿರಲೇಬೇಕು.

Advertisement

Udayavani is now on Telegram. Click here to join our channel and stay updated with the latest news.

Next