ರಿಯಾದ್ (ಸೌದಿ ಅರೇಬಿಯಾ): ಮಹಿಳಾ ಸಬಲೀಕರಣದ ಮಹತ್ವದ ಹೆಜ್ಜೆ ಎಂದೇ ವಿಶ್ಲೇಷಿಸಲಾಗುತ್ತಿರುವ, ಮಹಿಳೆಯರಿಗೆ ವಾಹನ ಚಾಲನೆ ಪರವಾನಗಿಯು ಇದೀಗ ಸೌದಿ ಅರೇಬಿಯಾದ ಮಹಿಳೆಯರು ವಾಹನ ಸಾಹಸ ಪ್ರವೃತ್ತಿಯ ಕಡೆಗೂ ಒಲವು ತೋರುವಂತೆ ಮಾಡಿದೆ. ಮಹಿಳೆಯರು ರೇಸಿಂಗ್ ಟ್ರ್ಯಾಕ್‌ಗಳಲ್ಲಿಯೂ ಕಾರು, ಬೈಕ್‌ಗಳನ್ನು ಓಡಿಸಲು ಮುಂದಾ ಗುತ್ತಿದ್ದಾರೆ. ಹುಡುಗರ ಮುಂದೆ ನಾವೇನು ಕಡಿಮೆ ಎನ್ನುವಂತೆ ಅತಿವೇಗದಲ್ಲಿ ಓಡಿಸುವ ಕ್ರೇಜ್ ಬೆಳೆಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಮರುಭೂಮಿ ನಾಡಿನ ಸಣ್ಣ ಸಣ್ಣ ರೇಸ್ ಟ್ರ್ಯಾಕ್‌ಗಳಲ್ಲಿ ಮಹಿಳೆಯರೂ ಕಾಣಿಸಿ ಕೊಳ್ಳುತ್ತಿದ್ದಾರೆ.
ಇಷ್ಟು ದಿನ ಮಹಿಳೆಯರಿಗೆ ವಾಹನ ಚಾಲನೆಗೆ ನಿಷೇಧವಿದ್ದ ಸೌದಿ ಅರೇಬಿಯಾದಲ್ಲಿ ಅಲ್ಲಿನ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಮಹತ್ವದ ನಿರ್ಧಾರದಿಂದ ಕಳೆದ ಜೂನ್ 23ರಿಂದಲೇ ಮಹಿಳೆಯರೂ ವಾಹನ ಚಾಲನೆಯ ಪರವಾನಗಿ ಪಡೆದು ಓಡಿಸಲಾ ರಂಭಿಸಿದ್ದಾರೆ.
ಹೆಲ್ಮೆಟ್ ಧರಿಸಿಯೇ ವೇಗವಾಗಿ ಕಾರು ಓಡಿಸುವ ಖಯಾಲಿ ಬೆಳೆಸಿಕೊಂಡಿರುವ 30 ವರ್ಷದ ಅಲಿ¾ಮೊನಿ ಈ ಬಗ್ಗೆ ಪ್ರತಿಕ್ರಿಯಿಸುತ್ತಾ, “”ಹೌದು. ನಾನು ವೇಗವನ್ನು ಆರಾಧಿಸುತ್ತೇನೆ. ವೇಗವಾಗಿ ವಾಹನ ಚಾಲನೆ ಮಾಡುವುದನ್ನು ಇಷ್ಟಪಡುತ್ತೇನೆ. 500ಕ್ಕೂ ಹೆಚ್ಚಿನ ಹಾರ್ಸ್‌ಪವರ್‌ನ ಕಾರುಗಳೇ ನನ್ನ ಕನಸಿನ ಕಾರುಗಳು” ಎನ್ನುತ್ತಾರೆ. ರಿಯಾದ್ ದಿರಬ್ ಮೋಟಾರ್ ಪಾರ್ಕ್‌ನಲ್ಲಿ ಅಭ್ಯಾಸ ನಡೆಸುವ ಅಲಿ¾ಮೊನಿ, ಕಾರುಗಳಲ್ಲಿ ಏನೆಲ್ಲಾ ಸಾಹಸ ಚಟುವಟಿಕೆಗಳನ್ನು ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡುತ್ತಿದ್ದಾರೆ.