Advertisement

UAEಯಲ್ಲಿ ವ್ಯಾಟ್‌ ಜಾರಿ

11:00 AM Jan 02, 2018 | Karthik A |

ರಿಯಾದ್‌: ಸೌದಿ ಅರೇಬಿಯಾ ಯುಎಇ ಪ್ರವಾಸಕ್ಕೆ ಹೋಗುವ ಇರಾದೆ ಉಂಟಾ? ಹಾಗಿದ್ದರೆ ನೀವು ಹೊಂದಿಸಿಕೊಂಡ ಹಣಕ್ಕಿಂತ ಕೊಂಚ ಹೆಚ್ಚು ಮೊತ್ತವನ್ನು ತೆಗೆದುಕೊಂಡು ಹೋಗುವುದು ಉತ್ತಮ. ಸೋಮವಾರದಿಂದ ಜಾರಿಯಾಗುವಂತೆ ಇದೆ ಮೊದ ಲ ಬಾರಿಗೆ ಅಲ್ಲಿ ಎಲ್ಲಾ ರೀತಿಯ ಸೇವೆಗಳು ಮತ್ತು ವಸ್ತುಗಳ ಖರೀದಿಯ ಮೇಲೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಜಾರಿ ಮಾಡಲಾಗಿದೆ.

Advertisement

ಹೀಗಾಗಿ ಶೇ.5ರಷ್ಟು ತೆರಿಗೆ ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗುತ್ತದೆ. ಆಹಾರ, ಬಟ್ಟೆ, ಇಲೆಕ್ಟ್ರಾನಿಕ್‌ ವಸ್ತುಗಳು, ಫೋನ್‌, ನೀರು ಮತ್ತು ವಿದ್ಯುತ್‌ ಬಿಲ್‌, ಹೋಟೆಲ್‌ ರಿಸರ್ವೇಷನ್‌ಗಳ ಮೇಲೆ ಪ್ರವಾಸಿಗರು ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗುತ್ತದೆ. ಪ್ರಥಮ ವರ್ಷದಲ್ಲಿ ಹೊಸ ತೆರಿಗೆಯಿಂದ 21 ಸಾವಿರ ಕೋಟಿ ರೂ. (12 ಬಿಲಿಯನ್‌ ದಿರ್‌ಹಮ್‌) ಸಂಗ್ರಹವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸೌದಿ ಅರೇಬಿಯಾದಲ್ಲಿ ತಂಬಾಕು ಉತ್ಪನ್ನಗಳು ಮತ್ತು ತಂಪು ಪಾನೀಯಗಳ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಯುಎಇಯಲ್ಲಿ ರಸ್ತೆ ಬಳಕೆಗೆ ಇರುವ ಟೋಲ್‌ ಪರಿಷ್ಕರಿಸಲಾಗಿದೆ ಮತ್ತು ಪ್ರವಾಸೋದ್ಯಮ ತೆರಿಗೆ ವಿಧಿಸಲಾಗಿದೆ.

ತೈಲ ಕ್ಷೇತ್ರದಿಂದ ಸೌದಿಗೆ ಶೇ.90ರಷ್ಟು ಆದಾಯ ಬಂದರೆ, ಯುಎಇಗೆ ಶೇ.80ರಷ್ಟು ಬರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕಚ್ಚಾ ತೈಲ ಕ್ಷೇತ್ರದಲ್ಲಿ ಭಾರೀ ಕುಸಿತ ಉಂಟಾಗಿರುವುದರಿಂದ ಯುಎಇಯ ಅರ್ಥ ವ್ಯವಸ್ಥೆ ಕುಸಿಯಲಿದೆ ಎಂಬ ಶಂಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ ಬದಲಿ ಆದಾಯದ ಮೂಲಗಳನ್ನು ಕಂಡುಕೊಳ್ಳಲು ಮುಂದಾಗಿದೆ. ಐಎಂಎಫ್ ಕೂಡ ಬದಲಿ ವ್ಯವಸ್ಥೆ ಮಾಡುವಂತೆ ಸೂಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next