Advertisement
ನಗರದ ನಾಗವಾರದಲ್ಲಿ ಮಂಗಳವಾರ ಪಾದಚಾರಿ ಮೇಲ್ಸೇತುವೆ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ” ಈ ಮೊದಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ಸಮರ್ಪಕ ವ್ಯವಸ್ಥೆಯೇ ಇರಲಿಲ್ಲ. ಎಷ್ಟೋ ಸಲ ಪಾಲಿಕೆ ಸಿಬ್ಬಂದಿಯೇ ತೆರಿಗೆ ವಸೂಲಿಗೆ ಹೋಗದ ಉದಾಹರಣೆಗಳೂ ಇವೆ. ಆದರೆ, ಈಗ ಎಲ್ಲವರೂ ಬದಲಾಗಿದೆ. ಆ ಪದ್ಧತಿ ಸದ್ಯ ಇಲ್ಲ,” ಎಂದರು.
ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಅಡಿ ಪಾಲಿಕೆ ವ್ಯಾಪ್ತಿಯ ಪ್ರತಿಯೊಬ್ಬ ತೆರಿಗೆ ಪಾವತಿದಾರರ ಮಾಹಿತಿ ಲಭ್ಯವಾಗುತ್ತಿದೆ. ಪ್ರತಿ ವಾರ ತೆರಿಗೆ ಬಾಕಿದಾರರ ಪರಿಶೀಲನೆ ನಡೆಸಿ, ಯಾರ್ಯಾರಿಗೆ ನೋಟಿಸ್ ನೀಡಲಾಗಿದೆ ಎಂಬುದರ ವಿವರಣೆ ಪಡೆಯಲಾಗುತ್ತದೆ. ಹೀಗೇ ಮಾಡಿರುವುದರಿಂದ ಕಳೆದ ಒಂದೇ ವಾರದಲ್ಲಿ ಪಾಲಿಕೆಗೆ 40 ಕೋಟಿ ರೂ. ಆದಾಯ ಹರಿದುಬಂದಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.