ಶಿಲೆಟ್ (ಬಾಂಗ್ಲಾದೇಶ): ಒಂದೆಡೆ ಭಾರತದ ಸೀನಿಯರ್ ತಂಡ ಬಾಂಗ್ಲಾದೇಶದಲ್ಲಿ ಏಕದಿನ ಕ್ಲೀನ್ ಸ್ವೀಪ್ ಭೀತಿಯಲ್ಲಿದ್ದರೆ, ಇನ್ನೊಂದೆಡೆ ಭಾರತ “ಎ’ ತಂಡ ಆತಿಥೇಯ ಬಾಂಗ್ಲಾದೇಶ “ಎ’ ವಿರುದ್ಧದ ಅನ ಧಿಕೃತ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಜಯಭೇರಿ ಮೊಳಗಿಸಿ ಸರಣಿಯನ್ನು ವಶಪಡಿಸಿಕೊಂಡಿದೆ.
ಶುಕ್ರವಾರ ಮುಗಿದ ದ್ವಿತೀಯ ಹಾಗೂ ಅಂತಿಮ ಮುಖಾ ಮುಖೀ ಯಲ್ಲಿ ಅಭಿಮನ್ಯು ಈಶ್ವರನ್ ನಾಯ ಕತ್ವದ ಭಾರತ “ಎ’ ತಂಡ ಇನ್ನಿಂಗ್, 123 ರನ್ನುಗಳಿಂದ ಗೆದ್ದು ಬಂದಿತು. ಮೊದಲ ಪಂದ್ಯ ಡ್ರಾಗೊಂಡಿತ್ತು.
ಬಾಂಗ್ಲಾದ 272ಕ್ಕೆ ಉತ್ತರವಾಗಿ ಭಾರತ 9 ವಿಕೆಟಿಗೆ 562 ರನ್ ಪೇರಿಸಿತು. ಇದರಲ್ಲಿ ಅಭಿಮನ್ಯು ಈಶ್ವರನ್ ಕೊಡುಗೆ 157 ರನ್. 310 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಬಾಂಗ್ಲಾ ದ್ವಿತೀಯ ಸರದಿಯಲ್ಲಿ 187ಕ್ಕೆ ಕುಸಿಯಿತು. ಉತ್ತರಪ್ರದೇಶದ ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ 74 ರನ್ನಿಗೆ 6 ವಿಕೆಟ್ ಉಡಾಯಿಸಿ ಆತಿಥೇಯರನ್ನು ಕಾಡಿದರು. ಉಮೇಶ್ ಯಾದವ್ ಮತ್ತು ನವದೀಪ್ ಸೈನಿ ತಲಾ 2 ವಿಕೆಟ್ ಉರುಳಿಸಿದರು. 2 ಪಂದ್ಯಗಳ ಸರಣಿಯಲ್ಲಿ ಸರ್ವಾಧಿಕ 15 ವಿಕೆಟ್ ಕೆಡವಿದದ್ದು ಸೌರಭ್ ಸಾಧನೆ.
ಬಾಂಗ್ಲಾದ ದ್ವಿತೀಯ ಸರದಿಯಲ್ಲಿ ಬ್ಯಾಟಿಂಗ್ ಹೋರಾಟ ತೋರ್ಪ ಡಿಸಿದ್ದು ಓಪನರ್ ಶದ್ಮನ್ ಇಸ್ಲಾಂ ಮಾತ್ರ. ಅವರು ಕೊನೆಯ ತನಕ ಕ್ರೀಸ್ ಆಕ್ರಮಿಸಿಕೊಂಡು 93 ರನ್ ಮಾಡಿ ಅಜೇಯರಾಗಿ ಉಳಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ಮುಕೇಶ್ ಕುಮಾರ್ 6 ವಿಕೆಟ್ ಕೆಡವಿದ್ದರು. ಆದರೆ ಸೌರಭ್‌ಗೆ ವಿಕೆಟ್ ಲಭಿಸಿ ರಲಿಲ್ಲ. ಇಲ್ಲಿ ಮುಕೇಶ್ ವಿಕೆಟ್ ಲೆಸ್ ಎನಿಸಿದರು. “ಟೆಸ್ಟ್ ಸ್ಪೆಷಲಿಸ್ಟ್’ ಖ್ಯಾತಿಯ ಚೇತೇಶ್ವರ್ ಪೂಜಾರ ಕೂಡ ಈ ಪಂದ್ಯದಲ್ಲಿ ಆಡಿದ್ದು, ಏಕೈಕ ಇನ್ನಿಂಗ್ಸ್‌ನಲ್ಲಿ 52 ರನ್ ಹೊಡೆದರು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ “ಎ’-252 ಮತ್ತು 187 (ಶದ್ಮನ್ ಇಸ್ಲಾಂ ಔಟಾಗದೆ 93, ಶಹಾದತ್ ಹುಸೇನ್ 29, ಜಾಕರ್ ಅಲಿ 22, ಸೌರಭ್ ಕುಮಾರ್ 74ಕ್ಕೆ 6, ಉಮೇಶ್ ಯಾದವ್ 34ಕ್ಕೆ 2, ನವದೀಪ್ ಸೈನಿ 54ಕ್ಕೆ 2). ಭಾರತ-9 ವಿಕೆಟಿಗೆ 562 ಡಿಕ್ಲೇರ್ (ಅಭಿಮನ್ಯು ಈಶ್ವರನ್ 157, ಜಯಂತ್ ಯಾದವ್ 83, ಶಿಖರ್ ಭರತ್ 77, ಪೂಜಾರ 52, ಸೈನಿ ಔಟಾಗದೆ 50, ಹಸನ್ 129ಕ್ಕೆ 3, ಹಸನ್ ಮುರಾದ್ 145ಕ್ಕೆ 3).