Advertisement
ಕೆವೈಸಿ ಹೆಸರಿನಲ್ಲಿ ಬರುವ ಮೆಸೇಜ್ ಅಥವಾ ಕರೆಗಳಿಗೆ ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಎಸ್ ಬಿ ಐ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
Related Articles
Advertisement
ಬ್ಯಾಂಕ್ ಯಾವತ್ತು ತನ್ನ ಗ್ರಾಹಕರ ವೈಯಕ್ತಿಕ ಡಾಟಾ, ಕೆವೈಸಿಯನ್ನು ಕೇಳುವುದಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿಸಿದ್ದು, ಇದು ಹೊಸ ರೀತಿಯ ಆರ್ಥಿಕ ವಂಚನೆ. ಇಂತಹ ಮೋಸದ ಜಾಲ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಎಸ್ ಬಿ ಐ ನ 44.89 ಕೋಟಿ ಗ್ರಾಹಕರು ಯಾವುದೇ ರೀತಿಯಲ್ಲೂ ಖಾಸಗಿ ಡೇಟಾವನ್ನು ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಿದೆ.
ಇಷ್ಟು ಮಾತ್ರವಲ್ಲದೆ, ವಂಚಕರು ಗ್ರಾಹಕರಿಗೆ ಮತ್ತೆ ಮತ್ತೆ ಸಂದೇಶಗಳನ್ನು ಕಳುಹಿಸುತ್ತಿರುತ್ತಾರೆ. ಈ ಸಂದೇಶದೊಂದಿಗೆ ಒಂದು ಲಿಂಕ್ ಕೂಡಾ ಇರುತ್ತದೆ. ಇದರಲ್ಲಿರುವ ಫಾರ್ಮ್ ಅನ್ನು ಭರ್ತಿ ಮಾಡುವಂತೆ ಗ್ರಾಹಕರಿಗೆ ಸೂಚಿಸಲಾಗುತ್ತದೆ, ಈ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಎಚ್ಚರಿಗೆ ನಿಡಿದೆ.
ಓದಿ : ಶಿರ್ವ ಗ್ರಾ.ಪಂ. ಉಪ ಚುನಾವಣೆ; ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು