Advertisement

ಸವಣೂರು: ವಿದ್ಯಾರ್ಥಿಗಳಿಗೆ ಸಾವಯವ ಕೃಷಿ ಮಾಹಿತಿ

02:45 AM Jul 11, 2017 | Team Udayavani |

ಸವಣೂರು: ಹಿತಕಾರಿ ಹಾಗೂ ಆರೋಗ್ಯದ ದೃಷ್ಟಿಯಿಂದ ಸಾವಯವ ಕೃಷಿ ಪದಾರ್ಥಗಳನ್ನು ಬಳಸುವುದು ಒಳ್ಳೆಯದು ಎಂದು ಭಾರತೀಯ ಕೃಷಿ ಸಂಶೋಧನ ಕೇಂದ್ರ ನವದೆಹಲಿ ಇದರ ನಿರ್ದೇಶಕ ಬಿ.ಕೆ.ರಮೇಶ್‌ ಅವರು ಹೇಳಿದರು.

Advertisement

ಅವರು ಪಾಲ್ತಾಡಿ ಗ್ರಾಮದ ಬಂಬಿಲದ ತನ್ನ ಕೃಷಿ ಕ್ಷೇತ್ರದಲ್ಲಿ  ಸವಣೂರು ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಗೆ ಸಾವಯವ ಕೃಷಿ ಕುರಿತು ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮದಲ್ಲಿ  ಸಾವಯವ ಕೃಷಿ ಕುರಿತು ವಿವರಿಸಿದರು.

ನಮ್ಮ ಹಿರಿಯರು ಕೃಷಿಯನ್ನು ಲಾಭದಾಯಕ ವಾಗಿ ಪರಿಗಣಿಸದೇ ತನ್ನ ಜೀವನೋಪಾಯಕ್ಕಾಗಿ ಬೆಳೆಸುತ್ತಿದ್ದರು. ಆದರೆ ಪ್ರಸ್ತುತ ಸ್ಥಿತಿಯಲ್ಲಿ ಕೃಷಿ ಲಾಭದಾಯಕವಾಗಿ ಬೆಳೆದ ಕಾರಣ ರಾಸಾ ಯನಿಕ ಪದಾರ್ಥಗಳ, ಗೊಬ್ಬರಗಳ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಭೂಮಿಯ ಸತ್ವ ಹಾಗೂ ಫಲವತ್ತತೆ ನಷ್ಟವಾಗುತ್ತಿದೆ. ರಾಸಾಯನಿಕ ಬಳಸಿದ ವರ್ಷ ಉತ್ತಮ ಫಸಲು ದೊರೆಯ ಬಹುದು. ಆದರೆ ಅನಂತರ ಭೂಮಿ ಸತ್ವಹೀನವಾಗಿ ಫಲವತ್ತತೆ ಕಳೆದುಕೊಳ್ಳುತ್ತಿದೆ ಎಂದರು.
ಶಾಶ್ವತವಾಗಿ ಭೂಮಿಯ ಫಲವತ್ತತೆ ಉಳಿ ಯಬೇಕಾದರೆ ಸಾವಯವ ಪದ್ಧತಿ ಬಳಕೆ ಅನಿವಾರ್ಯ.  ಸಾವಯವ ಬೆಳೆಗಳಿಗೆ ಯಾವತ್ತೂ ಉತ್ತಮ ಬೇಡಿಕೆ ಇದೆ ಎಂದು ಹೇಳಿದರು.

ಇದೇ ಸಂಧರ್ಭದಲ್ಲಿ ವಿದ್ಯಾರ್ಥಿಗಳ  ಪ್ರಶ್ನೆ ಗಳಿಗೆ ಅವರು ಉತ್ತರಿಸಿದರು. ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ. ಹಾಗೂ ಜಲಜಾ ರಮೇಶ್‌ ಉಪಸ್ಥಿತರಿದ್ದರು. ಕಾರ್ಯಕ್ರಮವು ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ, ವಿವೇಕಾನಂದ ಯುವಕ ಮಂಡಲ, ಶ್ರೀ ಗೌರಿ ಯುವತಿ ಮಂಡಲ ಮಂಜುನಾಥನಗರ, ಜೇಸಿಐ ಸವಣೂರು ಇವುಗಳ  ಸಹಯೋಗದಲ್ಲಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next