Advertisement

ಸತ್ಯದ ತುಳುವೆರ್ ಸಂಘಟನೆಯಿಂದ ಮಾನವೀಯ ಸ್ಪಂದನೆ: ಬಡ ಮಹಿಳೆಗೆ ನೂತನ ಮನೆ ನಿರ್ಮಿಸಿ ಹಸ್ತಾಂತರ

08:44 AM Jun 14, 2021 | Team Udayavani |

ಕಟಪಾಡಿ: ಲಾಕ್ ಡೌನ್ ಸಂಕಷ್ಟದ ನಡುವೆಯೂ ಸತ್ಯದ ತುಳುವೆರ್ ಸಂಘಟನೆಯು ಅಶಕ್ತ ವಯೋವೃದ್ಧ ಬಡ ಮಹಿಳೆ ಶಂಕರಪುರ ಶಿವಾನಂದ ನಗರ ಕಾಲೋನಿ ಬಬ್ಬುಸ್ವಾಮಿ ಗುಡಿ ಬಳಿಯ ನಿವಾಸಿ ಪ್ರೇಮಾ ಅವರ ಸಂಕಷ್ಟಕ್ಕೆ ಮಾನವೀಯ ಸ್ಪಂದನೆಯ ಮೂಲಕ ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಮನೆಯನ್ನು ಕೆಡವಿ ಸುಮಾರು 5.5 ಲಕ್ಷ ರೂ. ವೆಚ್ಚದಲ್ಲಿ ಕಟ್ಟಿ ಕೊಟ್ಟ ನೂತನ ಮನೆಯ ಗೃಹ ಪ್ರವೇಶ ನಡೆಸಿತು.

Advertisement

ಕಳೆದ ಜನವರಿ 27ರಂದು ಯಾವುದೇ ಕ್ಷಣದಲ್ಲಿ ಧರಾಶಾಹಿಯಾಗಿ ಅಪಾಯವನ್ನು ಸೃಷ್ಟಿಸಲಿದ್ದ ಈಕೆಯ ಹಳೆಯ ಮನೆಯನ್ನು ಕೆಡವಿದ ಈ ಸತ್ಯದ ತುಳುವೆರ್ ತಂಡವು ನೂತನ ಮನೆ ಕಟ್ಟಲು ಮುಹೂರ್ತವಿಟ್ಟಿತ್ತು. ಬಳಿಕ ವಿಧಿಸಲ್ಪಟ್ಟ ಲಾಕ್ ಡೌನ್ ಸಂದರ್ಭದ ಸಂಕಷ್ಟವನ್ನೂ ಮೆಟ್ಟಿ ನಿಂತ ಈ ತಂಡವು ಛಲಬಿಡದೆ ದಾನಿಗಳ ಸಹಕಾರವನ್ನು ಪಡೆದುಕೊಂಡು ಇದೀಗ ಸೂಕ್ತ ಧಾರ್ಮಿಕ ಪ್ರಕ್ರಿಯೆಯ ಮೂಲಕ ಗೃಹ ಪ್ರವೇಶವನ್ನು ನಡೆಸಿ ಬಡ ಮಹಿಳೆ ಪ್ರೇಮಾ ಅವರಿಗೆ ಈ ಮನೆಯನ್ನು ಹಸ್ತಾಂತರಿಸಿದೆ.

ಸತ್ಯದ ತುಳುವೆರ್ ಸಂಘಟನೆಯ ಗೌರವಾಧ್ಯಕ್ಷೆ, ಮಾಜಿ ಜಿ.ಪಂ. ಸದಸ್ಯೆ ಗೀತಾಂಜಲಿ ಎಂ. ಸುವರ್ಣ ಅವರು ಉದಯವಾಣಿಗೆ ಪ್ರತಿಕ್ರಿಯಿಸಿ ಸರಕಾರಿ ಸವಲತ್ತು ವಂಚಿತ ಬಡಕುಟುಂಬದ ಪ್ರೇಮಾ ಅವರ ಮನೆಯು ಯಾವುದೇ ಕ್ಷಣದಲ್ಲಿ ಧರಾಶಾಹಿಯಾಗುವ ಸಾಧ್ಯತೆ ಇತ್ತು. ಅದನ್ನು ಮನಗಂಡು ದಾನಿಗಳ ಸಹಕಾರ ಪಡೆದುಕೊಂಡು ಸುಮಾರು 5.5 ಲಕ್ಷ ರೂ ವೆಚ್ಚದ ನೂತನ ಮನೆಯನ್ನು ಕಟ್ಟಿಕೊಡಲಾಗಿದೆ. ಕೋವಿಡ್ ಸಂಕಷ್ಟದ ನಡುವೆಯೇ ದಾನಿಗಳ ಸಹಕಾರ ಸ್ಮರಣೀಯ. ಅಶಕ್ತ ಪ್ರೇಮಾ ಅವರಿಗೆ ಮಳೆಗಾಲದಲ್ಲಿ ಸುವ್ಯವಸ್ಥೆಯನ್ನು ಕಲ್ಪಿಸಿದ ಸಂತೃಪ್ತಿ ನಮ್ಮ ಸತ್ಯದ ತುಳುವೆರ್ ತಂಡಕ್ಕಿದೆ  ಎಂದರು.

ಇದನ್ನೂ ಓದಿ:ಪೊಲೀಸರ ಸ್ಟಾರ್ ಕಿತ್ತು, ಅವರಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ:ಸರಕಾರಕ್ಕೆ ಡಿಕೆಶಿ ತರಾಟೆ

ಸಾಹಿತಿ ಸೌಮ್ಯಾ ಪುತ್ರನ್ ಸತ್ಯದ ತುಳುವೆರ್ ಮನೆಯನ್ನು ದೀಪ ಬೆಳಗಿಸಿದರು. ಗಣೇಶ್ ಪುರೋಹಿತ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

Advertisement

ಈ ಸಂದರ್ಭ ಸತ್ಯದ ತುಳುವೆರ್ ಸಂಸ್ಥಾಪಕ ಪ್ರವೀಣ್ ಕುರ್ಕಾಲು, ಅಧ್ಯಕ್ಷ  ಪ್ರವೀಣ್ ಬಂಗೇರ ಮಲ್ಪೆ, ಉಪಾಧ್ಯಕ್ಷ ಶ್ರೀನಿವಾಸ ತೊಟ್ಟಂ, ವಿನುತ್ ಹಿರಿಯಡ್ಕ, ಪ್ರ.ಕಾರ್ಯದರ್ಶಿ ಮನೀಷ್ ಪೂಜಾರಿ ಕುರ್ಕಾಲು, ಕೋಶಾಕಾರಿ ಶಿವಪ್ರಸಾದ್  ಕುರ್ಕಾಲು,ಚೇತನ್ ಆಚಾರ್ಯ, ತಂಡದ ಸದಸ್ಯರು, ಮಹಿಳಾ ಘಟಕದ ಪ್ರಮುಖರೆಲ್ಲಾ ಈ ಪರಿಶ್ರಮದ ಸಂಭ್ರಮದಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next