Advertisement

Namma Metro ಬಗ್ಗೆ ಸಿಎಜಿ ಆಡಿಟ್‌ ನಡೆಸಿ: ಸಂಸದ ತೇಜಸ್ವಿ

03:04 PM Oct 18, 2024 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಯೋಜನೆಯ ಕಾರ್ಯವೈಖರಿ ಬಗ್ಗೆ ಸಿಎಜಿಯಿಂದ ಆಡಿಟ್‌ ಆಗಬೇಕು ಎಂದು ಸಂಸದ ತೇಜಸ್ವಿಸೂರ್ಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ)ಯನ್ನು ಒತ್ತಾಯಿಸಿದ್ದಾರೆ.

Advertisement

ಈ ಸಂಬಂಧ ಅ.16ರ ಬುಧವಾರ ಪಿಎಸಿ ಅಧ್ಯಕ್ಷ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿಯಾದ ಅವರು, ಮೆಟ್ರೋ ಸೇರಿದಂತೆ ನಗರದ ವಿವಿಧ ಯೋಜನೆಗಳ ಕುರಿತು ಚರ್ಚಿಸಿದರು. ಈ ವೇಳೆ “ಬೆಂಗಳೂರು ಮೆಟ್ರೋ ರೈಲು ನಿಗಮದ ಅಸಮರ್ಪಕ ಆಡಳಿತ ಮತ್ತು ಕಾರ್ಯಾಚರಣೆ ಕುರಿತು ಗಮನ ಸೆಳೆದರು.

“ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸುವ ಹಳದಿ ಮಾರ್ಗ (ಆರ್‌.ವಿ. ರಸ್ತೆ ಎಲೆಕ್ಟ್ರಾನಿಕ್‌ ಸಿಟಿ- ಬೊಮ್ಮಸಂದ್ರ) ಮತ್ತು ಸುರಂಗದಲ್ಲಿ ಹಾದುಹೋಗುವ ಪಿಂಕ್‌ ಮಾರ್ಗ (ಗೊಟ್ಟಿಗೆರೆ-ನಾಗವಾರ) ಕಾರ್ಯಾಚರಣೆಗೆ ಮುಕ್ತಗೊಳಿಸುವಲ್ಲಿ ವಿಳಂಬವಾಗುತ್ತಿದೆ. ಈ ಅಸಮರ್ಪಕ ನಿರ್ವಹಣೆಯಿಂದ ಸಾರ್ವಜನಿಕ ಹಣ ಪೋಲಾಗುತ್ತಿದೆ. ಮತ್ತೂಂದೆಡೆ ನಗರದ ಸಂಚಾರದಟ್ಟಣೆ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಹೀಗಾಗಿ ಮೆಟ್ರೋ ನಿಗಮದ ಕಾರ್ಯವೈಖರಿ ಬಗ್ಗೆ ಸಿಎಜಿ (ಮಹಾಲೆಕ್ಕಪಾಲರು)ಯಿಂದ ಆಡಿಟ್‌ ನಡೆಸುವ ಅವಶ್ಯಕತೆ ಇದೆ ಎಂದು ವೇಣುಗೋಪಾಲ್‌ ಅವರಿಗೆ ನೀಡಿದ ಮನವಿ ಪತ್ರದಲ್ಲಿ ತೇಜಸ್ವಿಸೂರ್ಯ ಆಗ್ರಹಿಸಿದ್ದಾರೆ.

ಆಡಿಟ್‌ ನಡೆಸುವುದರಿಂದ ಪಾರದರ್ಶಕತೆ ಜತೆಗೆ ಹೊಣೆಗಾರಿಕೆ ಬರಲಿದೆ. ಇದು ಭವಿಷ್ಯದ ಬೆಂಗಳೂರು ಮೆಟ್ರೋ ರೈಲು ವ್ಯವಸ್ಥೆ ಸುಧಾರಿಸಲಿದೆ. ಈಗಾಗಲೇ ವಿವಿಧ ಯೋಜನೆಗಳ ವೆಚ್ಚ ಮತ್ತು ಆರ್ಥಿಕ ಶಿಸ್ತನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕಾಲ ಕಾಲಕ್ಕೆ ಪರಿಶೀಲುತ್ತಲೇ ಇದೆ. ಅದೇ ರೀತಿ, ಬಿಎಂಆರ್‌ಸಿಎಲ್‌ ಆಡಳಿತದ ಕಾರ್ಯವೈಖರಿಯ ಪರಿಶೀಲನೆ ನಡೆಸಬೇಕು’ ಎಂದು ಮನವಿ ಮಾಡಿದ್ದಾರೆ.

ತೇಜಸ್ವಿ ಸೂರ್ಯ ಪಿಎಸಿ ಗಮನಸೆಳೆದ ಅಂಶಗಳು

Advertisement

 ಯೋಜನೆ ವಿಳಂಬದಿಂದ ವೆಚ್ಚ ಹೆಚ್ಚು ತ್ತಿದ್ದು, ಇದು ಸಾರ್ವಜನಿಕ ಹಣ ಪೋಲು ರೂಪದಲ್ಲಿ ಪರಿಣಮಿಸುತ್ತಿದೆ.

 ಮೆಟ್ರೋ ಯೋಜನೆ ಅನುಷ್ಠಾನದಲ್ಲಿನ ವಿಳಂಬದಿಂದ ದಿನದಿಂದ ದಿನಕ್ಕೆ ಖಾಸಗಿ ವಾಹನಗಳು ರಸ್ತೆಗಿಳಿಯುತ್ತಿದ್ದು, ಸಂಚಾರದಟ್ಟಣೆ ವಿಪರೀತ ಆಗುತ್ತದೆ. ಜನ ನಿತ್ಯ ಪರದಾಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next