Advertisement

ಇರಾನ್‌ ನ್ಯೂಕ್ಲಿಯರ್‌ ಸ್ಥಾವರ ಮತ್ತೆ ಆರಂಭ

01:04 AM Oct 29, 2020 | mahesh |

ದುಬೈ: ಅಮೆರಿಕ ಚುನಾವಣೆ ಅಂತಿಮ ಹಂತ ತಲುಪುತ್ತಿದ್ದಂತೆ, ಡೊನಾಲ್ಡ್‌ ಟ್ರಂಪ್‌ ಅವರ ಬದ್ಧವೈರಿ ಇರಾನ್‌ ನ್ಯೂಕ್ಲಿಯರ್‌ ಯೋಜನಾ ಕಾಮಗಾರಿ ಆರಂಭಿಸಿದೆ. ಟೆಹ್ರಾನ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ “ಭೂಗತ ಸುಧಾರಿತ ಕೇಂದ್ರಾಪಗಾಮಿ ಸ್ಥಾವರ’ದ ಉಪಗ್ರಹ ಚಿತ್ರಗಳನ್ನು ವಿಶ್ವಸಂಸ್ಥೆಯ ನ್ಯೂಕ್ಲಿಯರ್‌ ಏಜೆನ್ಸಿ ಬಹಿರಂಗಪಡಿಸಿದೆ.

Advertisement

ದಕ್ಷಿಣ ನಟಾಂಝ್ ದಿಕ್ಕಿನಲ್ಲಿ ಇರಾನ್‌ ಆಗಸ್ಟ್‌ನಿಂದಲೇ ರಸ್ತೆ ಕಾಮಗಾರಿ ಆರಂಭಿಸಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಉಪಗ್ರಹದ ಚಿತ್ರಗಳಲ್ಲಿ ಪ್ಲಾಂಟ್‌ ನಿರ್ಮಾಣಕ್ಕೆ ಭೂಮಿ ಅಗೆದಿರುವ ಮತ್ತು ಭದ್ರತಾ ಪಡೆಗೆ ಭಾರೀ ಸೌಲಭ್ಯ ನಿರ್ಮಿಸಿರುವ ನೋಟಗಳು ಅತ್ಯಂತ ಸ್ಪಷ್ಟವಾಗಿವೆ. ಇರಾನ್‌, ರಷ್ಯಾದ ಜತೆಗೂಡಿ ಟ್ರಂಪ್‌ರನ್ನು ಹೇಗಾದರೂ ಮಾಡಿ ಚುನಾವಣೆಯಲ್ಲಿ ಸೋಲಿಸಬೇಕೆಂಬ ಜಿದ್ದಿನಲ್ಲಿದೆ. ಇವೆಲ್ಲ ದರ ನಡುವೆ ಅಮೆರಿಕದಿಂದ ಹಲವು ನಿರ್ಬಂಧ ಕ್ಕೊಳಪಟ್ಟ ಇರಾನ್‌ಗೆ ಡೆಮಾಕ್ರಾಟ್‌ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್‌ ಬಹಿರಂಗ ಬೆಂಬಲ ಸೂಚಿಸಿದ್ದಾರೆ. ಒಂದು ವೇಳೆ ತಾನು ಆಯ್ಕೆಯಾದರೆ, ಇರಾನ್‌ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದಾಗಿ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next