Advertisement

ಅರಣ್ಯ ಭೂಮಿ ಒತ್ತುವರಿಗೆ ಉಪಗ್ರಹ ನಿಗಾ :ತಂತ್ರಜ್ಞಾನದ ಮೂಲಕ ಅರಣ್ಯ ರಕ್ಷಣೆಗೆ ಮುಂದಾದ ಇಲಾಖೆ

02:04 AM Jul 05, 2021 | Team Udayavani |

ಶಿವಮೊಗ್ಗ : ಅರಣ್ಯ ಒತ್ತುವರಿ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲಾಖೆ ಈಗ ತಂತ್ರ ಜ್ಞಾನದ ಮೊರೆ ಹೊಕ್ಕಿದೆ. ದೇಶದಲ್ಲೇ ಮೊದಲ ಬಾರಿಗೆ ಉಪಗ್ರಹ ಸಹಾಯದಿಂದ ಅರಣ್ಯ ಭೂಮಿ ರಕ್ಷಣೆಗೆ ಮುಂದಾಗಿದೆ.

Advertisement

ರಾಜ್ಯದಲ್ಲಿ ಅರಣ್ಯಭೂಮಿ ಕಡಿಮೆಯಾಗುತ್ತಿದ್ದು, ಪ್ರಸ್ತುತ 41,590 ಚದರ ಕಿ.ಮೀ. ಅರಣ್ಯವಿದೆ. ರಾಜ್ಯದ ಭೂ ಪ್ರದೇಶದ ಶೇ. 21.69ರಷ್ಟು ಮಾತ್ರ ಅರಣ್ಯವಿದೆ. ಪಶ್ಚಿಮ ಘಟ್ಟವನ್ನು ಒಳಗೊಂಡ ಜಿಲ್ಲೆಗಳಲ್ಲಿ ಬಿಟ್ಟರೆ ಉಳಿದೆಡೆ ಅತೀ ಕಡಿಮೆ ಅರಣ್ಯವಿದೆ.

ಅತೀ ಕಡಿಮೆ ಅರಣ್ಯ ಭೂಮಿ ಹೊಂದಿರುವ ಜಿಲ್ಲೆ ವಿಜಯಪುರ, ಇಲ್ಲಿ ಶೇ. 0.22ರಷ್ಟು ಮಾತ್ರ ಅರಣ್ಯವಿದೆ. ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಶೇ. 122.51ರಷ್ಟು ಅರಣ್ಯ ಪ್ರದೇಶವಿದೆ. ನಗರ ವಿಸ್ತರಣೆ, ಬಗರ್‌ಹುಕುಂ, ವಿವಿಧ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಅರಣ್ಯ ಭೂಮಿ ಪ್ರತೀ ವರ್ಷ ನಾಶವಾಗುತ್ತಲೇ ಇದೆ.

ಇದರೊಂದಿಗೆ ಒತ್ತುವರಿ ಸಮಸ್ಯೆಯೂ ಇದೆ. ಒತ್ತುವರಿ ಹೆಸರಿನಲ್ಲಿ ಲಕ್ಷಾಂತರ ಹೆಕ್ಟೇರ್‌ ಅರಣ್ಯ ನಾಶವಾಗಿದೆ. ಇದಕ್ಕೆಲ್ಲ ಕಡಿವಾಣ ಹಾಕಲು ಅರಣ್ಯ ಇಲಾಖೆ ಉಪಗ್ರಹ ತಂತ್ರಜ್ಞಾನದ ಮೊರೆ ಹೊಕ್ಕಿದೆ.

ಏನಿದು ಯೋಜನೆ?
ಕರ್ನಾಟಕ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ)ದಿಂದ ಉಪಗ್ರಹ ಚಿತ್ರ ಆಧಾರಿತ ಅರಣ್ಯ ಭೂಮಿ ನಕಾಶೆ ಸಿದ್ಧಪಡಿಸ ಲಾಗಿದ್ದು, ಅರಣ್ಯ ಭೂಮಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದರೆ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನೆಯಾಗಲಿದೆ. ಮಾಹಿತಿ ಆಧಾರದ ಮೇಲೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಮಾಡಿ ವರದಿ ಸಲ್ಲಿಸಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next