Advertisement

ಭಾರತಕ್ಕೆ ತೈಲ ರಫ್ತು: ನಂ.2 ಸ್ಥಾನಕ್ಕೇರಿದ ಸೌದಿ

08:45 PM Sep 15, 2022 | Team Udayavani |

ನವದೆಹಲಿ: ರಷ್ಯಾ-ಉಕ್ರೇನ್‌ ಯುದ್ಧಾನಂತರ ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳುವ ಪ್ರಮಾಣ ಹೆಚ್ಚಿದೆ. ಕಳೆದ ಮೂರು ತಿಂಗಳಲ್ಲಿ ಭಾರತಕ್ಕೆ ಗರಿಷ್ಠ ತೈಲ ರಫ್ತು ಮಾಡುವ ದೇಶಗಳಲ್ಲಿ ರಷ್ಯಾಕ್ಕೆ 2ನೇ ಸ್ಥಾನವಿತ್ತು. ಇದೀಗ ಸೌದಿ ಅರೇಬಿಯ ರಷ್ಯಾವನ್ನು ಸಣ್ಣ ಅಂತರದಿಂದ ಹಿಂದಿಕ್ಕಿ 2ನೇ ಸ್ಥಾನಕ್ಕೆ ಬಂದಿದೆ.

Advertisement

ಕಳೆದ ತಿಂಗಳಲ್ಲಿ ಪ್ರತೀ ದಿನ ಭಾರತ 8,63,950 ಬ್ಯಾರೆಲ್‌ ತೈಲವನ್ನು ಸೌದಿ ಅರೇಬಿಯಿಂದ ತರಿಸಿಕೊಂಡಿದೆ. ಅಂದರೆ ಆಮದು ಪ್ರಮಾಣ ಶೇ.4.8ರಷ್ಟು ಏರಿದೆ. ಅದೇ ರಷ್ಯಾದಿಂದ ಕಳೆದ ತಿಂಗಳು ಪ್ರತೀ ದಿನ 8,55,950 ಬ್ಯಾರೆಲ್‌ ತೈಲವನ್ನು ತರಿಸಿಕೊಳ್ಳಲಾಗಿದೆ. ಇಲ್ಲಿ ಆಮದು ಪ್ರಮಾಣ ಶೇ.2.4ರಷ್ಟು ಇಳಿಕೆಯಾಗಿದೆ.

ಆದರೆ ಅಗ್ರಸ್ಥಾನವನ್ನು ಇರಾಕ್‌ ಉಳಿಸಿಕೊಂಡಿದೆ. ಈ ದೇಶವೇ ಭಾರತಕ್ಕೆ ಗರಿಷ್ಠ ತೈಲವನ್ನು ರಫ್ತು ಮಾಡುವುದು. ಉಕ್ರೇನ್‌ ಮೇಲೆ ದಾಳಿ ಶುರು ಮಾಡಿದ ನಂತರ ರಷ್ಯಾದ ಮೇಲೆ ಜಾಗತಿಕವಾಗಿ ನಿಷೇಧ ಹೇರಲಾಗಿತ್ತು. ಅದರಿಂದ ಆ ದೇಶ ಸಂಪೂರ್ಣವಾಗಿ ಕುಸಿದುಹೋಗಿತ್ತು. ಭಾರತ, ಚೀನಾ ಆಮದು ಮಾಡಿಕೊಳ್ಳುವ ತೈಲದಿಂದ ಅದು ಇನ್ನೂ ಆರ್ಥಿಕವಾಗಿ ಜೀವಂತವಾಗುಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next