ನಳ್ಳಿ ನೀರು ಈಗ ವಾರಕ್ಕೆ ಒಮ್ಮೆ ಮಾತ್ರ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ನಮಗೆ ಏನೂ ತಿಳಿದಿಲ್ಲ ಎಂದು ಅಲ್ಪಸ್ವಲ್ಪವಿರುವ ನೀರನ್ನು ಹಾಳುವ ಮಾಡುವ ಜನ ಒಂದೆಡೆ. ಈ ಎಲ್ಲ ವಿಚಾರಗಳನ್ನು ಇಟ್ಟುಕೊಂಡು “ಸೇವ್ ವಾಟರ್’ ಎಂಬ ಶೀರ್ಷಿಕೆಯಲ್ಲಿ ಸಾಕ್ಷ್ಯ ಚಿತ್ರದ ಚಿತ್ರೀಕರಣ ಹೆಬ್ರಿ ಬಸ್ಸು ತಂಗು ದಾಣದ ವಠಾರದಲ್ಲಿ ಎ. 23ರಂದು ನಡೆಯಿತು.
Advertisement
ಹೆಬ್ರಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜು ಆಶ್ರಯದಲ್ಲಿ ಎ. 19ರಿಂದ ಎ. 25ರ ವರೆಗೆ ಹೆಬ್ರಿ ಸಮಾಜ ಮಂದಿರದಲ್ಲಿ ನಡೆಯುತ್ತಿರುವಚಾಣಕ್ಯ-2017 ಬೇಸಗೆ ರಜಾ ಶಿಬಿರದಲ್ಲಿ ಯುನಿಸೆಫ್ ಪ್ರಸಾರ ಭಾರತಿ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ ಅವರಿಂದ ಚಲನಚಿತ್ರ ಅಭಿನಯ, ನೃತ್ಯ, ನಿರ್ದೇಶನ, ಚಿತ್ರೀಕರಣ ಮೊದಲಾದ ವಿಷಯದ ಕುರಿತು ಪ್ರಾಯೋಗಿಕ ತರಬೇತಿಯ ಬಳಿಕ ಶಿಬಿರಾರ್ಥಿಗಳು ನಟಿಸಿರುವ ಕಿರು ಸಾಕ್ಷ್ಯ ಚಿತ್ರಕ್ಕೆ ಹೆಬ್ರಿ ಗ್ರಾ. ಪಂ. ಅಧ್ಯಕ್ಷ ಸುಧಾಕರ ಹೆಗ್ಡೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ರಾಜಸಮಯವನ್ನು ಮೊಬೈಲ್, ಟಿ.ವಿ. ಎಂದು ಹಾಳು ಮಾಡದೇ ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ತಾವು ಪರಿಪೂರ್ಣರಾಗುವುದರೊಂದಿಗೆ ತಮ್ಮಲ್ಲಿರುವ ಪ್ರತಿಭಾ ವಿಕಸನಕ್ಕೆ ಅವಕಾಶ ಸಿಕ್ಕಿದಂತಾಗುತ್ತದೆ. ಪರಿಸರ ಕಾಳಜಿ, ಸ್ವತ್ಛತೆ, ಪಕ್ಷಿಸಂಕುಲ ಉಳಿಸಿ ಅಭಿಯಾನ, ನೀರು ಹಿತಮಿತ ಬಳಕೆ ಮೊದಲಾದ ವಿಚಾರಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಜಾಗೃತಿ ಮಾಡಿಸುವ ಇಂತಹ ಬೇಸಗೆ ಶಿಬಿರವನ್ನು ಆಯೋಜಿಸಿರುವ ಹೆಬ್ರಿಯ ಚಾಣಕ್ಯ ಸಂಸ್ಥೆಯ ಸಾಧನೆ ಶ್ಲಾಘನೀಯ ಎಂದರು.
ಮೂಡಿಸಿರುವುದರೊಂದಿಗೆ ಅವರ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕಲ್ಪಿಸಲಾಗುತ್ತಿದೆ. ಎಲ್ಲೆಡೆ ನೀರಿನ ಸಮಸ್ಯೆಯನ್ನು ಮನಗಂಡ
ಶಿಬಿರದ ಆಯೋಜಕರು ಚಿತ್ರ ನಿರ್ದೇಶಕ ಪ್ರಕಾಶ್ ಸುವರ್ಣ ಅವರ ಪರಿಕಲ್ಪನೆಯಂತೆ ಚಲನ ಚಿತ್ರನಟನೆಯ ತರಬೇತಿಯೊಂದಿಗೆ ಸೇವ್ ವಾಟರ್ ಎಂಬ ಕಾನ್ಸೆಪ್ಟ್ನ್ನು ಮಕ್ಕಳಲ್ಲಿ ತುಂಬಿ ಸಮಾಜ ಮಂದಿರದಿಂದ ಹೆಬ್ರಿ ಸರ್ಕಲ್ ವರೆಗೆ ಸೇವ್ ವಾಟರ್ ಎಂಬ ಘೋಷದೊಂದಿಗೆ ಮಕ್ಕಳ ಮೆರವಣಿಗೆ ಹೊರಟು ಜನರಲ್ಲಿ ಜಾಗೃತಿ ಮೂಡಿಸಿ ಸರ್ಕಲ್ ಬಳಿ ಸೇರಿದ ಶಿಬಿರಾರ್ಥಿಗಳಿಂದ ಸೇವ್ ವಾಟರ್ ವಿಚಾರದ ಕುರಿತು ಅನಿಸಿಕೆಗಳನ್ನು ಒಳಗೊಂಡ ಕಿರುಚಿತ್ರದ ಚಿತ್ರೀಕರಣದ ಜತೆ ಶಿಬಿರಾರ್ಥಿಗಳಿಗೆ ನಿರ್ದೇಶನ,
ನಟನೆ, ಛಾಯಾಚಿತ್ರಗ್ರಹಣ ಮೊದಲಾದ ವಿಚಾರದ ಕುರಿತು ಮಾಹಿತಿ ನೀಡಲಾಯಿತು. ಶಿಬಿರಾರ್ಥಿಗಳಾದ ನಿಭಾ, ನಿಧಿ, ಪ್ರಸಿನ್, ಸಂಖ್ಯಾ, ಶರದಿ, ಆದರ್ಶ, ಓಂಕಾರ್, ಚಿರಂಜೀವಿ, ರಿತಿಕಾ, ಸೃಷ್ಟಿ ಎಸ್. ಹೆಗ್ಡೆ ಮೊದಲಾದವರು ನಟಿಸಿದ್ದಾರೆ. ಚಿತ್ರಕ್ಕೆ ಮಹೇಶ ಬಚ್ಚಪ್ಪು, ಗಣೇಶ್ ಹೇರಳೆ, ವೀರಭದ್ರ ಸಂತೋಷ್ ಶೆಟ್ಟಿ, ರವಿ ಬಚ್ಚಪ್ಪು,
ಕರುಣಾಕರ ಶೆಟ್ಟಿ ಮೊದಲಾದವರು ಸಹಕರಿಸಿದ್ದಾರೆ. ಈ ಸಂದರ್ಭ ಚಿತ್ರನಟ ಸಂಜೀವ ಸುವರ್ಣ, ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶು ಪಾಲೆ ವೀಣಾ ಯು. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.