Advertisement

Savanur: ತೋಟದಲ್ಲಿ ಕುಸಿದು ಬಿದ್ದು ಮಹಿಳೆ ಮೃತ್ಯು

11:11 AM Jul 24, 2024 | Team Udayavani |

ಸವಣೂರು: ತೋಟದಲ್ಲಿ ಹುಲ್ಲು ತೆಗೆಯುತ್ತಿದ್ದಾಗ ಕುಸಿದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಪಾಲ್ತಾಡಿ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

Advertisement

ಚೆನ್ನಾವರ ನಿವಾಸಿ ದಿ.ಸುಬ್ಬಣ್ಣ ನಾಯ್ಕ ಎಂಬವರ ಪತ್ನಿ ಸೀತಾ ಕುಸಿದು ಬಿದ್ದು ಮೃತಪಟ್ಟ ಮಹಿಳೆ.

ಜು.23ರಂದು ಪಾಲ್ತಾಡಿ ಗ್ರಾಮದ ಚೆನ್ನಾವರದಲ್ಲಿ ತೋಟವೊಂದರಲ್ಲಿ ಹುಲ್ಲು ತೆಗೆಯುತ್ತಿದ್ದಾಗ ಸೀತಾ ಕುಸಿದು ಬಿದ್ದಿದ್ದು,ಕೂಡಲೇ ಅವರನ್ನು ಸ್ಥಳೀಯ ಕ್ಲೀನಿಕ್‌ಗೆ ಕರೆದುಕೊಂಡು ಹೋಗಲಾಯಿತ್ತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಮೃತರು ಎರಡು ಗಂಡು, ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next