Advertisement

‘ಪೆಟ್ರೋಮ್ಯಾಕ್ಸ್’ ಟ್ರೇಲರ್ ನಲ್ಲಿ ಡಬಲ್ ಫನ್

03:04 PM Jul 09, 2022 | Team Udayavani |

ನೀನಾಸಂ ಸತೀಶ್‌ ನಾಯಕರಾಗಿರುವ “ಡಿಯರ್‌ ವಿಕ್ರಂ’ ಚಿತ್ರ ಇತ್ತೀಚೆಗಷ್ಟೆ ಓಟಿಟಿಯಲ್ಲಿ ಬಿಡುಗಡೆಯಾಗಿರುವುದು ನಿಮಗೆ ಗೊತ್ತಿರಬಹುದು. ಈಗ ಅವರ ಮತ್ತೂಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಅದು “ಪೆಟ್ರೋಮ್ಯಾಕ್ಸ್‌’.

Advertisement

ವಿಜಯ ಪ್ರಸಾದ್‌ ನಿರ್ದೇಶನದ ಈ ಚಿತ್ರ ಜುಲೈ 15ರಂದು ತೆರೆಕಾಣುತ್ತಿದೆ. ಈಗ ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ.

ಟ್ರೇಲರ್‌ನಲ್ಲಿ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿರುವ ಹರಿಪ್ರಿಯಾ- ಸತೀಶ್‌ ಪಡ್ಡೆಗಳ ನಿದ್ದೆಗೆಡಿಸಿದ್ದಾರೆ. ಹಾಗಂತ ಟ್ರೇಲರ್‌ ಅಷ್ಟಕ್ಕೇ ಸೀಮಿತವಾಗಿಲ್ಲ. ಅದರಾಚೆಗಿನ ಒಂದೆರಡು ಗಂಭೀರ ಡೈಲಾಗ್‌ಗಳ ಮೂಲಕ ಸಿನಿಮಾದೊಳಗೊಂದು ಗಟ್ಟಿಕಥೆ ಇದೆ ಎಂಬುದನ್ನು ತೋರಿಸಿಕೊಟ್ಟಿದೆ. ಜೊತೆಗೆ ಪಡ್ಡೆಗಳಿಗೆ ಇಷ್ಟವಾಗುವ “ಡೈಲಾಗ್‌’ಗಳನ್ನು ಸೇರಿಸಲಾಗಿದೆ.

ಇದನ್ನೂ ಓದಿ:ವಿರಾಟ್, ಜಡ್ಡು, ಪಂತ್, ಬುಮ್ರಾ ವಾಪಾಸ್: ಇಂದಿನ ಪಂದ್ಯದಲ್ಲಿ ಯಾರಿಗೆ ಸಿಗಲಿದೆ ಸ್ಥಾನ?

ಮೇಲ್ನೋಟಕ್ಕೆ ಫನ್ ಎಂಟರ್‌ಟೈನರ್‌ ರೀತಿ ಕಾಣುವ “ಪೆಟ್ರೋಮ್ಯಾಕ್ಸ್‌’ನೊಳಗಡೆ ಏನಿದೆ ಎಂದು ನೋಡಲು ಇನ್ನು ಒಂದು ವಾರವಷ್ಟೇ ಬಾಕಿ ಸದ್ಯ ಬಿಡುಗಡೆಯಾಗಿರುವ ಟ್ರೇಲರ್‌, ಚಿತ್ರಕ್ಕೆ ಮೈಲೇಜ್‌ ನೀಡಲಿದೆ.

Advertisement

ಸತೀಶ್‌ ನೀನಾಸಂ, ವಿಜಯ ಪ್ರಸಾದ್‌ ಹಾಗೂ ಸುಧಿ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾಕ್ಕೆ ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next