Advertisement
ವಿಸ್ತೀರ್ಣದಲ್ಲಿ ಬೆಲ್ಜಿಯಂ ಹಾಗೂ ಮಾಸ್ಕೋ ನಗರ ಗಳಿಗಿಂತಲೂ ಹೆಚ್ಚು ವ್ಯಾಪ್ತಿ ಹೊಂದಿರುವ ಪ್ರದೇಶ ಗಳನ್ನು ಜಾಗತಿಕ ಪ್ರವಾಸೋದ್ಯಮ ತಾಣಗಳಾಗಿ ಪರಿ ವರ್ತಿಸುವ ಯೋಜನೆಯನ್ನು ವಾರದ ಹಿಂದಷ್ಟೇ ಸೌದಿ ಸರಕಾರ ಘೋಷಿಸಿತ್ತು. ಇದೀಗ “ಸೌದಿ ವಿಷನ್ 2030′ ಯೋಜನೆ ಭಾಗವಾಗಿ ಮರುಭೂಮಿಯಲ್ಲಿ ನಗರ ಕಟ್ಟಿ, ಅಲ್ಲಿ ಆರ್ಥಿಕ ವಲಯ, 63,800 ಕೋಟಿ ಮೌಲ್ಯದ ವಾಣಿಜ್ಯ ನಗರ, ಪ್ರವಾಸೋದ್ಯಮ ಮತ್ತು ಮನರಂಜನೆ ತಾಣಗಳನ್ನು ಸೃಷ್ಟಿಸಲು 84 ಪುಟಗಳ ನೀಲಿನಕ್ಷೆ ಸಿದ್ಧಪಡಿಸಿದೆ. ಸೌದಿಯ ಕೆಲವು ಮಹತ್ವಾಕಾಂಕ್ಷಿ ಯೋಜನೆಗಳ ಮಾಹಿತಿ ಇಲ್ಲಿದೆ.
ರೆಡ್ ಸೀ ಕರಾವಳಿ ತೀರದ 50ಕ್ಕೂ ಹೆಚ್ಚು ದ್ವೀಪಗಳನ್ನು, 34,000 ಚ.ಕಿ.ಮೀ (ಬೆಲ್ಜಿಯಂಗಿಂತಲೂ ಹೆಚ್ಚು ವಿಸ್ತೀರ್ಣ) ಪ್ರದೇಶದಲ್ಲಿ ವಿಶ್ವವೇ ನಿಬ್ಬೆರಗಾಗಿ ನೋಡು ವಂಥ ಜಾಗತಿಕ ಪ್ರವಾಸೋದ್ಯಮ ತಾಣ ಸೃಷ್ಟಿಸುವ ಯೋಜನೆ. 2022ರ ಹೊತ್ತಿಗೆ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನಾಲೆಡ್ಜ್ ಇಕನಾಮಿಕ್ ಸಿಟಿ
ಮದೀನಾಗೆ ಹೊಂದಿಕೊಂಡಂತೆ ರೂಪುಗೊಳ್ಳುವ ಈ ನವ ನಗರ, ಸೌದಿಯ ಮೊಟ್ಟಮೊದಲ ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಬೌದ್ಧಿಕ ಸಂಪತ್ತು, ಜ್ಞಾನಾಧಾರಿತ ಉದ್ಯಮಗಳು, ವೈದ್ಯಕೀಯ, ಆತಿಥ್ಯ, ಪ್ರವಾಸೋದ್ಯಮ, ಮಲ್ಟಿ ಮೀಡಿಯಾ ಸೇರಿ ಹಲವು ಸ್ಮಾರ್ಟ್ ಅನ್ನಬಹುದಾದ ಅಂಶಗಳು ಇಲ್ಲಿರಲಿವೆ. ಇವುಗಳ ಜೊತೆಗೇ “ಕಿಂಗ್ ಅಬ್ದುಲ್ಲಾ ಇಕನಾಮಿಕ್ ಸಿಟಿ’, “ಕಿಂಗ್ ಅಬ್ದುಲ್ಲಾ ಫೈನಾನ್ಷಿಯಲ್ ಡಿಸ್ಟ್ರಿಕ್ಟ್’, “ಪ್ರಿನ್ಸ್ ಅಬ್ದುಲ್ಲಾಝಿಸ್ ಬಿನ್ ಮೌಸಯೀದ್ ಇಕನಾಮಿಕ್ ಸಿಟಿ’ ಯೋಜನೆಗಳೂ “ಸೌದಿ ವಿಷನ್ 2030’ಯ ಭಾಗಗಳಾಗಿವೆ.
Related Articles
ಮೆಕ್ಕಾದ ಪಶ್ಚಿಮ ಭಾಗಕ್ಕೆ ಹೊಂದಿಕೊಂಡಂತೆ ಅಲ್ ಫೈಸಲಿಯಾ ಯೋಜನೆ ಮೈದಳೆಯಲಿದೆ. 2,450 ಚದರ ಕಿ.ಮೀ. (ಮಾಸ್ಕೋ ನಗರದ ವಿಸ್ತೀರ್ಣದಷ್ಟು) ವ್ಯಾಪ್ತಿಯಲ್ಲಿ ರೂಪುಗೊಳ್ಳುವ ಈ ಯೋಜನೆ ಅಡಿ, ವಸತಿ ಕಟ್ಟಡಗಳು, ಮನರಂಜನಾ ಸೌಲಭ್ಯ, ಏರ್‌ಪೋರ್ಟ್ ಮತ್ತು ಸೀ ಪೋರ್ಟ್‌ಗಳ ಸೃಷ್ಟಿಯಾಗಲಿದೆ. ಈ ಯೋಜನೆ 2050ರ ಹೊತ್ತಿಗೆ ಪೂರ್ಣಗೊಳ್ಳಲಿದೆ.
Advertisement
ಮನೋರಂಜನಾ ನಗರಅಲ್ ಖೀದಿಯಾ ನಗರದಲ್ಲಿ ಕ್ರೀಡೆ, ಸಂಸ್ಕೃತಿ ಒಳಗೊಂಡಂತೆ ಮನೋರಂಜನಾ ಸಾಮ್ರಾಜ್ಯ ನಿರ್ಮಾಣವಾಗಲಿದೆ. 334 ಚದರ ಕಿ.ಮೀ ವ್ಯಾಪಿಸಲಿರುವ ಈ ಯೋಜನೆ ಅಡಿ ಸಫಾರಿ ಪ್ರದೇಶ ಹಾಗೂ ಸಿಕ್ಸ್ ಫ್ಲಾಗ್ ಎಂಟಟೈìನ್ಮೆಂಟ್ ಕಾರ್ಪ್ ಥೀಮ್ ಪಾರ್ಕ್‌ಗಳು ತಲೆಯೆತ್ತಲಿವೆ. 2018ರಲ್ಲಿ ಕಾಮಗಾರಿ ಆರಂಭಿಸಿ, 2022ರವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.