Advertisement

ಯುವಕರೇ ದೇಶಿ ಸಂಸ್ಕೃತಿ ಉಳಿಸಿ: ಕೃಷ್ಣಾರೆಡ್ಡಿ

02:35 PM Mar 29, 2021 | Team Udayavani |

ಚಿಂತಾಮಣಿ: ಭಾರತದ ಸಂಸ್ಕೃತಿ ಜಗತ್ತಿನಲ್ಲೇ ಶ್ರೇಷ್ಠವಾಗಿದೆ. ನಮ್ಮ ದೇಶದ ಸಂಸ್ಕೃತಿ, ಆಚಾರ-ವಿಚಾರವನ್ನು ವಿದೇಶಿಯರು ಆಲವಡಿಸಿಕೊಳ್ಳುತ್ತಿದ್ದಾರೆ. ಆದರೆ, ದೇಶಿಯಯುವ ಜನತೆ ವಿದೇಶಿ ಸಂಸ್ಕೃತಿಗೆ ಮಾರು ಹೊಗುತ್ತಿರುವುದು ಬೇಸರದ ಸಂಗತಿ. ಆದ್ದರಿಂದ ಇಂದು ನಮ್ಮ ದೇಶಿಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಶಾಸಕ ಕೃಷ್ಣಾರೆಡ್ಡಿ ಹೇಳಿದರು.

Advertisement

ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ನಡೆದ ಜಗತ್ತಿಗೆ ಭಾರತದ ಕೊಡುಗೆ ಎಂಬ ವಿಷಯದ ವೆಬಿನಾರ್‌ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಾಚೀನ ಕಾಲದಿಂದ ವ್ಯಾಪಾರ, ವಾಣಿಜ್ಯ, ವಿಜ್ಞಾನ, ತಂತ್ರಾಜ್ಞಾನ ಕ್ಷೇತ್ರದಲ್ಲಿ ಭಾರತವು ಜಗತ್ತಿಗೆ ಮಹತ್ವದ ಕೊಡುಗೆ ನೀಡಿದೆ. ಭಾರತದ ಬಟ್ಟೆ, ಮೆಣಸನ್ನು ಗ್ರೀಕರು ಖರೀದಿಸುತ್ತಿದ್ದರು ಎಂದು ವಿವರಿಸಿದರು.ಬೆಂಗಳೂರು ಉತ್ತರ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು,ಮೈಸೂರು ಪ್ರಾಧ್ಯಾಪಕ ಪ್ರೊ.ಎನ್‌.ಎಸ್‌. ರಂಗರಾಜು,ಪ್ರಾಂಶುಪಾಲ ಪ್ರೊ.ಕೆ.ಆರ್‌.ಶಿವಶಂಕರ್‌ ಪ್ರಸಾದ್‌, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್‌. ರಘು, ಪ್ರೊ. ಎಸ್‌.ಸಣ್ಣೀರಯ್ಯ, ಪ್ರೊ.ಕೆ.ಚಂದ್ರಶೇಖರ್‌, ಪ್ರೊ.ಆರ್‌. ಶ್ರೀದೇವಿ, ಪ್ರೊ.ಕೆ.ಮುನಿಕೃಷ್ಣ, ಡಾ. ಸಿ.ಎಂ.ದಿನೇಶ್ ‌, ಪ್ರೊ ನಾಸೀರ್‌ ಅಹಮದ್‌, ಪ್ರೊ ರತ್ನಮ್ಮ, ಪ್ರೊ ಎಸ್‌ .ಟಿ.ನವೀನ್‌ ಕುಮಾರ್‌, ಎ.ಎಸ್‌.ಅಶೋಕ, ಪ್ರೊ ಆರ್‌.  ಕೆಂಪರಾಜು, ಪ್ರೊ ಹನುಮಂತರೆಡ್ಡಿ, ಪ್ರೊ ರಾಯಪ್ಪ, ಪ್ರೊ ರವಿಕುಮಾರ್‌, ಡಾ.ಮುನಿರಾಜು, ಜಿ.ಎನ್‌.ವೆಂಕಟಾ ಚಲಪತಿ, ಕೆ.ಎನ್‌.ಸತೀಶ್‌, ಎಂ.ಕೃಷ್ಣಮೂರ್ತಿ, ಅಮರ್‌, ಸ್ವಸ್ತಿಕ್‌ ಶಂಕರರೆಡ್ಡಿ, ಶ್ರೀನಿವಾಸ, ನಂಜುಂಡ ಮೂರ್ತಿ, ಮುನಿಸ್ವಾಮಿ, ಚಂದ್ರಶೇಖರ್‌, ಶಿಲ್ಪಾ, ಚಿನ್ನಪ್ಪ ಹಾಜರಿದ್ದರು.

ಸರ್ಕಾರಿ ಯೋಜನೆಗೆ ಸಹಕಾರ ನೀಡಿ :

ಪಾತಪಾಳ್ಯ: ಸರ್ಕಾರದ ಯೋಜನೆಗಳನ್ನುಜನರಿಗೆ ತಲುಪಿಸಲು ಸಹಕಾರ ನೀಡಬೇಕುಎಂದು ಸೋಮನಾಥಪುರ ಪಿಡಿಒ ಕೆ. ವೆಂಕಟಾಚಲಪತಿ ತಿಳಿಸಿದರು.

ಚಿನ್ನಗಾನಪಲ್ಲಿಯಲ್ಲಿ ನಡೆದ ವಾರ್ಡ್‌ ಸಭೆ ಹಾಗೂ ದುಡಿಯೋಣ ಬಾ ಅಭಿಯಾನದಲ್ಲಿ ಮಾತನಾಡಿ, ಗ್ರಾಪಂ ಸದಸ್ಯರು ಸರ್ಕಾರಿ ಯೋಜನೆಗಳ ಬಗ್ಗೆ ಜನರಲ್ಲಿಅರಿವು ಮೂಡಿಸಬೇಕು. ಗ್ರಾಮದ ಸಮಸ್ಯೆ ಗಳನ್ನು ಚರ್ಚಿಸಲು ಗ್ರಾಮದಲ್ಲಿ ನಡೆಯುವ ವಾರ್ಡ್‌ ಸಭೆಗೆ ಹಾಜರಾಗಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿ ಯೋಣ ಬಾ ಅಭಿಯಾನ ಪ್ರಾರಂಭಿಸಿದ್ದು, ಜನರು ಯೋಜನೆ ಬಗ್ಗೆ ಅರಿಯಬೇಕು ಎಂದರು.

Advertisement

ಗ್ರಾಪಂ ಅಧ್ಯಕ್ಷೆ ರತ್ನಮ್ಮ ಮಲ್ಲಿರೆಡ್ಡಿ, ಉಪಾಧ್ಯಕ್ಷೆ ಈಶರವ್ವ , ಕಾರ್ಯದರ್ಶಿ ವೆಂಕಟಶಿವಾ ರೆಡ್ಡಿ, ಡಿ.ಎಸ್‌.ಬೈಯಾರೆಡ್ಡಿ, ಡಿಇಒ ಎ.ಶಂಕರ ಪ್ರಸಾದ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next