ನವದೆಹಲಿ: ಭೂಮಿಯ ತಾಪಮಾನ ಏರಿಕೆ ಜಾಗತಿಕ ರಾಷ್ಟ್ರಗಳಲ್ಲಿ ಕಾಳಜಿಯ ವಿಚಾರವಾಗಿರುವ ನಡುವೆಯೇ, ಈ ತಾಪಮಾನ ಏರಿಕೆಯಿಂದಾಗಿ ಭೂಮಿಯ ಕೆಳ ಕಕ್ಷೆಯಲ್ಲಿರುವ ಉಪಗ್ರಹಗಳು ಸಮಸ್ಯೆಗೆ ಸಿಲುಕಲಿವೆ ಎನ್ನುವ ವರದಿ ಬಹಿರಂಗಗೊಂಡಿದೆ.
ಸ್ಪೇಸ್‌ವೆದರ್ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಈ ವಿಚಾರದ ಬಗ್ಗೆ ಆತಂಕ ವ್ಯಕ್ತವಾಗಿದೆ. ಹೌದು, ಆಧುನಿಕ ಜೀವನದ ಬೆನ್ನತ್ತಿರುವ ಮನುಷ್ಯ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರವನ್ನು ಹಾಳುಗೆಡವುತ್ತಿದ್ದು, ಇದರ ಪ್ರತಿಫಲವಾಗಿ ತಾಪಮಾನ ಏರಿಕೆಯಾಗುತ್ತಿದೆ ಎನ್ನುವುದು ನಮಗೆಲ್ಲ ತಿಳಿದೇ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಜಾಗತಿಕ ಪರಿಹಾರ ಪ್ರಯತ್ನಗಳನ್ನೂ ಕೈಗೊಳ್ಳಲಾಗುತ್ತಿದೆ. ಇವೆಲ್ಲದರ ನಡುವೆ ಬಹಿರಂಗಗೊಂಡಿರುವ ವಿಚಾರವೆಂದರೆ, ಈ ಬಾರಿ ತಾಪಮಾನ ಮನುಷ್ಯನಿಂದಲ್ಲ, ಬದಲು ಸೂರ್ಯ ಗ್ರಹದಿಂದಾಗಿ ಏರಿಕೆಯಾಗುತ್ತಿದ್ದು, ಇದಕ್ಕೆ ಮಾನವನಿರ್ಮಿತ ಉಪಗ್ರಹಗಳು ಬಲಿಯಾಗಲಿವೆ.
ಸ್ಪೇಸ್‌ವೆದರ್ ವರದಿಗಳ ಪ್ರಕಾರ, ಸೂರ್ಯನಿಂದ ಬಿಡುಗಡೆಯಾಗುತ್ತಿರುವ ತೀವ್ರತರದ ಸೌರ ಜ್ವಾಲೆಗಳು ಇತರ ಗ್ರಹಗಳ ಕಾಂತೀಯ ಕ್ಷೇತ್ರಗಳನ್ನು ಪ್ರವೇಶಿಸುವ ಮೂಲಕ ತೀವ್ರತಾಪಮಾನದ ಬಿರುಗಾಳಿಯನ್ನು ಸೃಷ್ಟಿಸುತ್ತವೆ. ಅದರಿಂದ ಗ್ರಹದ ಮೇಲ್ಮೆ„ನ ತಾಪಮಾನ ಹೆಚ್ಚಾಗಲಿದೆ.
ಈಗ ಭೂಮಿಯ ಕಾಂತಕ್ಷೇತ್ರವನ್ನೂ ಸೂರ್ಯಜ್ವಾಲೆಗಳು ಸಮೀಪಿಸಿರುವುದರಿಂದ ಭೂಕಾಂತಿಯ ಬಿರುಗಾಳಿ ಹೆಚ್ಚಿದ್ದು, ಅದರ ಕಣಗಳಿಂದಾಗಿ ಭೂಮಿಯ ಕಕ್ಷೆಯಲ್ಲಿರುವ ಉಪಗ್ರಹಗಳ ಕಾರ್ಯಾಚರಣೆಗೆ ಅಡ್ಡಿಯಾಗಲಿದೆ. ಪರಿಣಾಮ ತಾಂತ್ರಿಕ ಮತ್ತು ಅಯಸ್ಕಾಂತೀಯ ಆಧಾರಿತ ತಂತ್ರಜ್ಞಾನ ಬಳಕೆಗೆ ತೊಡಕಾಗಲಿದೆ ಎಂದು ವರದಿ ತಿಳಿಸಿದೆ.
ಈಗಾಗಲೇ ಮನುಷ್ಯ ಎಲ್ಲದಕ್ಕೂ ಉಪಗ್ರಹಗಳನ್ನೇ ಅವಲಂಬಿಸುವಂತಾಗಿದೆ. ಬಹುಪಾಲು ತಂತ್ರಜ್ಞಾನದ ಮೂಲವಾಗಿ ಉಪಗ್ರಹಗಳು ಕಾರ್ಯನಿರ್ವಹಿಸುತ್ತಿವೆ. ಈ ನಡುವೆ ಭೂಮಿಯ ತಾಪಮಾನ ಏರಿಕೆಯಿಂದಾಗಿ ಅವುಗಳೂ ಸಂಕಷ್ಟಕ್ಕೆ ಸಿಲುಕುವಂತಾದರೆ ಮನುಷ್ಯ ತಂತ್ರಜ್ಞಾನದ ಮಹಾಪತನಕ್ಕೆ ಸಾಕ್ಷಿಯಾಗಬೇಕಾಗುತ್ತದೆ.