ದುಬೈ: 50 ಸಾವಿರ ಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೌದಿ ಅರೇಬಿಯಾದ ರೋಬೋ ಸಿಟಿಯಲ್ಲಿ ರಾಜ ಸಲ್ಮಾನ್ ಮೊದಲ ಸಂಪುಟ ಸಭೆ ನಡೆಸಿದ್ದಾರೆ. “ನಿಯೋಮ್’ ಎಂದು ಹೆಸರಿಡಲಾದ ಈ ನಗರದಲ್ಲಿ ಮನುಷ್ಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರೋಬೋಗಳೇ ಇರಲಿವೆ. ಕೆಂಪು ಸಮುದ್ರದ ದಂಡೆಯ ಮೇಲೆ ಇರುವ ಈ ನಗರ ಸೌದಿ ರಾಜ ಸಲ್ಮಾನ್‌ರ ಕನಸಿನ ನಗರವಾಗಿದೆ. ಸಂಪುಟ ಸಭೆ ನಡೆಸುವ ಮೂಲಕ ನಗರದ ಅಭಿವೃದ್ಧಿಗೆ ಬೆಂಬಲ ವ್ಯಕ್ತಪಡಿಸಿದಂತಾಗಿದೆ. ಕೆಂಪು ಸಮುದ್ರದಲ್ಲಿ ಸೇತುವೆ ನಿರ್ಮಿಸಿ ಈಜಿಪ್ಟ್ ಹಾಗೂ ಆಫ್ರಿಕಾ ದೇಶಗಳೊಂದಿಗೆ ಸಂಪರ್ಕ ಸಾಧಿಸುವ ಪ್ರಸ್ತಾವನೆಯನ್ನೂ ಮಾಡಲಾಗಿದೆ. 10 ಸಾವಿರ ಚದರ ಮೈಲಿಗಳಷ್ಟು ಪ್ರದೇಶವನ್ನು ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಈ ನಗರ ನಿರ್ಮಿಸುವ ಬಗ್ಗೆ ಘೋಷಣೆ ಮಾಡಲಾಗಿತ್ತು. ತೈಲ ಬೆಲೆ ಇಳಿಕೆಯಿಂದಾಗಿ ಆರ್ಥಿಕತೆ ಕುಸಿತ ಕಂಡಿದ್ದು, ಆದಾಯಕ್ಕಾಗಿ ಪ್ರವಾಸೋದ್ಯಮದತ್ತ ದೇಶ ಹೊರಳಿಕೊಂಡಿದೆ.