Advertisement

ಮೋಕ್ಷಕ್ಕಾಗಿ ಸತ್ಸಂಗ ಅಗತ್ಯ: ಗುರೂಜಿ

10:43 AM Jan 07, 2019 | |

ಇಂಚಗೇರಿ: ಮಾನವ ಜನ್ಮ ಸಾರ್ಥಕವಾಗಲು, ಮೋಕ್ಷಕ್ಕಾಗಿ ಸತ್ಸಂಗ ಅಗತ್ಯ ಎಂದು ಮೈಸೂರು-ರಾಯಚೂರಿನ ಗುರುದತ್ತ ಗುರೂಜಿ ಹೇಳಿದರು. ಬಾಲಗಾಂವ-ಕಾತ್ರಾಳ ಗುರುದೇವ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವ ಸದ್ವಿಚಾರ, ಭಕ್ತಿ, ಜ್ಞಾನ ಮಾರ್ಗಗಳಿಂದ ಉತ್ತಮ ವ್ಯಕ್ತಿಯಾಗಲು ಸಾಧ್ಯ. ಮನುಷ್ಯ ಆಲಸ್ಯ ತೊಡೆದು ಹಾಕಿ, ಆರೋಗ್ಯಕರ ಶರೀರಕ್ಕಾಗಿ ನಿತ್ಯ ಯೋಗ, ವ್ಯಾಯಾಮ ಅಳವಡಿಸಿಕೊಂಡಾಗ ಮನಸ್ಸು ಶುದ್ಧಗೊಂಡು ನಿರ್ಮಲವಾಗಲು ಸಾಧ್ಯ ಎಂದರು.

Advertisement

ವೀರೂಪಾಕ್ಷಿ ಗುರೂಜಿ ಮಾತನಾಡಿ, ಮನಸ್ಸುದ್ಧೀಕರಣಕ್ಕೆ ದೇವರ ನಾಮಸ್ಮರಣೆ ಅವಶ್ಯ. ಭಕ್ತಿ, ಭಾವ, ಶೃದ್ಧೆಯಿಂದ ಪೂಜಿಸಿದರೆ ದೇವರನ್ನು ಕಾಣಲು ಸಾಧ್ಯ ಎಂದರು.

ಸದಲಗಾದ ಶೃದ್ಧಾನಂದ ಸ್ವಾಮೀಜಿ ಹಾಗೂ ಜಾಲಿಹಾಳ ನವಿಲಾಸರಾವ್‌ ಮಹಾರಾಜರು ಮಾತನಾಡಿ, ಮಾನವ ಜನ್ಮ ಶ್ರೇಷ್ಠವಾದದ್ದು ಹಾನಿ ಮಾಡಿಕೊಳ್ಳದೇ ಸಾಧ್ಯವಾದಷ್ಟು ಸಮಯವನ್ನು ಪಾರಮಾರ್ಥಿಕತೆ ಕಡೆಗೆ ಹೋದರೆ ಮನಸ್ಸು ಶುದ್ಧಗೊಂಡು ಸುಂದರ ಜೀವನ ಕಾಣಲು ಸಾಧ್ಯ ಎಂದರು. 

ಬಾಲಗಾಂವ-ಕಾತ್ರಾಳ ಗುರುದೇವ ಆಶ್ರಮದ  ಮೃತಾನಂದ ಶ್ರೀಗಳು ಮಾತನಾಡಿ, ಶರೀರ ಸದೃಢಕ್ಕೆ ಪ್ರತಿ ದಿನ ಯೋಗ, ಧ್ಯಾನ, ಅವಶ್ಯ. ಆತ್ಮ ಶುದ್ಧೀಕರಣಕ್ಕೆ ಸಂತ-ಮಹಂತ ಹಾಗೂ ಸತ್ಪುರುಷರ ಹಿತವಚನ ಆಲನೆ-ಪಾಲನೆ ಹಾಗೂ ಸತ್ಸಂಗದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಇದರಿಂದ ನೆಮ್ಮದಿಯ ಜೀವನ ನಡೆಸಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಮದಿಯ ಗಾಯತ್ರಿ ಕಂಚಗಾರ ಹಾಗೂ ಸಂಗಡಿಗ ಕಲಾವಿದರು ಭಕ್ತಿ ಗೀತೆ ಹಾಡಿದರು. ಜಾಲಿಹಾಳ ನವಿಲಾಸರಾವ್‌ ಮಹಾರಾಜರು ಸೇರಿದಂತೆ ಬಾಲಗಾಂವ, ಬೋರ್ಗಿ, ಆಕಳವಾಡಿ, ಹಳ್ಳಿ, ಉಮದಿ, ಸೊನ್ನಲಗಿ, ಸುಸಲಾದಿ, ಕಾತ್ರಾಳ, ಜಿಗಜೇವಣಿ, ಇಂಚಗೇರಿ, ದೇವರ ನಿಂಬರಗಿ, ಲಮಾನಟ್ಟಿ ಸೇರಿದಂತೆ ಭಕ್ತರು ಇದ್ದರು. ಕಾಶೀನಾಥ ಬಿರಾದಾರ ನಿರೂಪಿಸಿದರು. ಸಿದ್ದಣ್ಣ ಕುಂಬಾರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next