Advertisement
ಕಳೆದ ಬನದ ಹುಣ್ಣಿಮೆಯಂದು ದರ್ಶನಾವಕಾಶ ಇರದ ಕಾರಣ ಸುತ್ತಲಿನ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ದೇವಿಗೆ ಪೂಜೆ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಗಳು ನಡೆದವು. ಇದೀಗ ಯಲ್ಲಮ್ಮ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇದ್ದು, ಫೆ.16 ರಂದು ಬಹುದೊಡ್ಡ ಜಾತ್ರೆಯಾದ ಭಾರತ ಹುಣ್ಣಿಮೆ ಜಾತ್ರೆ ಜರುಗಲಿದೆ. ಈ ಜಾತ್ರೆಗೆ ಪ್ರತಿವರ್ಷ 10 ಲಕ್ಷಕ್ಕೂ ಅಧಿಕ ಜನ ಸೇರುತ್ತಿದ್ದರು. ಆದರೆ ಕೋವಿಡ್ ಕಾರಣ ಕಳೆದ 2 ವರ್ಷಗಳಿಂದ ಬನದ ಹಾಗೂ ಭಾರತ ಹುಣ್ಣಿಮೆ ಜಾತ್ರೆಗಳು ಭಕ್ತರಿಲ್ಲದೇ ನಡೆದಿದ್ದು, ಈ ವರ್ಷವಾದರೂ ಭಕ್ತಗಣದೊಂದಿಗೆ ಜಾತ್ರೆ ನಡೆಯಬಹುದೆಂಬ ಆಶಾಭಾವದೊಂದಿಗೆ ತಂಡೋಪ ತಂಡವಾಗಿ ದೇವಸ್ಥಾನದತ್ತ ಆಗಮನ ದಿನನಿತ್ಯ ನಡೆದಿದೆ.
Related Articles
Advertisement
ನೆರೆಯ ಮಹಾರಾಷ್ಟ್ರ, ಆಂದ್ರ, ತೆಲಂಗಾಣ ಮತ್ತು ಗೋವಾಗಳಿಂದ ಈ ಜಾತ್ರೆಗೆಂದು ಹೆಚ್ಚೆಚ್ಚು ಭಕ್ತರು ಬರುತ್ತಾರೆ. ಈ ಕಾರಣದಿಂದ ಸೋಂಕಿನ ತೀವ್ರತೆ ಹೆಚ್ಚುತ್ತಿದ್ದಂತೆ ಜಿಲ್ಲಾಧಿಕಾರಿಗಳು ಜಿಲ್ಲೆಯ 10 ದೇವಸ್ಥಾನಗಳಿಗೆ ನಿರ್ಭಂಧ ವಿಧಿಸಿದ್ದರು. ಇದೀಗ ದೇಶಾದ್ಯಂತ ಸೊಂಕಿನ ತೀವ್ರತೆ ಕಡಿಮೆ ಇದ್ದು, ಆದರೂ ಈ ಊಹಾಪೋಹಗಳು ಹರಿದಾಡುತ್ತಿದೆ. ಇದರಿಂದ ವ್ಯಾಪಾರಸ್ಥರಿಗೆ ದಿಕ್ಕೂ ತೋಚದಂತಾಗಿದೆ. ಕಾರಣ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಈ ಊಹಾಪೋಹಗಳಿಗೆ ತೆರೆ ಎಳೆಯಬೇಕಾಗಿದೆ.
ಕುಡಿಯುವ ನೀರಿನ ಪರದಾಟ: ಗುಡ್ಡದಲ್ಲಿ ಬರುವ ಭಕ್ತರಿಗೆ ಕುಡಿಯುವ ನೀರಿನ ಕೊರತೆ ಇದ್ದು, ಇದೀಗ ಈ ಕೊರತೆ ನಿಗಿಸಲು ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಕ್ರಮ ಜರುಗಿಸಿದ್ದಾರೆ. ಆದರೂ ಸಹ ಭಕ್ತರು ಸಮೀಪದ ಉಗರಗೋಳಕ್ಕೆ ಬಂದು ನೀರು ತುಂಬಿಸಿಕೊಂಡು ಹೋಗುವ ದೃಶ್ಯಗಳು ಸಾಮಾನ್ಯವಾಗಿವೆ.