ಗುಬ್ಬಚ್ಚಿ ಕೀಚ್, ಕೀಚ್ ಅನ್ನುವ, ಕಿಚಿಪಿಚಿ ಅನ್ನು ದನಿ ಈಗ ಕೇಳಿಸುವುದೇ ಇಲ್ಲ. ಏಕೆಂದರೆ, ಗುಬ್ಬಚ್ಚಿಯೇ ನಾಪತ್ತೆಯಾಗುತ್ತಿದೆ. ಕಾರಣ ನೂರಾರು ಇರಬಹುದು. ಆದರೆ, ಅವುಗಳನ್ನು ಪಟ್ಟಿ ಮಾಡುವುದೇ ಈಗ ಒಂದು ಕಾಯಕವಾಗಿರುವುದರಿಂದ, ಗುಬ್ಬಚ್ಚಿಯ ಸಂತತಿ ಉಳಿಸುವುದು ಹೇಗೆ? ಅನ್ನೋದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಂಥ ಸಂದರ್ಭದಲ್ಲಿ ಗುಬ್ಬಿಗಳನ್ನು ಉಳಿಸುವ ಸ್ತುತ್ಯ ಕಾರ್ಯವನ್ನು ಬೆಳಗಾವಿಯ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಸಂಗಮೇಶ ಎನ್. ಪ್ರಭಾಕರ ಅವರು ಮಾಡುತ್ತಿದ್ದಾರೆ. “ರೀ, ಗುಬ್ಬಚ್ಚಿ ಉಳಿಸಿ’ ಅಂತ ಇವರು ಯಾರಿಗೂ ಹೇಳಲಿಲ್ಲ. ಮೊದಲು ಮಾಡಿದ್ದು ಏನೆಂದರೆ, ತಮ್ಮ ಮನೆ ಹಾಗೂ ಅಕ್ಕ ಪಕ್ಕದ ಮನೆಯ ಸುತ್ತ ಗಿಡಗಳನ್ನು ಬೆಳೆಸಿದ್ದು. ಅಷ್ಟೇ ಅಲ್ಲ, ಪಕ್ಷಿಗಳು ಬಂದು ಕೂರಲು ಗೂಡುಗಳನ್ನೂ ತಂದಿಟ್ಟರು, ಸ್ನಾನ ಮಾಡಲು ತೊಟ್ಟಿಗಳನ್ನು ಮಾಡಿದರು. ಸ್ವಲ್ಪ ಸ್ವಲ್ಪ ಗುಬ್ಬಿಚ್ಚಿ ತಿನ್ನುವ ಆಹಾರ ಹಾಕಿದರು. ಈಗ ಏನಾಗಿದೆ ಗೊತ್ತೆ? ಅವರ ಮನೆ, ಗುಬ್ಬಚ್ಚಿಗಳ ತಂಗುದಾಣವಾಗಿದೆ.
ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದ ಕೊಲ್ಲಾಪೂರ ಮಹಾಲಕ್ಷಿ$¾à ದರ್ಶನಕ್ಕೆ ಹೋದಾಗ ಅಲ್ಲಿ ಕೃತಕ ಗುಬ್ಬಚ್ಚಿ ಗೂಡುಗಳನ್ನು ಖರೀದಿಸಿದರು. ಅದನ್ನು ತಂದು ಮನೆಯ ಮುಂದಿನ ಗಿಡಗಳಲ್ಲಿ ಇಟ್ಟರು. ವರ್ಷವಾದರೂ ಗುಬ್ಬಚ್ಚಿಗಳು ಕ್ಯಾರೇ ಅನ್ನಲಿಲ್ಲ. ಕೊನೆಗೆ, ಅರಣ್ಯಾಧಿಕಾರಿಯೂ ಆಗಿರುವ ಸಂಗಮೇಶ್, ತಾವೇ ಗೂಡುಗಳ ವಿನ್ಯಾಸ ಬದಲಿಸಿ, ಗುಬ್ಬಚ್ಚಿಗಳ ಸೈಕಾಲಜಿಗೆ ಹೊಂದುವಂಥ ಗೂಡುಗಳನ್ನು ನಿರ್ಮಿಸಿದರು. ನಂತರ ಒಂದೂಂದಾಗಿ, ಆನಂತರ ಹಿಂಡುಗಟ್ಟಲೆ ಗುಬ್ಬಿಗಳು ನಿತ್ಯ ಬಡ್ಸ್ ನೇಸ್ಟ್‌ಗೆ ಬರತೊಡಗಿದವು. ಅವುಗಳಿಗೆ ಕುಡಿಯಲಿಕ್ಕೆ ನೀರು, ಅನ್ನಕ್ಕಾಗಿ ಕಾಳು ಕಡಿ ಹಾಕುತ್ತಿರುವದರಿಂದ ಇಂದು ಇವರ ಮನೆಯೇ ಗುಬ್ಬಿಗಳ ತವರಾಗಿ ಪರಿವರ್ತನೆಯಾಗಿದೆ.
“ಬಿಡುವಿನ ವೇಳೆಯಲ್ಲಿ ಗುಬ್ಬಚ್ಚಿ ಗಳನ್ನು ಕಾಳಜಿ, ಪ್ರೀತಿಯಿಂದ ನೋಡಿಕೊಳ್ಳುತ್ತೇನೆ. ಮನೆಯ ಆವರಣದಲ್ಲಿರುವ ಗಿಡ ಗಂಟಿ, ಬಗೆ ಬಗೆಯ ಹೂ ಗಿಡಗಳಿಗೆ ನೀರು ಹಾಕಿ ಹಚ್ಚ ಹಸಿರಿರುವಂತೆ ನೋಡಿಕೊಳ್ಳುತ್ತೇನೆ. ಮಕ್ಕಳಾದ ಪ್ರೇರಣಾ, ಪ್ರತೀûಾ ಹಾಗೂ ಪತ್ನಿ ಗೀತಾ ಕೂಡ ಗುಬ್ಬಚ್ಚಿ ಪಕ್ಷಿ$ಸಂಕುಲದ ಉಳಿವಿಗಾಗಿ ನನ್ನ ಜೊತೆ ಕೈ ಜೋಡಿಸಿದ್ದಾರೆ’ ಎನ್ನುತ್ತಾರೆ ಆರ್‌ಎಫ್ಒ ಸಂಗಮೇಶ.
ಅಡಿವೇಶ ಮುಧೋಳ ಬೆಟಗೇರಿ