Advertisement

ಯೋಗಕ್ಕೆ ಬಾಗಿದ ಸೌದಿ ಅರೇಬಿಯಾ !;ಕ್ರೀಡಾ ಮಾನ್ಯತೆ 

03:44 PM Nov 14, 2017 | Team Udayavani |

ರಿಯಾದ್‌: ಸೌದಿ ಅರೇಬಿಯಾ ಯೋಗಕ್ಕೆ ಸಂಪೂರ್ಣ ಮಾನ್ಯತೆ ನೀಡಿದ್ದು ಕ್ರೀಡೆಯನ್ನಾಗಿ ಪರಿಗಣಿಸಿ ದೇಶದಲ್ಲಿ ಯೋಗ ಕಲಿಕೆಗೆ ಸರ್ಕಾರ ಅನುಮತಿ ನೀಡಿದೆ. 

Advertisement

ಭಾರತೀಯ ಮೂಲದ ಯೋಗಕ್ಕೆ ಮಾನ್ಯತೆ ನೀಡಿದ ಮೊದಲ ಮುಸ್ಲಿಂ ರಾಷ್ಟ್ರವೆಂಬ ಖ್ಯಾತಿಗೆ ಸೌದಿ ಅರೇಬಿಯಾ ಪಾತ್ರವಾಗಿದೆ.  

ಈ ಹಿಂದೆ ಜೂನ್‌ 21 ರಂದು ನಡೆಸಲಾಗುವ ವಿಶ್ವ ಯೋಗದಿನದ ಸಹಭಾಗಿತ್ವವನ್ನು  ಸೌದಿ ಅರೇಬಿಯಾ ಪಡೆದಿರಲಿಲ್ಲ. ಆದರೆ  ಈಗ ಕೈಗೊಂಡಿರುವ  ನಿರ್ಧಾರ ಐತಿಹಾಸಿಕವಾಗಿದ್ದು , ಬದಲಾವಣೆಯ ಸೂಚನೆ ಎನ್ನಲಾಗಿದೆ. 

ಇತ್ತೀಚೆಗೆ ಜಾರ್ಖಂಡ್‌ನ‌ ರಾಂಚಿಯಲ್ಲಿ ಮುಸ್ಲಿಂ ಯೋಗ ಶಿಕ್ಷಕಿ ರಾಫಿಯಾ ನಾಝ್  ವಿರುದ್ದ ಫ‌ತ್ವಾ ಹೊರಡಿಸಿ ಆಕೆಯ ನಿವಾಸದ ಮೇಲೂ ಕಲ್ಲು ತೂರಾಟ ನಡೆಸಲಾಗಿತ್ತು. ಈ ವೇಳೆ ನಾಝ್ ಬೆಂಬಲಕ್ಕೆ ಬಂದಿದ್ದ ಬಾಬಾ ರಾಮ್‌ದೇವ್‌ ಅವರು ಯೋಗವನ್ನು ಧರ್ಮದ ಹೆಸರಿನಲ್ಲಿ ನೋಡಬೇಡಿ , ಸೌದಿ ಅರೇಬಿಯಾದಲ್ಲೂ ಯೋಗಕ್ಕೆ ಮಾನ್ಯತೆ ಇದೆ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next