Advertisement

Sathya Sai Lok Seva Trust ಕಾರ್ಯದರ್ಶಿ ನಾರಾಯಣ ರಾವ್‌ ನಿಧನ

11:34 PM Jan 09, 2024 | Team Udayavani |

ಚಿಕ್ಕಬಳ್ಳಾಪುರ: ಗುರುಕುಲ ಮಾದರಿಯ ಶಿಕ್ಷಣಕ್ಕೆ ಹೆಸರಾದ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಯನ್ನು 33 ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ. ನಾರಾಯಣ ರಾವ್‌ ( 94)ಅವರು ನಿಧನ ಹೊಂದಿದ್ದಾರೆ.

Advertisement

ದಕ್ಷಿಣ ಕನ್ನಡದ ಶಿಕ್ಷಣ ತಜ್ಞ ಮಡಿಯಾಲ ನಾರಾಯಣ ಭಟ್ಟರ ಜತೆಗೂಡಿ ಲೋಕ ಸೇವಾ ಶಿಕ್ಷಣ ಸಂಸ್ಥೆಯನ್ನು ಕಟ್ಟಿದ್ದ ನಾರಾಯಣ ರಾಯರು ಭಗವಾನ್‌ ಶ್ರೀ ಸತ್ಯಸಾಯಿ ಬಾಬಾ ಅವರ ಪರಮ ಭಕ್ತರಾಗಿದ್ದು, ಅವರ ಅಣತಿಯಂತೆ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸಿದರು. ಅನಂತರ ಸದ್ಗುರು ಶ್ರೀ ಮಧುಸೂದನ ಸಾಯಿಯವರ ಮಾರ್ಗದರ್ಶನದಲ್ಲಿ ಮುದ್ದೇನಹಳ್ಳಿಯ ಸಂಸ್ಥೆಯನ್ನು ಹೊಸ ಆಯಾಮದತ್ತ ಕೊಂಡೊಯ್ಯುವಲ್ಲಿ ಯಶ ಸಾಧಿಸಿದ್ದರು.

ದಕ್ಷಿಣ ಕನ್ನಡದ ಅಳಿಕೆಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾಗಿ 1953ರಿಂದ 1965ರ ವರೆಗೆ ಸೇವೆ ಸಲ್ಲಿಸಿದರು. ಅನಂತರ ಅದು ಪ್ರೌಢ ಶಾಲೆ ಆದಾಗ ಮುಖ್ಯೋಪಾಧ್ಯಾಯರಾಗಿ 1973ರ ವರೆಗೆ ಸೇವೆ ಸಲ್ಲಿಸಿದರು. ಸತ್ಯ ಸಾಯಿ ಲೋಕ ಸೇವಾ ಕಿರಿಯ ಕಾಲೇಜು ಆರಂಭವಾದಾಗ ಅದರ ಪ್ರಾಂಶುಪಾಲರಾಗಿ 35 ವರ್ಷ ಸೇವೆ ಸಲ್ಲಿಸಿದ್ದರು.ಬಳಿಕ ಮುದ್ದೇನಹಳ್ಳಿ ಸಂಸ್ಥೆಯ ಕಾರ್ಯದರ್ಶಿಯಾಗಿ ಆಡಳಿತ ನಡೆಸಿದ್ದರು.

ವೃತ್ತಿ ಬದುಕಿನಲ್ಲಿ ಸದಾ ಶಿಸ್ತಿನ ಜೀವನ ನಡೆಸಿದ ನಾರಾಯಣ ರಾವ್‌, ಶೈಕ್ಷಣಿಕ ಕ್ಷೇತ್ರದ ಸೇವೆಗಾಗಿ ಕರ್ನಾಟಕ ಸರಕಾರದ ರಾಜ್ಯ ಶಿಕ್ಷಕ ಪುರಸ್ಕಾರ (1980), ಕೇಂದ್ರ ಸರಕಾರದ ಉತ್ತಮ ಶಿಕ್ಷಕ ಪುರಸ್ಕಾರ (1983), ಎನ್‌ಸಿಆರ್‌ಟಿಯ ಸಂಶೋಧನ ಪ್ರಬಂಧಕ್ಕೆ ರಾಷ್ಟ್ರೀಯ ಪುರಸ್ಕಾರ (1985) ವನ್ನು ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next