ಕೋವಿಡ್ ಜಗತ್ತಿಗೆ ಹಲವು ಪಾಠಗ ಳನ್ನು ಕಲಿಸಿದೆ. ಅದರಲ್ಲೂ ವಿಶೇಷ ವಾಗಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ನಾವು ಕಳೆದ ವರ್ಷ ಕಲಿತ ಪಾಠಗಳನ್ನು ಈ ವರ್ಷ ಕಾರ್ಯ ರೂಪಕ್ಕೆ ತಂದರೆ ಮುಂಬರುವ ಆರ್ಥಿಕ ಸಂಕಷ್ಟಗಳಿಂದ ಪಾರಾಗ ಬಹುದು. ಅವುಗಳಲ್ಲಿ ಪ್ರಮುಖವಾಗಿ ಉಳಿತಾಯಕ್ಕೆ ಸಂಬಂಧಿಸಿ ಪ್ರತಿಯೊ ಬ್ಬರೂ ಕೆಲವೊಂದು ವಿಷಯಗಳನ್ನು ನೆನಪಿಡಲೇಬೇಕು.
ಭವಿಷ್ಯಕ್ಕೊಂದಿಷ್ಟು ಉಳಿತಾಯ: ಕೋವಿಡ್ ಹಿನ್ನೆಲೆಯಲ್ಲಿ ಉದ್ಯೋಗ ಕಡಿತ, ವೇತನ ಕಡಿತದಿಂದಾಗಿ ಅನೇಕ ಕುಟುಂಬಗಳ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡುವಂತಾಗಿದೆ. ತಿಂಗಳ ಭತ್ತೆಯಲ್ಲಿ ಒಂದಿಷ್ಟು ಉಳಿತಾಯ ಮಾಡಬೇಕು ಎಂಬ ಸತ್ಯದ ಅರಿವು ಎಲ್ಲರಿಗೂ ಆಗಿದೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ತಮ್ಮ ಆದಾಯಕ್ಕನುಗುಣವಾಗಿ ಖರ್ಚು ಮಾಡುವುದು ಸೂಕ್ತ.
ವಿವಿಧೆಡೆ ಹೂಡಿಕೆ: ಹೂಡಿಕೆ ಮಾಡುವಾಗ ಒಂದೇ ವಲಯದಲ್ಲಿ ಹಣ ತೊಡಗಿಸುವುದು ಅಪಾಯ ಕಾರಿ ಎಂಬುದನ್ನು ಕೋವಿಡ್ ಕಾಲ ಸಾಬೀತು ಪಡಿಸಿದೆ. ಉದಾಹರ ಣೆಗೆ ಚಿನ್ನದ ಮೇಲೆ ಹಣ ಹೂಡು ವುದು ವ್ಯರ್ಥ ಎಂಬುದು ಕೆಲವರ ಅಭಿಪ್ರಾಯವಾಗಿತ್ತು. 2020 ರಲ್ಲಿ ಬಂಗಾರದ ಬೆಲೆ ದಾಖಲೆ ಮಟ್ಟ ದಲ್ಲಿ ಏರಿಕೆ ಕಂಡಿದೆ. ಷೇರಿನಲ್ಲಿ ಹೂಡಿಕೆ ಮಾಡಿದವರು ಕೋವಿಡ್ ಆರಂಭದಲ್ಲಿ ನಷ್ಟದಲ್ಲಿದ್ದರೂ ಬಳಿಕ ಚಿರತೆಯಂತೆ ನೆಗೆದಿದೆ. ಹೀಗಾಗಿ ಒಂದೇ ವಲಯದಲ್ಲಿ ಹೂಡಿಕೆ ಮಾಡುವ ಬದಲು ಬದಲು ಬೇರೆ ಬೇರೆ ಕ್ಷೇತ್ರಗಳಲ್ಲಿ ಹಣ ತೊಡಗಿಸಿದರೆ ರಿಸ್ಕ್ ಕಡಿಮೆ ಎಂಬುದನ್ನು ನಾವು ಇನ್ನಾದರೂ ಅರ್ಥೈಸಿಕೊಳ್ಳುವುದೊಳಿತು.
ತುರ್ತು ನಿಧಿ: ಕಾಯಿಲೆ, ಅಪಘಾತ ಅಥವಾ ಇನ್ನಿತರ ಯಾವುದೇ ಆಕಸ್ಮಿಕ ಘಟನೆಗಳ ಸಂದರ್ಭದಲ್ಲಿ ನಮ್ಮ ನೆರವಿಗೆ ಬರುವುದು ತುರ್ತು ನಿಧಿ. ಇಂಥ ಅನಿರೀಕ್ಷಿತ ಸಂದರ್ಭಗಳಿಗಾಗಿ ತುರ್ತು ನಿಧಿ ಎಂದು ಒಂದಿಷ್ಟು ಉಳಿತಾಯ ಮಾಡುವುದು ಮುಖ್ಯ. ತೀರಾ ಅನಿವಾರ್ಯವಲ್ಲದ ಹೊರತು ಈ ನಿಧಿಯನ್ನು ಇನ್ನಿತರ ಉದ್ದೇಶಗಳಿಗಾಗಿ ಬಳಸಬಾರದು. ಭವಿಷ್ಯದಲ್ಲಿ ಎದುರಾಗುವ ಅನಿರೀಕ್ಷಿತ ವೆಚ್ಚಗಳಿಗಾಗಿ ಪ್ರತೀ ತಿಂಗಳು ಒಂದಿಷ್ಟು ಹಣ ಎತ್ತಿಡುವುದನ್ನು ಇಂದಿನಿಂದಲೇ ಆರಂಭಿಸೋಣ.
ಕಡಿಮೆ ಸಾಲ: ಸಾಲ ಕಡಿಮೆಯಾದಷ್ಟು ನೆಮ್ಮದಿ ಎಂಬ ವಾಸ್ತವ ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲ ದೊಡ್ಡ ದೊಡ್ಡ ಉದ್ಯಮಿಗಳಿಗೂ ಇದೀಗ ಅರಿವಾಗಿದೆ. ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಬಿಲ್‌ಗಳು ಕಡಿಮೆಯಿದ್ದಷ್ಟು ಒಳ್ಳೆಯದು.
ವಿಮೆ: 2020ರಲ್ಲಿ ಕೋವಿಡ್ ಅಲ್ಲದೆ ಚಂಡಮಾರುತಗಳು, ಪ್ರವಾಹ ಸಹಿತ ಹಲವು ಪ್ರಕೃತಿ ವಿಕೋಪಗಳು ಸಂಭವಿಸಿ ಜನರನ್ನು ತಲ್ಲಣಗೊಳಿಸಿದವು. ಇವೆಲ್ಲವುಗಳಿಂದಾಗಿ ಭಾರೀ ಪ್ರಮಾಣದ ಸಾವು-ನೋವು, ನಷ್ಟ ಉಂಟಾಗಿದೆ. ಇದರ ಪರಿಣಾಮವಾಗಿ ವಿಮೆ ಎಷ್ಟು ಮುಖ್ಯ ಎಂಬುದರ ಅರಿವು ಜನರಿಗಾಗಿದೆ. ಕೋವಿಡ್ ಭಾದಿಸುವ ತನಕ ಆರೋಗ್ಯ ವಿಮೆ ಸಹಿತ ವಿವಿಧ ವಿಮೆಗಳನ್ನು ಮಾಡಿಸುವುದು ವ್ಯರ್ಥ ಎಂಬ ಭಾವನೆ ಹೊಂದಿದ್ದರು. ಆದರೆ ಈಗ ಟ್ರೆಂಡ್ ಬದಲಾಗಿದೆ. ಜೀವ ವಿಮೆ ಅತೀ ಆವಶ್ಯಕ ಎಂಬುದನ್ನು ಮನಗಂಡಿದ್ದಾರೆ. ಅಲ್ಲದೆ ವಾಹನ ವಿಮೆಯತ್ತಲೂ ಜನರು ಹೆಚ್ಚಿನ ಗಮನಹರಿಸುವ ತುರ್ತು ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ.