Advertisement

ಸಂವಿಧಾನ ರಕ್ಷಿಸಿ ದೇಶ ಉಳಿಸಿ ಸಮಾವೇಶ

08:25 AM Apr 25, 2018 | Karthik A |

ಉಡುಪಿ: ದಲಿತ ಸಂಘರ್ಷ ಸಮಿತಿಗಳ ಮಹಾಒಕ್ಕೂಟ ಹಾಗೂ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಎ. 24ರಂದು ಅಜ್ಜರಕಾಡು ಭುಜಂಗ ಪಾರ್ಕ್‌ ಬಯಲು ರಂಗಮಂಟಪದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಜನ್ಮದಿನಾಚರಣೆ – ಸಂವಿಧಾನ ರಕ್ಷಿಸಿ ದೇಶ ಉಳಿಸಿ ಸಮಾವೇಶ ನಡೆಯಿತು. ನಟ ಪ್ರಕಾಶ್‌ ರೈ ಮಾತನಾಡಿ, ಧರ್ಮ ದೀಪ ಹಚ್ಚುವ ಕೆಲಸ ಮಾಡಬೇಕು ವಿನಾ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಧರ್ಮವು ಮನುಷ್ಯನನ್ನು ವಿಕಾಸದೆಡೆಗೆ ಒಯ್ಯಬೇಕು ಎಂದರು. ರಾಜ್ಯ ದಲಿತ ಸಂಘಟನೆ ಮುಖಂಡ ಮಾವಳ್ಳಿ ಶಂಕರ್‌ ಸಮಾವೇಶ ಉದ್ಘಾಟಿಸಿದರು. ‘ನಾನು ಗೌರಿ’ ಪತ್ರಿಕೆಯ 2ನೇ ಸಂಚಿಕೆಯನ್ನು ಸಭೆಯಲ್ಲಿ ಬಿಡುಗಡೆ ಮಾಡಲಾಯಿತು. 

Advertisement

ಕೋಮು ಸೌಹಾರ್ದ ವೇದಿಕೆಯ ಕೆ.ಎಲ್‌. ಅಶೋಕ್‌, ಒಕ್ಕೂಟದ ಗೌರವಾಧ್ಯಕ್ಷ ಸುಂದರ್‌ ಮಾಸ್ತರ್‌, ಧರ್ಮಗುರು ಫಾ| ವಿಲಿಯಂ ಮಾರ್ಟಿಸ್‌, ವಿವಿಧ ಸಂಘಟನೆಗಳ ಮುಖಂಡರಾದ ಶ್ಯಾಮ್‌ ರಾಜ್‌ ಬಿರ್ತಿ, ಬೊಗ್ರ ಕೊರಗ, ಯಾಸಿನ್‌ ಮಲ್ಪೆ, ಎಸ್‌.ಎಸ್‌. ಪ್ರಸಾದ್‌, ವೆಲೇರಿಯನ್‌ ಫೆರ್ನಾಂಡಿಸ್‌, ಚಂದ್ರ ಅಲ್ತಾರ್‌, ಶ್ಯಾಮ್‌ಸುಂದರ್‌ ಉಪಸ್ಥಿತರಿದ್ದರು. ಜಿ. ರಾಜಶೇಖರ್‌ ಸ್ವಾಗತಿಸಿದರು. ಕೆ. ಫ‌ಣಿರಾಜ್‌ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುನ್ನ ಉಡುಪಿ ಬೋರ್ಡ್‌ ಹೈಸ್ಕೂಲಿನಿಂದ ಕೆ.ಎಂ. ಮಾರ್ಗ- ಹಳೆ ಪೋಸ್ಟ್‌ ಆಫೀಸ್‌ ರಸ್ತೆಯಾಗಿ ಭುಜಂಗ ಪಾರ್ಕ್‌ವರೆಗೆ ಮೆರವಣಿಗೆ ನಡೆಸಲಾಯಿತು. 

ಕ್ಯಾಂಡಲ್‌ ಪ್ರತಿಭಟನೆ
ಸಮಾವೇಶದ ಬಳಿಕ ದೇಶದಲ್ಲಿ ಬಾಲಕಿಯರು, ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರವನ್ನು ಖಂಡಿಸಿ ಕ್ಯಾಂಡಲ್‌ ಉರಿಸಿ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಲಾಯಿತು. ಇತರ ಗಣ್ಯರೊಂದಿಗೆ ಸಾಹಿತಿ ವೈದೇಹಿ, ಪತ್ರಕರ್ತೆ ಸಬೀಹಾ ಫಾತಿಮಾ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next