Advertisement

ಆಲಿಂಗಿಸಿದಕ್ಕೆ ಬಂಧನ

09:00 AM Jul 16, 2018 | Team Udayavani |

ರಿಯಾದ್‌: ಕಟ್ಟರ್‌ ಸಂಪ್ರದಾಯವಾದಿ ರಾಷ್ಟ್ರವಾದ ಸೌದಿ ಅರೇಬಿಯಾದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪುರುಷ ಗಾಯಕರೊಬ್ಬರು ಹಾಡುತ್ತಿದ್ದಾಗ, ವೇದಿಕೆಗೆ ಧಾವಿಸಿ ಬಂದು ಅವರನ್ನು ಆಲಿಂಗಿಸಿದ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ‘ಅರಬ್‌ ಗಾಯನದ ರಾಜಕುಮಾರ’ ಎಂದೇ ಖ್ಯಾತಿ ಗಳಿಸಿರುವ ಮಜೀದ್‌ ಅಲ್‌ ಮೊಹಂದಿಸ್‌ ಅವರು ತೈಫ್ ನಗರದ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ಹಾಡುತ್ತಿದ್ದ ವೇಳೆ, ಒಮ್ಮಿಂದೊಮ್ಮೆಲೇ ಓಡಿ ಬಂದ ಯುವತಿ ಮೊಹಂದಿಸ್‌ರನ್ನು ಅಪ್ಪಿಕೊಂಡಳು. ಕೂಡಲೇ ಪೊಲೀಸರು ಆಕೆಯನ್ನು ಎಷ್ಟು ಎಳೆದರೂ ಆಕೆ ಗಟ್ಟಿಯಾಗಿ ತಬ್ಬಿಕೊಂಡಿದ್ದಳು. ನಂತರ ಆಕೆಯನ್ನು ಬಲವಂತವಾಗಿ ಬಂಧಿಸಿ ಕರೆದೊಯ್ಯಲಾಯಿತು. ಆಕೆಯ ವಿರುದ್ಧ ತನಿಖೆ ನಡೆಸಿ ಶಿಕ್ಷೆ ನೀಡಲಾಗುವುದು ಎಂದು ಮೆಕ್ಕಾ ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next