Advertisement

Kannda cinema; ‘ಸತ್ಯಂ’ ತಂದ ಸಂತೋಷ; ಟೀಸರ್ ಗೆ ಒಂದು ಮಿಲಿಯನ್ ಹಿಟ್ಸ್

06:23 PM Nov 27, 2023 | Team Udayavani |

ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಿರುವ “ಸತ್ಯಂ’ ಸಿನಿಮಾದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈಗ ಟೀಸರ್‌ ಒಂದು ಮಿಲಿಯನ್‌ ಹಿಟ್ಸ್‌ ದಾಖಲಿಸುವ ಮೂಲಕ ಚಿತ್ರತಂಡ ಖುಷಿಗೆ ಕಾರಣವಾಗಿದೆ. ತಾತ ಮೊಮ್ಮಗನ ಸುತ್ತ ನಡೆಯುವ ಫ್ಯಾಮಿಲಿ ಕಂ ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಸತ್ಯಂ’ ಸಿನಿಮಾವನ್ನು “ಶ್ರೀಮಾತಾ ಕ್ರಿಯೇಶನ್ಸ್‌’ ಬ್ಯಾನರಿನಲ್ಲಿ ಮಹಂತೇಶ್‌ ವಿ. ಕೆ. ನಿರ್ಮಿಸಿದ್ದು, ಅಶೋಕ್‌ ಕಡಬ ನಿರ್ದೇಶನ ಮಾಡಿದ್ದಾರೆ. ಸಂತೋಷ್‌ ಈ ಚಿತ್ರದ ನಾಯಕ. ರಂಜಿನಿ ರಾಘವನ್‌ ನಾಯಕಿ.

Advertisement

“ನಾನು ಈ ಹಿಂದೆ ಮಾಡಿದ “ಕೆಂಪ’, “ಕರಿಯ-2′, “ಗಣಪ’ ಸಿನಿಮಾಗಳಿಗಿಂತ ಸಂಪೂರ್ಣ ವಿಭಿನ್ನವಾಗಿ “ಸತ್ಯಂ’ ಸಿನಿಮಾ ಮೂಡಿಬಂದಿದೆ. ನನ್ನ ತಂದೆ ಆರಂಭದಲ್ಲಿ ಈ ಕಥೆಯನ್ನು ಒಪ್ಪಿ, ಇದೊಂದು ಒಳ್ಳೆಯ ಸಿನಿಮಾವಾಗುತ್ತದೆ ಎಂದಿದ್ದರು. ಈ ಸಿನಿಮಾದಲ್ಲಿ ಸತ್ಯ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಎಲ್ಲ ಥರದ ಎಂಟರ್‌ಟೈನ್ಮೆಂಟ್‌ ಅಂಶಗಳಿರುವ ಈ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ’ ಎನ್ನುವುದು ನಾಯಕ ಸಂತೋಷ್‌ ಮಾತು.

“ಇದೊಂದು ಫ್ಯಾಮಿಲಿ ಕಂಟೆಂಟ್‌ ಇರುವಂಥ ಸಸ್ಪೆನ್ಸ್‌-ಥ್ರಿಲ್ಲರ್‌ ಸಿನಿಮಾ. ಪಂಜುರ್ಲಿ ದೈವ ಆರಾಧಿಸುವ ರಾಜ ಮನೆತನದ ಕುಟುಂಬದಲ್ಲಿ ಒಂದು ಕಳಂಕ ನಡೆದಿರುತ್ತದೆ. ಅದರಿಂದ ಸಾವು ನೋವುಗಳು ಆಗಿದ್ದು, ಅದರಲ್ಲಿ ಒಂದು ವಂಶದ ಕುಡಿ ಸುಮಾರು 40 ವರ್ಷದ ನಂತರ ಭೂತ ಕೋಲದ ಪೂಜೆಗೆಂದು ಆ ಊರಿಗೆ ಬಂದಾಗ ನಡೆಯುವ ಕಥೆಯಿದು. ಮೂರು ಶೇಡ್‌ಗಳು ಇರುವ ಈ ಚಿತ್ರಕ್ಕೆ ದೊಡ್ಡ ಮಟ್ಟದ ಸೆಟ್‌ಗಳನ್ನು ಹಾಕಿದ್ದೆವು. 2019ರಲ್ಲೇ ಈ ಕಥೆ ಮಾಡಿಕೊಂಡಿದ್ದರೂ, ಕೋವಿಡ್‌ ಕಾರಣದಿಂದ ಸಿನಿಮಾ ಬಿಡುಗಡೆ ತಡವಾಯಿತು’ ಎಂಬುದು ನಿರ್ದೇಶಕ ಅಶೋಕ್‌ ಕಡಬ ಮಾತು.

Advertisement

Udayavani is now on Telegram. Click here to join our channel and stay updated with the latest news.

Next