ಜಕಾರ್ತಾ: ಭಾರತದ ಯುವ ಬ್ಯಾಡ್ಮಿಂಟನ್ ಪಟುಗಳಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇತಿಹಾಸವನ್ನು ಬರೆದಿದ್ದಾರೆ. ಭಾನುವಾರ ಜಕಾರ್ತಾದಲ್ಲಿ ನಡೆದ ಬ್ಯಾಡ್ಮಿಂಟನ್ ಸೂಪರ್ 1000 ಫೈನಲ್ ನಲ್ಲಿ ಪ್ರಶಸ್ತಿಯನ್ನು ಗೆದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಡಬಲ್ಸ್ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಮತ್ತು ಕಳೆದ ವರ್ಷ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಕಂಚು ಗೆದ್ದಿದ್ದ ವಿಶ್ವದ ನಂ.6 ಜೋಡಿ, ಜಕಾರ್ತದಲ್ಲಿ ನಡೆದ 2 ಗೇಮ್ ಗಳ ಅದ್ಭುತ ಹೋರಾಟದಲ್ಲಿ ಮಲೇಷ್ಯಾದ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕಾ ಅವರನ್ನು ಸೋಲಿಸಿದರು.
ಇದನ್ನೂ ಓದಿ:Babita Phogat ನಮ್ಮ ಪ್ರತಿಭಟನೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರು: ಸಾಕ್ಷಿ ಮಲಿಕ್
ಇಂಡೋನೇಷ್ಯಾ ಓಪನ್ ನ ಪುರುಷರ ಡಬಲ್ಸ್ ಫೈನಲ್ ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ ಅವರು ಮಲೇಷ್ಯಾದ ಆರೋನ್ ಚಿಯಾ ಮತ್ತು ವೂಯಿ ಯಿಕ್ ಸೋಹ್ ಅವರನ್ನು 21-17, 21-18 ರಿಂದ ಸೋಲಿಸಿದರು.
ನಿಧಾನಗತಿಯ ಆರಂಭವನ್ನು ಪಡೆದರೂ ಭಾರತೀಯ ಜೋಡಿ ನೇರ ಗೇಮ್ ಗಳಲ್ಲಿ ಪಂದ್ಯವನ್ನು ಗೆದ್ದರು. ಭಾರತದ ಜೋಡಿ ತಮ್ಮ ಮೊದಲ ಸೂಪರ್ 1000 ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದರು.
ಪ್ರಸಕ್ತ ವಿಶ್ವ ಚಾಂಪಿಯನ್ಸ್ ಮಲೇಷ್ಯಾ ಜೋಡಿಯನ್ನು ಏಷ್ಯನ್ ಚಾಂಪಿಯನ್ ಕೂಡ ಆಗಿರುವ ಭಾರತೀಯರು ಕೇವಲ 43 ನಿಮಿಷಗಳಲ್ಲಿ ಸೋಲಿಸಿದರು.