Advertisement

ಮೆಟ್ರೋ ನಿಲ್ದಾಣಗಳಲ್ಲಿ ಎಸ್‌ಬಿಐ ಎಟಿಎಂ

12:15 PM Apr 07, 2018 | Team Udayavani |

ಬೆಂಗಳೂರು: ಮೆಟ್ರೋ ಪ್ರಯಾಣಿಕರ ಹಾಗೂ ನಾಗರಿಕರ ಅನುಕೂಲಕ್ಕಾಗಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬೆಂಗಳೂರು ನಗರದ 36 ಮೆಟ್ರೋ ನಿಲ್ದಾಣಗಳಲ್ಲಿ 63 ಎಟಿಎಂಗಳನ್ನು ತೆರೆಯಲಿದೆ.

Advertisement

ಈ ನಿಟ್ಟಿನಲ್ಲಿ ಗುರುವಾರ ಎಸ್‌ಬಿಐ ಕೇಂದ್ರ ಕಚೇರಿಯಲ್ಲಿ ಬೆಂಗಳೂರು ಮೆಟ್ರೋ ನಿಗಮದ (ನಮ್ಮ ಮೆಟ್ರೋ) ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮುಖ್ಯ ಮಹಾಪ್ರಬಂಧಕ ಎಸ್‌.ಎಂ. ಫಾರೂಕ್‌ ಶಾಹಬ್‌ ಅವರು ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.

ಒಡಂಬಡಿಕೆ ಪತ್ರ ವಿನಿಮಯದ ನಂತರ ಮಾತನಾಡಿದ ಫಾರೂಕ್‌ ಶಾಹಬ್‌, ಮೆಟ್ರೋ ನಿಲ್ದಾಣಗಳಲ್ಲಿ ಎಸ್‌ಬಿಐ ಒಟ್ಟು 63 ಎಟಿಎಂ ಕಿಯೋಸ್ಕ್ಗಳನ್ನು ತೆರೆಯಲಿದೆ. ಬೆಂಗಳೂರು ನಗರದೊಳಗಿನ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ 2ರಿಂದ 3 ಎಟಿಎಂ ಕಿಯೋಸ್ಕ್ಗಳು ಇರಲಿವೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next