Advertisement

ಗಂಗೂಲಿಗೆ ಆ್ಯಂಜಿಯೊಪ್ಲಾಸ್ಟಿ, ಮತ್ತೆರಡು ಸ್ಟೆಂಟ್‌ ಅಳವಡಿಕೆ

01:00 AM Jan 29, 2021 | Team Udayavani |

ಕೋಲ್ಕತಾ: ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರಿಗೆ ಗುರುವಾರ ಮತ್ತೂಂದು ಆ್ಯಂಜಿಯೋಪ್ಲಾಸ್ಟಿ ನಡೆಸಿ, ಕಟ್ಟಿ ಕೊಂಡಿದ್ದ ಮತ್ತೆರಡು ಹೃದಯನಾಳಗಳಿಗೆ ಸ್ಟೆಂಟ್‌ ಅಳವಡಿಸಲಾಯಿತು.

Advertisement

ಈ ತಿಂಗಳ ಆರಂಭದಲ್ಲಿ ಲಘು ಹೃದಯಾ ಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೌರವ್‌ ಗಂಗೂಲಿಗೆ ಬುಧವಾರ ಮತ್ತೆ ಎದೆನೋವು ಕಾಣಿಸಿಕೊಂಡಿತ್ತು. ಈ ಬಾರಿ ಅವರನ್ನು ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಗೂಲಿ ಆರೋಗ್ಯ ಸ್ಥಿರವಾಗಿದೆ ಎಂದು ಶಸ್ತ್ರಚಿಕಿತ್ಸೆಯ ಬಳಿಕ ವೈದ್ಯರು ತಿಳಿಸಿದ್ದಾರೆ.

ಜನವರಿ ಮೊದಲ ವಾರ ವುಡ್‌ಲ್ಯಾಂಡ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾಗ ಅವರಿಗೆ ಆ್ಯಂಜಿಯೋಪ್ಲಾಸ್ಟಿ ನಡೆಸಿ ಮೊದಲ ಸ್ಟೆಂಟ್‌ ಅಳವಡಿಸಲಾಗಿತ್ತು. ಆಗ ಐದು ದಿನ ಗಂಗೂಲಿ ಆಸ್ಪತ್ರೆಯಲ್ಲಿದ್ದರು. ಇನ್ನೂ ಎರಡು ನಾಳಗಳಿಗೆ ಮುಂದಿನ ಮೂರು ವಾರಗಳೊಳಗೆ ಸ್ಟೆಂಟ್‌ ಅಳವಡಿಸಲಾಗಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next