Advertisement

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

01:43 AM Jan 10, 2025 | Team Udayavani |

ಹೊಸದಿಲ್ಲಿ: ಬಾಹ್ಯಾಕಾಶದಲ್ಲಿ 2 ಉಪಗ್ರಹಗಳನ್ನು ಜೋಡಿಸುವ (ಸ್ಪೇಡ್‌ಎಕ್ಸ್‌ ಮಿಷನ್‌) ಪ್ರಕ್ರಿಯೆಯಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಶುಕ್ರವಾರದ ಹೊತ್ತಿಗೆ ಡಾಕಿಂಗ್‌ ಪ್ರಕ್ರಿಯೆಯ ಆರಂಭಿಕ ಹಂತ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಇಸ್ರೋ ಹೇಳಿದೆ. ಬಾಹ್ಯಾಕಾಶದಲ್ಲಿ ಗಗನನೌಕೆಯನ್ನು ನಿಧಾನವಾಗಿ ಚಲಿಸುವಂತೆ ಮಾಡಲಾಗುತ್ತಿದ್ದು, ಎರಡೂ ಉಪಗ್ರಹಗಳನ್ನು ನಿಧಾನವಾಗಿ ಹತ್ತಿರಕ್ಕೆ ತರಲಾಗುತ್ತಿದೆ. ತಾಂತ್ರಿಕ ತೊಂದರೆಯಿದಾಗಿ ಇಸ್ರೋ 2 ಬಾರಿ ಡಾಕಿಂಗ್‌ ಪ್ರಕ್ರಿಯೆಯನ್ನು ಮುಂದೂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next