Advertisement

ಮೈಷುಗರ್‌ ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಿ

04:15 PM Sep 16, 2021 | Team Udayavani |

ಮಂಡ್ಯ: ಮೈಷುಗರ್‌ ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಪುನರಾರಂಭಿಸಬೇಕೆಂದು ಆಗ್ರಹಿಸಿ ನಗರದ ಸರ್‌ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ನಡೆಸುತ್ತಿರುವ ರೈತ ಹಿತರಕ್ಷಣಾ ಸಮಿತಿಯ ಹೋರಾಟ 3ನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ಹೋರಾಟಕ್ಕೆ ಜಿಲ್ಲಾ ಜೆಡಿಎಸ್‌ ಸಾಥ್‌ ನೀಡಿತು.

Advertisement

ಸರ್ಕಾರ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಉದ್ದೇಶ ಕೈಬಿಟ್ಟು ಈ ಹಿಂದೆ ನಡೆಯುತ್ತಿದ್ದಂತೆ ಸರ್ಕಾರಿ ಸ್ವಾಮ್ಯದಲ್ಲೇ ಆರಂಭಿಸಬೇಕು ಎಂಬ ಆಗ್ರಹ ಮಾಡಿ ಕಳೆದ ಸೋಮವಾರದಿಂದ ರೈತ ಹಿತ ರಕ್ಷಣಾ ಸಮಿತಿ ಮುಖಂಡರ ನೇತೃತ್ವದಲ್ಲಿ ನಡೆಯುತ್ತಿ ರುವ ಪ್ರತಿಭಟನೆಗೆ ಬುಧವಾರ ಶಾಸಕ ಎಂ.ಶ್ರೀನಿವಾಸ್‌ ಹಾಗೂ ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌ ನೇತೃತ್ವದಲ್ಲಿ ಜೆಡಿಎಸ್‌ ಮುಖಂಡರು
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದರು.

ನಗರದ ಸಿಲ್ವರ್‌ ಜ್ಯುಬಿಲಿ ಪಾರ್ಕ್‌ನಿಂದ ಮೆರವಣಿಗೆ ಮೂಲಕ ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ನೂರಾರು ಜೆಡಿಎಸ್‌ ಮುಖಂಡರು ಹಾಗೂ ಕಾರ್ಯ ಕರ್ತರು, ಸರ್ಕಾರದ ನಿರ್ಧಾರದ ವಿರುದ್ಧ ಘೋಷಣೆ ಕೂಗಿದರು.

ಇದನ್ನೂ ಓದಿ:ಕುವೆಂಪು ವಿವಿ 31ನೇ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ನಿರ್ಮಲಾ ಸೀತಾರಾಮನ್

ಸರ್ಕಾರ ಭರವಸೆ ಹುಸಿಗೊಳಿಸಬಾರದು: ಶಾಸಕ ಎಂ. ಶ್ರೀನಿವಾಸ್‌ ಮಾತನಾಡಿ, ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆ ಸರ್ಕಾರದ ಸುಪರ್ದಿಯಲ್ಲೇ ‌ನಡೆಯಬೇಕು.ಈ ಹಿಂದೆ ಸರ್ಕಾರ ಖಾಸಗೀಕರಣ ಮಾಡಲು ಉದ್ದೇಶಿಸಿದ್ದಾಗ ಜೆಡಿಎಸ್‌ ಹೋರಾಟ ಮಾಡಿತ್ತು. ಎಚ್‌ಡಿಕೆ ನೇತೃತ್ವದಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆವು. ಆ ಸಂದರ್ಭದಲ್ಲಿ ಖಾಸಗೀಕರಣ ಮಾಡುವುದಿಲ್ಲ ಎಂಬ ಭರವಸೆ ನಮಗೆ ಸಿಕ್ಕಿತ್ತು. ಇದೀಗ ಆ ಭರವಸೆ ಯನ್ನು ಸರ್ಕಾರ ಹುಸಿಗೊಳಿಸಬಾರದು ಎಂದು ಆಗ್ರಹಿಸಿದರು.

Advertisement

ಶೀಘ್ರವೇ ಸರ್ಕಾರವೇ ಆರಂಭಿಸಲಿ: ರೈತಹಿತರಕ್ಷಣಾ ಸಮಿತಿ ಮುಖಂಡರು ಮೈಷುಗರ್‌ಕಾರ್ಖಾನೆಯನ್ನು ಸರ್ಕಾರವೇ ನಡೆಸಬೇಕೆಂಬ ದೃಷ್ಟಿಯಿಂದ ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ನಮ್ಮ ಶಾಸಕರ ನಿಲುವು ಸಹ ಅದೇ ಆಗಿರುವುದರಿಂದ ಈ ಹೋರಾ ಟಕ್ಕೆ ನಮ್ಮ ಬೆಂಬಲ ಇದೆ ಎಂದರು.

ಜೆಡಿಎಸ್‌ ನಿರ್ಧಾರ ಅಚಲ: ಮನ್‌ಮುಲ್‌ ಉಪಾಧ್ಯಕ್ಷ ರಘುನಂದನ್‌ ಮಾತನಾಡಿ, ಮೈಷುಗರ್‌ ಸಕ್ಕರೆ ಕಾರ್ಖಾನೆ ಸರ್ಕಾರವೇ ನಡೆಸ ಬೇಕೆಂಬ ವಿಚಾರದಲ್ಲಿ ಜೆಡಿಎಸ್‌ ನಿರ್ಧಾರ ಅಚಲವಾಗಿದೆ. ಈ ವಿಚಾರದಲ್ಲಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ರೈತ ಹಿತ ರಕ್ಷಣಾ ಸಮಿತಿ ಹಾಗೂ ಜಿಲ್ಲೆಯ ರೈತರ ಪರವಾಗಿದೆ ಎಂದು ಹೇಳಿದರು.

ರೈತ ಹಿತರಕ್ಷಣಾ ಸಮಿತಿ ಮುಖಂಡರು ಮೈಷುಗರ್‌ ಸರ್ಕಾರಿ ಸ್ವಾಮ್ಯದಲ್ಲೇ ನಡೆಯಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಸ್ಥಳೀಯ ಶಾಸಕ ಎಂ.ಶ್ರೀನಿವಾಸ್‌ ಸೇರಿದಂತೆ ಇಡೀ ಜೆಡಿಎಸ್‌ ಬೆಂಬಲ ಇದೆ. ಎಚ್‌ಡಿಕೆ ನಿರ್ದೇಶನದಂತೆ ನಾವು ಪ್ರತಿಭಟನೆ ನಡೆಸುತ್ತಿ ದ್ದೇವೆ ಎಂದರು.

ರೈತ ಹಿತ ರಕ್ಷಣಾ ಸಮಿತಿಯ ಸುನಂದಾಜಯರಾಂ, ಕೆ.ಬೋರಯ್ಯ, ಕರ್ನಾಟಕ ಸಂಘದ ಅಧ್ಯಕ್ಷ ಪೊ›.ಬಿ. ಜಯಪ್ರಕಾಶ್‌ಗೌಡ, ನಗರಸಭೆ ಅಧ್ಯಕ್ಷ ಮಂಜು, ಜಿಪಂ ಮಾಜಿ ಸದಸ್ಯ ಯೋಗೇಶ್‌, ಜೆಡಿಎಸ್‌ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಉಪಾಧ್ಯಕ್ಷ ಎಂ.ಬಿ.ಶ್ರೀ ನಿವಾಸ್‌, ತಾಲೂಕು ಅಧ್ಯಕ್ಷ ತಿಮ್ಮೇಗೌಡ, ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಲೋಕೇಶ್‌, ಇಂಡುವಾಳು ಚಂದ್ರಶೇಖರ್‌, ಜಯರಾಂ, ನಗರಸಭೆ ಸದಸ್ಯೆ ಮೀನಾಕ್ಷಿ ಪುಟ್ಟಸ್ವಾಮಿ, ಕೀಲಾರ ಕೃಷ್ಣ ಸೇರಿದಂತೆ ನೂರಾರುಕಾರ್ಯಕರ್ತರು ಭಾಗವಹಿಸಿದ್ದರು.

ಜೆಡಿಎಸ್‌ ರೈತರ ಪಕ್ಷವಾಗಿದ್ದು, ಮೈಷುಗರ್‌ ವಿಚಾರದಲ್ಲಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ರೈತ ಹಿತರಕ್ಷಣಾ ಸಮಿತಿ ಹಾಗೂ ಮಂಡ್ಯ ಜಿಲ್ಲೆಯ ರೈತರ ಪರವಾಗಿದೆ.
– ಎಂ.ಎಸ್‌.ರಘುನಂದನ್‌,
ಉಪಾಧ್ಯಕ್ಷ, ಮನ್‌ಮುಲ್‌

 

Advertisement

Udayavani is now on Telegram. Click here to join our channel and stay updated with the latest news.

Next