Advertisement

ಸಾರಿ ಹೇಳಿದೆ…ಬ್ಲೌಸ್‌ ತುಂಬಾ ಚೆನ್ನಾಗಿದೆ!

03:45 AM Jun 23, 2017 | |

ಎಲ್ಲ ಆಧುನಿಕ ಬಗೆಯ ಬಟ್ಟೆಗಳ ಅಬ್ಬರದಲ್ಲಿಯೂ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿರುವ ಉಡುಪೆಂದರೆ ಸೀರೆ ಮಾತ್ರ. ಭಾರತೀಯ ಸಾಂಸ್ಕೃತಿಕ ಉಡುಪುಗಳಲ್ಲಿ ಒಂದಾಗಿರುವ ಸೀರೆ ಭಾರತೀಯ ನಾರಿಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ. ನಾವು ವಿದೇಶೀ ಶೈಲಿಯ ಉಡುಪಿನತ್ತ ಆಕರ್ಷಿತರಾಗುತ್ತಿರುವಾಗಲೇ ವಿದೇಶೀಯರು ನಮ್ಮ ಸೀರೆಯನ್ನು ಇಷ್ಟಪಡುತ್ತಿರುವುದು ಹೆಚ್ಚಾಗಿ ಕಾಣಸಿಗುತ್ತದೆ. 

Advertisement

ಮದುವೆ ಮತ್ತಿತರ ಶುಭಸಮಾರಂಭಗಳಿಗೆ, ದೇವಸ್ಥಾನಗಳಿಗೆ ತೆರಳುವಾಗ ಸೀರೆಯನ್ನು ತೊಡುವುದು ನಮ್ಮ ಸಂಪ್ರದಾಯವಾಗಿದೆ. ಎಷ್ಟೇ ಆಧುನಿಕ ಶೈಲಿಯ ಉಡುಪುಗಳನ್ನು ಧರಿಸುವ ಮಹಿಳೆಯರೂ ಸೀರೆಯ ಮೋಡಿಗೆ ಮರುಳಾಗದವರಿಲ್ಲ. ಒಂದು ಅಧ್ಯಯನದ ಪ್ರಕಾರ ಎಲ್ಲಾ ಉಡುಗೆಗಳಿಗಿಂತ ಸೀರೆಯೇ ಅತ್ಯಂತ ಗ್ಲಾ$Âಮರಸ್‌ ಉಡುಪೆಂದು ಪರಿಗಣಸಲಾಗಿದೆಯಂತೆ. ಅಂಥ ಅಂದದ ಸೀರೆಗಳಿಗೆ ಮಾರುಹೋಗದ ಮಹಿಳೆಯರಿಲ್ಲ. ಹೀಗೆ ಸೀರೆಗಳು ಇಂದಿನ ಫ್ಯಾಷನ್‌ ಲೋಕದಲ್ಲಿ ಹಲವು ಪ್ರಯೋಗಗಳಿಗೊಳಪಟ್ಟು ವಿವಿಧ ರೂಪಗಳನ್ನು ಪಡೆಯುತ್ತಿವೆ. ದಿನದಿಂದ ದಿನಕ್ಕೆ ಬದಲಾಗುತ್ತಿರುವ ಫ್ಯಾಷನ್‌ ಜಗತ್ತಿಗೆ ಅಪ್‌ಡೇಟ್‌ ಆಗುವ ಸಲುವಾಗಿ ಇಂದು ಮಹಿಳೆಯರು ಸೀರೆಯಲ್ಲಿಯೂ ಅತ್ಯಾಧುನಿಕ ಶೈಲಿಯ ಹುಡುಕಾಟದಲ್ಲಿ ತೊಡಗಿರುತ್ತಾರೆ. ಅಂಥವುಗಳಲ್ಲಿ ಸೀರೆಗೆ ಮ್ಯಾಚ್‌ ಆಗುವ ಬ್ಲೌಸುಗಳನ್ನು ಹಲವಾರು ರೀತಿಯಲ್ಲಿ ತಯಾರಿಸಿಕೊಳ್ಳುವುದು ಸದ್ಯದ ಟ್ರೆಂಡ್‌ ಎನಿಸಿದೆ. 

ನಮಗೆಲ್ಲ ಗೊತ್ತಿರುವಂತೆ ಸೀರೆಗಳು ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಬಟ್ಟೆಗಳಲ್ಲಿ  ಕಾಟನ್‌, ಶಿಫಾನ್‌, ಸ್ಯಾಟಿನ್‌, ಸಿಲ್ಕ…, ಜಾರ್ಜೆಟ್‌, ಖಾದಿ ಮುಂತಾದವುಗಳಲ್ಲಿ ಲಭ್ಯವಿರುತ್ತವೆ. ಸೀರೆ ಯಾವುದೇ ಇರಲಿ, ಅದಕ್ಕೆ ಒಪ್ಪುವಂಥ‌ ಬ್ಲೌಸುಗಳನ್ನು ಡಿಸೈನ್‌ ಮಾಡಿಸಿ, ತೊಟ್ಟು ಸ್ಟೈಲ್‌ ಸ್ಟೇಟೆಟ್‌ ಸೃಷ್ಟಿಸುವುದೇ  ಇಂದಿನ ಟ್ರೆಂಡ್‌ ಆಗಿದೆ. ಅಂತಹ ಬ್ಲೌಸುಗಳಲ್ಲಿ ಸಧ್ಯದ ಫ್ಯಾಷನೇಬಲ್‌ ಮಾದರಿಗಳನ್ನು ಈ ಕೆಳಗೆ ಪಟ್ಟಿ ಮಾಡಬಹುದಾಗಿದೆ.

1 ಬೋಟ್‌ ನೆಕ್‌ ಬ್ಲೌಸುಗಳು
ಪ್ರಸ್ತುತ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವುದು ಬೋಟ್‌ ನೆಕ್‌ ಬ್ಲೌಸುಗಳು. ಸೀರೆಗೆ ಇಂಡೋ-ವೆಸ್ಟೆರ್ನ್ ಲುಕ್‌ ನೀಡಲು ಈ ಬಗೆಯ ಬ್ಲೌಸುಗಳು ಸಹಾಯಕವಾದುದಾಗಿದೆ. ಇವು ವೈಡ್‌ ನೆಕ್‌ ಆಗಿರುವುದರಿಂದ ಸೀರೆಗೆ ಎಲಿಗಂಟ್‌ ಲುಕ್‌ ನೀಡುತ್ತವೆ. ಇವುಗಳಿಗೆ ತೋಳುಗಳಿಲ್ಲದ, ಚಿಕ್ಕತೋಳು, 3/4 ತೋಳು ಎಲ್ಲವೂ ಸರಿ ಹೊಂದುತ್ತವೆ. ಇಲ್ಲಿ ನೆಕ್‌ಗೆ ಪ್ರಾಮುಖ್ಯ ನೀಡಲಾಗಿರುತ್ತದೆ. ಎಲ್ಲ ಬಗೆಯ ಬಟ್ಟೆಗಳಿಗೂ ಹೊಂದಿಕೊಳ್ಳುತ್ತದೆ ಮತ್ತು ಎಲ್ಲಾ ಸಂದರ್ಭಗಳಿಗೂ ಸೂಕ್ತವೆನಿಸುತ್ತದೆ.

2 ಹೈನೆಕ್‌ ಕಾಲರ್‌ ಬ್ಲೌಸುಗಳು
 ಈ ಬಗೆಯ ಬ್ಲೌಸುಗಳು ಸೀರೆಗೆ ಮಾಡರ್ನ್ ಲುಕ್‌ ನೀಡುತ್ತವೆ. ಪಾರ್ಟಿವೇರ್‌ಆಗಿ ಸೂಕ್ತವಾದುದಾಗಿದೆ. ಈ ಬಗೆಯ ಬ್ಲೌಸುಗಳಿಗೆ ಆಭರಣಗಳ ಆವಶ್ಯಕತೆ ಇರುವುದಿಲ್ಲ.
 
3 ಎಂಬ್ರಾಯx… (ಹೆವಿವರ್ಕ…) ಬ್ಲೌಸುಗಳು
ಶಿಫಾನ್‌,  ಸಿಲ್ಕ…, ಸ್ಯಾಟಿನ್‌ ಪ್ಲೆ„ನ್‌ ಸೀರೆಗಳಿಗೆ ಎಂಬ್ರಾಯಿಡರಿ ಅಥವಾ ಹೆವಿವರ್ಕ್‌ ಬ್ಲೌಸುಗಳು ಹೇಳಿಮಾಡಿಸಿದ್ದಾಗಿದೆ. ಈ ರೀತಿಯ ಬ್ಲೌಸುಗಳು ಪ್ಲೆ„ನ್‌ ಸೀರೆಗೆ ಗ್ರ್ಯಾಂಡ್‌ ಲುಕ್‌ ನೀಡಿ ಸೀರೆಯನ್ನು ಅಂದಗೊಳಿಸುತ್ತದೆ. 

Advertisement

4 ಕೋಟ್‌ ಬ್ಲೌಸುಗಳು
ಇಂಡೋವೆಸ್ಟrರ್ನ್ ಫ್ಯೂಷನ್‌ ಲುಕ್‌ ಕೊಡಲು ಈ ರೀತಿಯ ಬ್ಲೌಸುಗಳನ್ನು ತಯಾರಿಸಲಾಗಿರುತ್ತದೆ. ಕಾಟನ್‌ ಸೀರೆಗಳಿಗೆ ಈ ಬಗೆಯ ಬ್ಲೌಸುಗಳು ಹೆಚ್ಚು ಸೂಕ್ತವಾದುದು. ಇವುಗಳಲ್ಲಿ ಬೇರೆ ಬೇರೆ ಬಗೆಯ ತೋಳಿನ ಆಯ್ಕೆಗಳಿರುತ್ತವೆ. ಈ ಶೈಲಿಯು ಇನ್ನೂ ಜನಸಾಮಾನ್ಯರಲ್ಲಿ ಹೆಚ್ಚು ಪ್ರಚಲಿತವಾಗದೆ ಸೆಲಬ್ರಿಟಿಗಳಿಗಷ್ಟೇ ಸೀಮಿತವಾಗಿದೆ.

5 ಬ್ಯಾಕ್‌ಲೆಸ್‌ ಬ್ಲೌಸುಗಳು
ಈ ಬಗೆಯ ಬ್ಲೌಸುಗಳು ಫ್ಯಾಷನೇಬಲ್‌ ಬ್ಲೌಸುಗಳು. ಇವುಗಳಲ್ಲಿ ಬ್ಲೌಸಿನ ಬ್ಯಾಕ್‌ ಲುಕ್ಕಿಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗಿರುತ್ತದೆ. ಈ ಸ್ಟೈಲ್‌ ಸ್ವಲ್ಪ ಬೋಲ್ಡ… ಮಾದರಿಯಾಗಿದೆ. ಮೇಲೆ ಮತ್ತು ಕೆಳಗೆ ಮಾತ್ರ ಪಟ್ಟಿ ಅಥವಾ ಹುಕ್‌ ಬಂದು, ಬ್ಯಾಕ್‌ ವೈಡ್‌ ಆಗಿರುತ್ತದೆ.

6 ಹಾಫ್ನೆಟ್‌ ಬ್ಲೌಸುಗಳು 
ಇವು ಬೋಟ್‌ನೆಕ್‌ ಅಥವಾ ಹೈನೆಕ್‌ ಬ್ಲೌಸುಗಳಾಗಿದ್ದು ಶೋಲ್ಡರ್‌ಗಳಲ್ಲಿ ಮಾತ್ರ ನೆಟ್‌ ಬಂದು ಉಳಿದೆಡೆ ಥಿಕ್‌ ಕ್ಲಾತ್‌ ಇರುವಂಥ¨ªಾಗಿದೆ. ಇವುಗಳಲ್ಲಿ ಹಲವಾರು ಮಾದರಿಗಳು ಲಭಿಸುತ್ತವೆ. ಇವುಗಳು ಜಾರ್ಜೆಟ್‌ ಸೀರೆಗಳಿಗೆ, ಶಿಫಾನ್‌ ಸೀರೆಗಳಿಗೆ ಹೆಚ್ಚು ಸೂಕ್ತ. 

7 ಲೇಸ್‌ ವರ್ಕ್‌ ಬ್ಲೌಸುಗಳು 
ಈ ಲೇಸ್‌ ವರ್ಕ್‌ ಬ್ಲೌಸುಗಳು ಸಿಂಪಲ್‌ ಮತ್ತು ಗ್ರ್ಯಾಂಡ್‌ ಎರಡೂ ಬಗೆಗಳಲ್ಲಿಯೂ ಲಭಿಸುತ್ತವೆ. ತೀರಾ ಸಾಧಾರಣವಾದ ಬ್ಲೌಸುಗಳನ್ನೂ ಸಖತ್‌ ಟ್ರೆಂಡಿಯನ್ನಾಗಿಸುವ ಸಾಮರ್ಥ್ಯ ಈ ಲೇಸುಗಳಿಗಿದೆ. ಆದರೆ ಲೇಸುಗಳ ಆಯ್ಕೆಯಲ್ಲಿ ಜಾಗರೂಕತೆ ವಹಿಸುವುದು ಬಹಳ ಮುಖ್ಯ. ಹಲವಾರು ಬಗೆಯ ಲೇಸುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಆಯ್ಕೆಗೆ ಬಹಳಷ್ಟು ಅವಕಾಶಗಳಿರುತ್ತವೆ. ನೆಕ್‌ಗೆ ಹೆಚ್ಚಿನ ಮೆರುಗನ್ನು ಕೊಡುವುದು ಈ ಲೇಸುಗಳ ಬಳಕೆಯ ಉದ್ದೇಶ. ಹೆವಿ ವರ್ಕ್‌ ಇರುವ ಲೇಸುಗಳು ನೆಕ್‌ಡಿಸೈನುಗಳಲ್ಲಿ ಬಳಸಿದಾಗ ಆಭರಣಗಳ ಆವಶ್ಯಕತೆಯೇ ಇಲ್ಲದಿರುವಂತಹ ಸ್ಟೈಲಿಶ್‌ ರವಿಕಗಳು ಸಿದ್ಧಗೊಳ್ಳುತ್ತವೆ. ಕೇವಲ ಕಿವಿಯೋಲೆಗಳ ಮೇಲೆ ಗಮನವಹಿಸಿದರೆ ಸಾಕಾಗುತ್ತದೆ.

8 ಕೇಪ್‌ ಮಾದರಿಯ ಬ್ಲೌಸುಗಳು 
ಇವು ಇಂದಿನ ಟ್ರೆಂಡಿ ಯುಗದ ಅತ್ಯಂತ ಫ್ಯಾಷನೇಬಲ್‌ ಬ್ಲೌಸುಗಳು. ಇವುಗಳ ಮೂಲ  ಹಿಂದಿನ ಕಾಲದಲ್ಲಿ ನೇಯ್ದು ಮಾಡುತ್ತಿದ್ದ ಉಲ್ಲನ್ನಿನ ಕೇಪ್‌ಗ್ಳಾಗಿರಬಹುದೆಂದು ಊಹಿಸಬಹುದು. ಸಾಮಾನ್ಯವಾಗಿ ಕೇಪ್‌ ಟಾಪುಗಳನ್ನು ನೋಡಿರುತ್ತೇವೆ. ಅಂತೆಯೇ ಕೇಪ್‌ ಮಾದರಿಯ ಬ್ಲೌಸುಗಳೂ ದೊರೆಯುತ್ತವೆ. ಸಧ್ಯದಲ್ಲಿ ಈ ಮಾದರಿಯು ಹೆಚ್ಚಾಗಿ ಸೆಲೆಬ್ರಿಟಿಗಳಿಂದ ಬಳಸಲ್ಪಡುತ್ತಿದೆ.

9 ಹಾಫ್ಸ್ಲಿವ್‌ ಬ್ಲೌಸುಗಳು
ಈ ಬಗೆಯ ಬ್ಲೌಸುಗಳೂ ಮೇಲಿನ ಮಾದರಿಯಂತೆಯೇ ಅತ್ಯಾಧುನಿಕ ಮಾದರಿಯಾಗಿದೆ. ಅಲ್ಟ್ರಾಮಾಡರ್ನ್ ಲುಕ್ಕನ್ನು ಕೊಟ್ಟು ಸೀರೆಗೆ ಮಾಡರ್ನ್ ಲುಕ್‌ ನೀಡುವಂತ¨ªಾಗಿದೆ.  ಇವು ಯುವ ಪೀಳಿಗೆಯ ಹುಡುಗಿಯರು ತುಂಬಾ ಇಷ್ಟಪಡುವಂತವುಗಳಾಗಿವೆ. ಅಲ್ಲದೆ ಇದು ತುಂಬಾ ಬೋಲ್ಡ… ಮಾದರಿಯ ರವಿಕೆಯಾಗಿದೆ.

– ಪ್ರಭಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next