Advertisement
ರಭಸದ ಮಳೆಗೆ ಸವದತ್ತಿ ಯಲ್ಲಮ್ಮನ ದೇವಸ್ಥಾನದಲ್ಲಿ ನೀರು ಧಾರಾಕಾರವಾಗಿ ಹರಿದು ಬಂದಿತು. ಸುಮಾರು ಒಂದೂವರೆ ತಾಸಿಗೂ ಹೆಚ್ಚು ಹೊತ್ತು ಮಳೆ ಬಂದಿದ್ದರಿಂದ ಎಣ್ಣೆ ಹೊಂಡದಲ್ಲಿ ನೀರು ಮೊಣಕಾಲು ವರೆಗೂ ಹರಿದು ಬಂದು ಭಕ್ತರು ಆತಂಕಕ್ಕೀಡಾದರು.
Related Articles
Advertisement
ದೇವಸ್ಥಾನ ಆವರಣದಲ್ಲಿರುವ ಕೆಲವು ಡ್ರೈನೆಜ್‌ಗಳು ಬ್ಲಾಕ್ ಆಗಿದ್ದರಿಂದ ಮಳೆ ನೀರು ಹರಿಯಲು ಜಾಗ ಇರಲಿಲ್ಲ. ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯ ವಸ್ತುಗಳಿಂದ ಬ್ಲಾಕ್ ಆಗಿತ್ತು. ಹೀಗಾಗಿ ನೀರು ದೇವಸ್ಥಾನ ಪೌಳಿಯೊಳಗೆ ಹರಿದು ಬಂತು, ಕೂಡಲೇ ಸಿಬ್ಬಂದಿ ಆ ನೀರನ್ನು ಒಳಗಿನ ಡ್ರೈನೇಜ್‌ಗಳ ಮೂಲಕ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದ್ದರಿಂದ ಯಾವುದೇ ಸಮಸ್ಯೆ ಆಗಲಿಲ್ಲ. ಸುಮಾರು ಒಂದೂವರೆ ತಾಸಿಗೂ ಹೆಚ್ಚು ಹೊತ್ತು ಮಳೆ ಆಯಿತು. ಮಳೆ ಕಡಿಮೆ ಆಗುತ್ತಿದ್ದಂತೆ ನೀರಿನ ರಭಸ ತುಸು ಇಳಿಕೆ ಆಯಿತು ಎಂದು ಸವದತ್ತಿ ಯಲ್ಲಮ್ಮ ದೇವಸ್ಥಾನ ಅಧೀಕ್ಷಕ ಅರವಿಂದ ಮಾಳಗೆ ಉದಯವಾಣಿಗೆ ತಿಳಿಸಿದರು.