Advertisement

ನೂಪುರ್ ಶರ್ಮಾ ಅಮಾನತು: ಬಿಜೆಪಿ ನಡೆಯನ್ನು ಸ್ವಾಗತಿಸಿದ ಸೌದಿ ಅರೇಬಿಯಾ

08:58 AM Jun 06, 2022 | Team Udayavani |

ರಿಯಾದ್: ಪ್ರವಾದಿ ಮುಹಮ್ಮದ್ ಕುರಿತು ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರ ಹೇಳಿಕೆಯನ್ನು ಸೌದಿ ಅರೇಬಿಯಾ ಟೀಕಿಸಿದೆ. ಅಲ್ಲದೆ ನುಪೂರ್ ರನ್ನು ಅಮಾನತುಗೊಳಿಸುವ ಬಿಜೆಪಿಯ ಕ್ರಮವನ್ನು ಸ್ವಾಗತಿಸಿದೆ.

Advertisement

ಸೌದಿ ಅರೇಬಿಯಾದ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅಲ್-ಸೌದ್ ನೇತೃತ್ವದ ವಿದೇಶಾಂಗ ಸಚಿವಾಲಯವು ನಂಬಿಕೆಗಳು ಮತ್ತು ಧರ್ಮಗಳನ್ನು ಗೌರವಿಸುವ ದೇಶದ ನಿಲುವನ್ನು ಪುನರುಚ್ಚರಿಸಿದೆ.

ಹರಮೈನ್‌ನ ಜನರಲ್ ಪ್ರೆಸಿಡೆನ್ಸಿಯು ಇಂತಹ ಹೇಯ ಕೃತ್ಯಗಳು ಎಲ್ಲಾ ಧರ್ಮಗಳನ್ನು ಅಗೌರವಗೊಳಿಸುತ್ತವೆ. ಅಂತಹ ಕೃತ್ಯಗಳನ್ನು ಮಾಡುವವರಿಗೆ ಪ್ರವಾದಿಯ ಜೀವನಚರಿತ್ರೆ ತಿಳಿದಿಲ್ಲ ಎಂದು ಹೇಳಿದರು

ಜ್ಞಾನವಾಪಿ ಮಸೀದಿಯ ವಿವಾದದ ಕುರಿತು ಟಿವಿ ಚರ್ಚೆಯ ಸಂದರ್ಭದಲ್ಲಿ, ನೂಪೂರ್ ಶರ್ಮಾ ಅವರು ಇಸ್ಲಾಮಿಕ್ ಧಾರ್ಮಿಕ ಚಿಹ್ನೆಗಳು ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಅಪಹಾಸ್ಯ ಮಾಡಿದರು. ಮುಸ್ಲಿಮರು ‘ಶಿವಲಿಂಗ’ವನ್ನು ಗೇಲಿ ಮಾಡುವ ಮೂಲಕ ಮತ್ತು ಅದನ್ನು ಕಾರಂಜಿ ಎಂದು ಕರೆಯುವ ಮೂಲಕ ಹಿಂದೂ ನಂಬಿಕೆಯನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ:ಕಾಶ್ಮೀರಿ ಪಂಡಿತರಿಗೆ ಮಹಾರಾಷ್ಟ್ರ ರಾಜ್ಯದ ಬಾಗಿಲು ಸದಾ ತೆರೆದಿರುತ್ತದೆ: ಆದಿತ್ಯ ಠಾಕ್ರೆ

Advertisement

ಹೈದರಾಬಾದ್, ಪುಣೆ ಮತ್ತು ಮುಂಬೈನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪೊಲೀಸರು ಶರ್ಮಾ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಅಮಾನತು: ಪ್ರವಾದಿ ಮುಹಮ್ಮದ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಕಾನ್ಪುರ ಹಿಂಸಾಚಾರಕ್ಕೆ ಕಾರಣವಾದ ನೂಪುರ್‌ ಶರ್ಮಾರನ್ನು ಬಿಜೆಪಿಯು ತನ್ನ ವಕ್ತಾರೆ ಸ್ಥಾನದಿಂದ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದೆ. ಪಕ್ಷ ಕೈಗೊಂಡಿರುವ ವಿಚಾರಣೆ ಮುಕ್ತಾಯವಾಗುವವರೆಗೆ ಸದ್ಯದ ತೀರ್ಮಾನ ಊರ್ಜಿತದಲ್ಲಿ ಇರುತ್ತದೆ ಎಂದೂ ಹೇಳಿದೆ.

“ಎಲ್ಲಾ ಧರ್ಮಗಳನ್ನು ಬಿಜೆಪಿ ಗೌರವಿಸುತ್ತದೆ. ಯಾವುದೇ ಧರ್ಮ ಹಾಗೂ ಅದರ ಮುಖಂಡರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದನ್ನು ಪಕ್ಷ ಬೆಂಬಲಿಸುವುದಿಲ್ಲ. ಸಾವಿರಾರು ವರ್ಷಗಳಿಂದ ದೇಶದಲ್ಲಿ ಹಲವಾರು ಧರ್ಮಗಳು ಬೆಳೆದು ಬಂದಿವೆ. ಯಾವುದೇ ಧರ್ಮವನ್ನು ಆಚರಿಸಲು ಸಂವಿಧಾನವೇ ಅವಕಾಶ ಕೊಟ್ಟಿದೆ’ ಎಂದು ಬಿಜೆಪಿ ಹೇಳಿದೆ.

ತಮ್ಮನ್ನು ಅಮಾನತುಗೊಳಿಸಿದ ಬೆನ್ನಲ್ಲೇ ನೂಪುರ್‌ ಶರ್ಮಾ, ತಮ್ಮ ಹೇಳಿಕೆಯನ್ನು ಬೇಷರತ್ತಾಗಿ ವಾಪಸ್‌ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next