ಜಗತ್ತು ಇಂದು ಚಿಕ್ಕ ಹಳ್ಳಿಯಾಗಿದ್ದರೆ ಅದಕ್ಕೆ ಒಂದು ದೊಡ್ಡ ಕಾರಣ ಉಪಗ್ರಹಗಳು! ಮೊಬೈಲ್, ಟಿವಿ, ಜಿಪಿಎಸ್ ಹೀಗೆ ಹಲವು ಸಂಪರ್ಕದ ಸಾಧ್ಯತೆಗಳು ದೊಡ್ಡ ಮಟ್ಟದಲ್ಲಿ ಮನುಕುಲವನ್ನು ತಲುಪಿದ್ದು ಉಪಗ್ರಹಗಳ ಕಾರಣದಿಂದ. ಆದರೆ, ಅವುಗಳ ಉಪಯೋಗ ಕೇವಲ ಇಷ್ಟಕ್ಕೆ ಸೀಮಿತವಲ್ಲ. ಬೆಳೆಯುತ್ತಿರುವ ಜನಸಂಖ್ಯೆ, ಕಾಡು ನಾಶ, ಪರಿಸರ ಮಾಲಿನ್ಯ ಮುಂತಾದ ಕಾರಣಗಳಿಂದ ಕುಡಿಯುವ ಮತ್ತು ಸಾಗುವಳಿಗೆ ಬೇಕಿರುವ ನೀರಿಗಾಗಿ ಹಾಹಾಕಾರ ಏರ್ಪಡಬಹುದಾದ ಮುಂದಿನ ದಿನಗಳಲ್ಲಿ ಉಪಗ್ರಹಗಳ ನೆರವಿನಿಂದ ಒಂದು ದಿಟವಾದ ಪರಿಹಾರ ಪಡೆಯಬಹುದು. ಹೇಗೆ ಅಂತೀರಾ? ಹಾಗಿದ್ರೆ ಈ ಬಾರಿಯ “ಅರಿಮೆ ಮುನ್ನೋಟ ಮಾತುಕತೆ’ಯಲ್ಲಿ ನೀವಿರಬೇಕು. ಇಸ್ರೋದಲ್ಲಿ ಹಲವಾರು ವರುಷ ಕೆಲಸ ಮಾಡಿರುವ ಕನ್ನಡಿಗ ಸಿ.ಜೆ. ಜಗದೀಶ್ ಅವರು ಈ ವಿಷಯದತ್ತ ಬೆಳಕು ಚೆಲ್ಲುವ ಮಾತುಕತೆಯನ್ನು ನಡೆಸಿಕೊಡಲಿ¨ªಾರೆ.
ಯಾವಾಗ?: ಸೆ.30, ಭಾನುವಾರ, ಬೆ.11.30
ಎಲ್ಲಿ?: ಮುನ್ನೋಟ, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿ.ವಿ.ಜಿ. ರಸ್ತೆ, ಬಸವನಗುಡಿ