Advertisement

ಸೆಪ್ಟೆಂಬರ್‌ಗೆ ಪಾಲಿಕೆ ಶಾಲೆಗಳಲ್ಲಿ ಸ್ಯಾಟಲೈಟ್‌ ಶಿಕ್ಷಣ!

07:25 AM May 11, 2019 | Lakshmi GovindaRaj |

ಬೆಂಗಳೂರು: ಸೆಪ್ಟೆಂಬರ್‌ ವೇಳೆಗೆ ಬಿಬಿಎಂಪಿ ಶಾಲೆಗಳಲ್ಲಿ ಸ್ಯಾಟಲೈಟ್‌ ಶಿಕ್ಷಣಕ್ಕೆ ಅಗತ್ಯವಿರುವ ಡಿಜಿಟಲ್‌ ಉಪಕರಣಗಳನ್ನು ಬಿಬಿಎಂಪಿ ಶಾಲೆ, ಕಾಲೇಜುಗಳಲ್ಲಿ ಅಳವಡಿಸುವಂತೆ ರೋಶಿನಿ ಯೋಜನೆ ಅನುಷ್ಠಾನ ಜವಾಬ್ದಾರಿ ವಹಿಕೊಂಡಿರುವ ಅಧಿಕಾರಿಗಳು ಹಾಗೂ ಟೆಕ್‌ ಅವಾಂತ ಗಾರ್ಡ್‌ ಸಂಸ್ಥೆಗೆ ಬಿಬಿಎಂಪಿ ಆಯುಕ್ತರು ಸೂಚಿಸಿದ್ದಾರೆ.

Advertisement

ಮೈಕ್ರೋಸಾಫ್ಟ್, ಟೆಕ್‌ ಅವಾಂತ ಸಂಸ್ಥೆ ಸಹಯೋಗದಲ್ಲಿ ಬಿಬಿಎಂಪಿಯ 156 ಶಾಲೆಗಳಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಸೆಟಲೈಟ್‌ ಶಿಕ್ಷಣ ವ್ಯವಸ್ಥೆ ಜಾರಿಗೆ ಅನುಷ್ಠಾನ ಪ್ರಗತಿಯ ಕುರಿತು ಮೇಯರ್‌ ಗಂಗಾಂಬಿಕೆ ನೇತೃತ್ವದಲ್ಲಿ ಸಭೆ ನಡೆಸಿದ ಅವರು, ಯೋಜನೆಯನ್ನು ಶೀಘ್ರದಲ್ಲಿ ಕಾರ್ಯಗತಗೊಳಿಸಿ ಮಕ್ಕಳಿಗೆ ಆಧುನಿಕ ಶಿಕ್ಷಣ ದೊರೆಯುವಂತೆ ಮಾಡಿ ಎಂದು ನಿರ್ದೇಶನ ನೀಡಿದ್ದಾರೆ.

ಸಭೆಯ ನಂತರ ಮಾತನಾಡಿದ ಮಂಜುನಾಥ ಪ್ರಸಾದ್‌, ರೋಶಿನಿ ಯೋಜನೆ ಜಾರಿಯ ಪ್ರಗತಿ ಕುಂಠಿತವಾಗಿದ್ದು, ಯೋಜನೆಗೆ ವೇಗ ನೀಡುವ ಉದ್ದೇಶದಿಂದ ಸಭೆ ನಡೆಸಲಾಗಿದೆ. ಅದರಂತೆ ಸೆಪ್ಟೆಂಬರ್‌ ವೇಳೆಗೆ 156 ಶಾಲೆ ಮತ್ತು ಕಾಲೇಜಿನಲ್ಲಿನ 1 ಸಾವಿರ ತರಗತಿಗಳಿಗೆ 64 ಇಂಚಿನ ಟಿವಿ ಅವಳಡಿಕೆ ಹಾಗೂ ಸ್ಯಾಟಲೈಟ್‌ ಶೀಕ್ಷಣಕ್ಕೆ ಅಗತ್ಯ ಡಿಜಿಟಲ್‌ ಉಕರಣಗಳ ಅಳವಡಿಕೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು.

ಡಿಜಿಟಲ್‌ ಉಪಕರಣ ಅಳವಡಿಕೆಗೆ ಕೆಲವೆಡೆಗಳಲ್ಲಿ ತರಗತಿ ದುರಸ್ತಿ, ಕಟ್ಟಡಗಳಿಗೆ ಬಣ್ಣ ಬಳಿಯುವ ಕೆಲಸಗಳು ಬಾಕಿಯಿದ್ದು, ಶಾಲೆಗಳ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಶಾಲೆಯಲ್ಲಿ ಎಷ್ಟು ತರಗತಿಗಳನ್ನು ದುರಸ್ತಿ ಮಾಡಬೇಕು ಎಂಬ ಪಟ್ಟಿ ಮಾಡಲಾಗಿದ್ದು, ಜುಲೈ ತಿಂಗಳೊಳಗೆ ದುರಸ್ತಿ ಕಾರ್ಯ ಮತ್ತು ಬಣ್ಣ ಬಳಿಯುವುದು ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

40 ತರಗತಿಗಳ ನಿರ್ಮಾಣ: ಪಾಲಿಕೆಯ ಪ್ರತಿ ಶಾಲೆಯಲ್ಲಿ ತಲಾ 1600 ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅನುಕೂಲವಾಗುವಂತೆ ತಲಾ 40 ಕೊಠಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಜತೆಗೆ 3 ಶಾಲೆಗಳಿಗೆ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಅದಕ್ಕೆ ತಗಲುವ ವೆಚ್ಚವನ್ನು ಮೈಕ್ರೋಸಾಫ್ಟ್‌ ಸಂಸ್ಥೆಯೇ ಭರಿಸಲಿದೆ ಎಂದರು.

Advertisement

ಖಾಸಗಿ ಶಿಕ್ಷಕರಿಂದಲೂ ಪಾಠ: ಸ್ಯಾಟಲೈಟ್‌ ಶಿಕ್ಷಣ ನೀಡುವ ಕುರಿತು ಬಿಬಿಎಂಪಿ ಶಾಲೆಗಳಲ್ಲಿ ಎಲ್ಲ ಶಿಕ್ಷಕರಿಗೂ ತರಬೇತಿ ನೀಡಲಾಗುವುದು. ಜತೆಗೆ ಈಗಾಗಲೆ ಸ್ಯಾಟಲೈಟ್‌ ಶಿಕ್ಷಣ ವ್ಯವಸ್ಥೆಯಿರುವ ಶಾಲೆಗಳಲ್ಲಿ ಖಾಸಗಿ ಶಾಲೆಗಳಲ್ಲಿನ ಶಿಕ್ಷಕರನ್ನು ಕರೆತಂದು ಪಾಠ ಮಾಡಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ಟ್ಯಾಬ್‌ ನೀಡಲಾಗುತ್ತಿದ್ದು, ಅದರ ಮೂಲಕವೇ ಪಠ್ಯ ಮತ್ತು ವ್ಯಾಸಂಗದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಪ್ರತಿ ತಿಂಗಳು ಪರಿಶೀಲನೆ: 2020-21ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಎಲ್ಲ ಶಾಲೆಗಳಲ್ಲೂ ಸ್ಯಾಟಲೈಟ್‌ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸುವ ಗುರಿ ಹೊಂದಿದ್ದು, ಪ್ರತಿ ತಿಂಗಳು ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಮತ್ತು ಪ್ರತಿ 3 ತಿಂಗಳಿಗೊಮ್ಮೆ ಮೇಯರ್‌ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು. ಆಮೂಲಕ ಯೋಜನೆ ಜಾರಿಗೆ ವೇಗ ನೀಡಲಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next